ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಬ್ಯಾಂಕ್ ಜನಾರ್ದನ್

  Bank Janardhan: ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ನಿನ್ನೆ ಸಂಜೆ ಹೃದಯಾಘಾತವಾಗಿದ್ದು, ಸದ್ಯ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Written by - Savita M B | Last Updated : Sep 26, 2023, 01:02 PM IST
  • ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿದ್ದ ಬ್ಯಾಂಕ್ ಜನಾರ್ಧನ್
  • ಬ್ಯಾಂಕ್‌ ಜನಾರ್ಧನ್‌ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲು
ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಬ್ಯಾಂಕ್ ಜನಾರ್ದನ್ title=

Sandalwood News: ಬ್ಯಾಂಕ್ ಜನಾರ್ಧನ್ ಅವರು ಜನಿಸಿದ್ದು 1984  ಬೆಂಗಳೂರಿನಲ್ಲಿ. ಇವರು ತಮ್ಮ ವಿದ್ಯಾ ಭ್ಯಾಸವೆನ್ನೆಲ್ಲ ಮುಗಿಸಿದ್ದೂ ಬೆಂಗಳೂರಿನಲ್ಲಿ. ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿದ್ದ ಇವರು, ಹಲವಾರು ಕನ್ನಡ ಸಿನಿಮಾಗಳು ಹಾಗೂ ಟಿವಿ ಸೀರಿಯಲ್​ನಲ್ಲಿ ಹಾಸ್ಯ ನಟನಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು, ಕನ್ನಡ ಚಿತ್ರರಂಗದ ದೊಡ್ಡ ಹಾಸ್ಯ ನಟರಾದ, ಸಾದು ಕೋಕಿಲ, ಬುಲೆಟ್ ಪ್ರಕಾಶ್, ದೊಡ್ಡಣ್ಣ, ಹೀಗೆ ಹಲವಾರು ನಟರ ಜೊತೆ ಅಭಿನಹಿಸಿ ಕನ್ನಡ ಚಿತ್ರರಂಗದಲ್ಲಿ ಚಾಪುಮೂಡಿಸಿದ್ದಾರೆ.

ಇದನ್ನೂ ಓದಿ-ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ

ಬ್ಯಾಂಕ್ ಜನಾರ್ಧನ್ ಅವರಿಗೆ 1991ರಲ್ಲಿಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ನಂತರ ಅನೇಕ ಚಿತ್ರಗಳು, ದಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. 

60 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿ ತಮ್ಮದೇ ಆದ ಒಂದು ನಿರಂತರ ಹಾದಿಯಲ್ಲಿ ಬೆಳೆದಿದ್ದಾರೆ. ಸದ್ಯ ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಇದನ್ನೂ ಓದಿ-ಸಿನಿರಂಗಕ್ಕೆ ಮತ್ತಿಬ್ಬರು ಸ್ಟಾರ್‌ ಪುತ್ರಿಯರ ಆಗಮನ..ಯಾರವರು ಅಂತೀರಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News