ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಪುತ್ರಿ ಡೇಟಿಂಗ್!

Suhana Khan dating Agastya Nanda : ಬಾಲಿವುಡ್‌ನಲ್ಲಿ ಆಗಾಗ ಡೇಟಿಂಗ್‌ ಗಾಸಿಪ್‌ ಬಲು ಜೋರಾಗಿರುತ್ತದೆ. ಇದೀಗ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಜೊತೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

Written by - Chetana Devarmani | Last Updated : Jan 6, 2023, 11:11 PM IST
  • ಬಾಲಿವುಡ್‌ನಲ್ಲಿ ಆಗಾಗ ಡೇಟಿಂಗ್‌ ಗಾಸಿಪ್‌ ಬಲು ಜೋರಾಗಿರುತ್ತದೆ
  • ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಪುತ್ರಿ ಡೇಟಿಂಗ್!
  • ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಡೇಟಿಂಗ್ ಗಾಸಿಪ್‌
ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಪುತ್ರಿ ಡೇಟಿಂಗ್!  title=
ಸುಹಾನಾ ಮತ್ತು ಅಗಸ್ತ್ಯ

Suhana Khan dating Agastya Nanda : ಬಾಲಿವುಡ್‌ನಲ್ಲಿ ಆಗಾಗ ಡೇಟಿಂಗ್‌ ಗಾಸಿಪ್‌ ಬಲು ಜೋರಾಗಿರುತ್ತದೆ. ಇದೀಗ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಜೊತೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಬಿ-ಟೌನ್‌ನಲ್ಲಿ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಅವರ ಲವ್ವಿ ಡವ್ವಿ ವಿಚಾರ ವೈರಲ್‌ ಆಗುತ್ತಿದೆ. 

ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಕಪೂರ್ ಕುಟುಂಬದ ಕ್ರಿಸ್‌ಮಸ್ ಬ್ರಂಚ್‌ನಲ್ಲಿ ಸುಹಾನಾ ಕಾಣಿಸಿಕೊಂಡಾಗ ಅವರ ಸಂಬಂಧದ ವದಂತಿಗಳು ಪ್ರಾರಂಭವಾದವು.  

ಇದನ್ನೂ ಓದಿ : "ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್.. ಸಿಗರೇಟ್‌ನಿಂದ ಸುಡುತ್ತಿದ್ದ": ಮಾಜಿ ಗೆಳತಿಯ ಗಂಭೀರ ಆರೋಪ

ಸುಹಾನಾ ಮತ್ತು ಅಗಸ್ತ್ಯ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದಿ ಆರ್ಚೀಸ್ ಸೆಟ್‌ನ ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿವೆ ಎಂದು ವರದಿಯಾಗಿದೆ. ಕ್ರಿಸ್‌ಮಸ್ ಬ್ರಂಚ್‌ನಲ್ಲಿ ಅಗಸ್ತ್ಯ ಸುಹಾನಾ ಅವರನ್ನು ತನ್ನ 'Partner' ಎಂದು ಪರಿಚಯಿಸಿದರು ಎಂದು ಮೂಲಗಳು ಹೇಳಿವೆ. "ಅಗಸ್ತ್ಯ ಅವರು ಎಲ್ಲಾ ಕುಟುಂಬ ಸದಸ್ಯರಿಗೆ ಸುಹಾನಾ ಅವರನ್ನು ತಮ್ಮ ಸಂಗಾತಿ ಎಂದು ಪರಿಚಯಿಸಿದರು" ಎಂದು ಮೂಲಗಳು ತಿಳಿಸಿವೆ.

ಸುಹಾನಾ ಮತ್ತು ಅಗಸ್ತ್ಯ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ ಮುಂಬರುವ ಚಿತ್ರ 'ದಿ ಆರ್ಚೀಸ್' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಬಹುನಿರೀಕ್ಷಿತ ಚಿತ್ರವು ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಾಂಗ್ ರೈನಾ ಅವರೊಂದಿಗೆ ಸ್ಟಾರ್ ಕಿಡ್ಸ್‌ ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರವಾಗಿದೆ. ಟೈಗರ್ ಬೇಬಿ ಫಿಲ್ಮ್ಸ್, ಗ್ರಾಫಿಕ್ ಇಂಡಿಯಾ ಮತ್ತು ಆರ್ಚೀಸ್ ಕಾಮಿಕ್ಸ್ ಈ ಚಿತ್ರವನ್ನು ನಿರ್ಮಿಸಿವೆ. ಚಿತ್ರವು ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಕ್ರೇಜಿಸ್ಟಾರ್‌ ಮನೆಯಲ್ಲಿ ಕಿಚ್ಚ, ದಚ್ಚು.! ಎಲ್ಲೆಡೆ ವೈರಲ್‌ ಆದ ಸೆಲ್ಫಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News