ಉಸಿರೇ.. ಉಸಿರೇ... ಸದ್ಯ ಈಗಾಗಲೇ ಹಲವಾರು ವಿಶೇಷತೆಗಳಿಂದ ಸದ್ದು ಮಾಡುತ್ತಾ ಪ್ರೇಕ್ಷಕರ ಕುತೂಹಲ ಮುಡಿಸುತ್ತಿರುವ ಚಿತ್ರ. ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ ಸಿ ಎಂ ವಿಜಯ್ ನಿರ್ದೇಶನದ "ಉಸಿರೇ ಉಸಿರೇ" ಚಿತ್ರಕ್ಕೆ ಕಿಚ್ಚ ಸುದೀಪ್ ಎಂಟ್ರಿಯಾಗುತ್ತಲೇ ಚಿತ್ರಕ್ಕೆ ಹೈ ವೋಲ್ಟೇಜ್ ಸಿಕ್ಕಿತ್ತು.
ಇದನ್ನೂ ಓದಿ: ಮರು ಜೀವ ಪಡೆಯಿತ್ತಿರೋ 2000 ವರ್ಷದ ಹುಣಸೆ ಮರ...!
ಸದ್ಯ ಈಗಾಗಲೇ "ಉಸಿರೇ ಉಸಿರೇ" ಚಿತ್ರವು ಟೀಸರ್ ಒಂದನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚು ಮಾಡಿದೆ.
ಇತ್ತೀಚೆಗೆ ಈ ಚಿತ್ರದ ಟೀಸರನ್ನು ಬಳ್ಳಾರಿ ಶ್ರೀ ರೇಣುಕಾ ಎಲ್ಲಮ್ಮ ಜಾತ್ರೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಸದ್ಗುರು ಜುಮಾರಿ ತಾತಾಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಅಂದು ಸಂಜೆ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಶ್ರೀ ಸುಬುದೇಂದ್ರ ತೀರ್ಥರು ಟೀಸರ್ ಬಿಡುಗಡೆ ಮಾಡಿ ಆಶೀರ್ವಾದಿಸಿದ್ದಾರೆ. ನಾಯಕ ರಾಜೀವ್, ನಾಯಕಿ ಶ್ರೀಜಿತ ಹಾಗೂ ನಿರ್ದೇಶಕ ಸಿ.ಎಂ.ವಿಜಯ್ ಮುಂತಾದ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಟೀಸರ್ ಬಿಡುಗಡೆಯಾಗಿ ಎರಡು ದಿನಗಳಲ್ಲಿ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿ, ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಈಗಾಗಲೇ ಟೀಸರ್ ನಲ್ಲಿರುವ ಸಂಗೀತ, ಹೀರೋ ಎಂಟ್ರಿ, ಆಲಿ ಹಾಗೂ ಬ್ರಹ್ಮಾನಂದಮ್ ಕಾಮಿಡಿ, ದೇವರಾಜ್ ರವರ ಪಾತ್ರ ಹಾಗೂ ಸಂಭಾಷಣೆ ಪ್ರೇಕ್ಷಕರ ಮನಸನ್ನು ದೋಚಿ ಒಂದೇ ದಿನದಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ.
"ಬಿಗ್ ಬಾಸ್" ಖ್ಯಾತಿಯ ರಾಜೀವ್ ಈ ಚಿತ್ರದ ನಾಯಕ. ಶ್ರೀಜಿತ ನಾಯಕಿ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಹಾಗೂ ಕಿಚ್ಚ ಸುದೀಪ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಚಂದ್ರನ ಅಂಗಳಕ್ಕಿಳಿಯಲು ಭಾರತದ ಸಿದ್ಧತೆ: ಬಾಹ್ಯಾಕಾಶ ಯೋಜನೆಗಳ ಸಾಕಾರಕ್ಕೆ ಹೊಸ ಹಾದಿ
ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಬಿ ಕೆ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ. ವಿವೇಕ್ ಚಕ್ರವರ್ತಿಯ ಸಂಗೀತವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ