ಸಿನಿಮಾಗಾಗಿ ಒಂದು ಸಿಗರೇಟ್‌ ಸೇದುವುದನ್ನ ಕಲಿತ ಈ ನಟಿಗೆ ಅದೇ ಚಟವಾಗಿ ಕಾಡಿತ್ತು..!

Vidya Balan smoke addict : ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು. ವಿದ್ಯಾ ಸಿಲ್ಕ್ ಸ್ಮಿತಾ ಅವರ ಬಯೋ ಪಿಕ್ ʼದಿ ಡರ್ಟಿ ಪಿಕ್ಚರ್ʼ ನಲ್ಲಿ ನಟಿಸಿದ್ದರು. ಈ ಸಿನಿಮಾ ನಂತರ ನಟಿ ಧೂಮಪಾನಕ್ಕೆ ಅಡಿಕ್ಟ್‌ ಆಗಿದ್ದರು. ಹೇಗೆ ಗೊತ್ತೆ..?.. ಇಲ್ಲಿದೆ ವರದಿ..

Written by - Krishna N K | Last Updated : Apr 26, 2024, 08:54 PM IST
    • ಪಾತ್ರಕ್ಕೆ ತೂಕ ಬರುವ ನಿಟ್ಟಿನಲ್ಲಿ ಕಲಾವಿದರು ಎನನ್ನಾದರೂ ಮಾಡಲು ರೆಡಿ
    • ಕೆಲವೊಮ್ಮೆ ಅದೇ ಅವರ ಜೀವನದಲ್ಲಿ ಉಳಿದುಕೊಂಡು ಬಿಡುತ್ತದೆ.
    • ನಟಯೊಬ್ಬರು ಸಿನಿಮಾವೊಂದಲ್ಲಿ ಸಿಗರೇಟ್ ಸೇದಿ ಚಟ ಹತ್ತಿಸಿಕೊಂಡುಬಿಟ್ಟಿದ್ದರು.
ಸಿನಿಮಾಗಾಗಿ ಒಂದು ಸಿಗರೇಟ್‌ ಸೇದುವುದನ್ನ ಕಲಿತ ಈ ನಟಿಗೆ ಅದೇ ಚಟವಾಗಿ ಕಾಡಿತ್ತು..! title=

Vidya Balan: ಪಾತ್ರಕ್ಕೆ ತೂಕ ಬರುವ ನಿಟ್ಟಿನಲ್ಲಿ ಕಲಾವಿದರು ಎನನ್ನಾದರೂ ಮಾಡಲು ರೆಡಿಯಾಗಿರುತ್ತಾರೆ. ಕೆಲವೊಮ್ಮೆ ಅದೇ ಅವರ ಜೀವನದಲ್ಲಿ ಉಳಿದುಕೊಂಡು ಬಿಡುತ್ತದೆ. ಕೆಲವೊಮ್ಮೆ ದುಷ್ಚಟಗಳಿಗೂ ನಟ ನಟಿಯರು ಒಳಗಾಗಿರುವ ಉದಾರಹಣೆಗಳೂ ಸಹ ಇವೆ. ಅದೇ ರೀತಿ ಬಾಲಿವುಡ್ ನಟಯೊಬ್ಬರು ಸಿನಿಮಾವೊಂದಲ್ಲಿ ಸಿಗರೇಟ್ ಸೇದಿ ಚಟ ಹತ್ತಿಸಿಕೊಂಡುಬಿಟ್ಟಿದ್ದರು. ಯಾರು ಆ ನಟಿ.? ಬನ್ನಿ ತಿಳಿಯೋಣ…

ಬಿಟೌನ್‌ ಹಾಟ್‌ ಬೆಡಗಿ ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು. ವಿದ್ಯಾ ಸಿಲ್ಕ್ ಸ್ಮಿತಾ ಅವರ ಬಯೋ ಪಿಕ್ ʼದಿ ಡರ್ಟಿ ಪಿಕ್ಚರ್ʼ ನಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೇವಲ 30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಪೀಸ್ ನಲ್ಲಿ 100 ಕೋಟಿ ರೂ. ಗಳಿಸಿತು.

ಇದನ್ನೂ ಓದಿ:ಮತದಾನ ಮಾಡಿ ಹಕ್ಕು ಚಲಾಯಿಸಿದ ಸಿನಿರಂಗದ ತಾರೆಯರು!! ಪೋಟೋಸ್‌ ಇಲ್ಲಿವೆ

ʼದಿ ಡರ್ಟಿ ಪಿಕ್ಚರ್ʼ ನಲ್ಲಿ ವಿದ್ಯಾ ಸಿಗರೇಟ್ ಸೇದಬೇಕಾಗಿತ್ತು. ಈ ಚಿತ್ರದ ಸಾಕಷ್ಟು ದೃಶ್ಯಗಳಲ್ಲಿ ವಿದ್ಯಾ ಕೈಯಲ್ಲಿ ಸಿಗರೇಟ್ ಹಿಡಿದಿದ್ದರು. ಕಡೆಗೆ ಸಿನಿಮಾ ಮುಗಿದ ನಂತರವೂ ಸಹ ಸಿಗರೇಟ್ ಬಿಡದಷ್ಟು ನಟಿ ಧೂಮಪಾನಕ್ಕೆ ದಾಸರಾದರು. ಹೇಗೆಂದರೆ ಸಿಗರೇಟ್‌ ಇಲ್ಲದೆ ಲೈಫ್‌ ಇಲ್ಲ ಎನ್ನುವಂತಾಗಿದ್ದರು.

ಸ್ವತಃ ಸಂದರ್ಶನದಲ್ಲಿ ಒಂದರಲ್ಲಿ ವಿದ್ಯಾ ಪ್ರತಿದಿನ ತಾವು 2-3 ಸಿಗರೇಟ್ ಸೇರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಪಾತ್ರಕ್ಕಾಗಿ ಧೂಮಪಾನವನ್ನು ನಕಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಧೂಮಪಾನ ಮಾಡುವುದು ಶುರು ಮಾಡಿದೆ ಎಂದು ತಿಳಿಸಿದ್ದಾರೆ. ಸಧ್ಯ ಅವರು ಧೂಮಪಾನದಿಂದ ದೂರವಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News