ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ತಾಯಿ ಆಸ್ಪತ್ರೆಗೆ ದಾಖಲು

ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ಅವರನ್ನು ಉಪನಗರ ಖಾರ್‌ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

PTI | Updated: Nov 17, 2019 , 12:52 PM IST
ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ತಾಯಿ ಆಸ್ಪತ್ರೆಗೆ ದಾಖಲು
Photo courtesy: Twitter

ಮುಂಬೈ: ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ಅವರನ್ನು ಉಪನಗರ ಖಾರ್‌ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

'ಅವರನ್ನು ನವೆಂಬರ್ 14 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.ಅವರು ಐಸಿಯುನಲ್ಲಿದ್ದಾರೆ' ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಹಿಂದಿನ ದಿನ, ಡಿಂಪಲ್ ಅವರ ಮಗಳು ಟ್ವಿಂಕಲ್ ಮತ್ತು ಅಳಿಯ ಅಕ್ಷಯ್ ಕುಮಾರ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ನಂತರ ಡಿಂಪಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಈಗ ಡಿಂಪಲ್ ಕಪಾಡಿಯಾ ಚಲನಚಿತ್ರ ನಿರ್ಮಾಪಕ ಕ್ರಿಸ್ಟೋಫರ್ ನೋಲನ್ ಅವರ "ಟೆನೆಟ್" ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.