Vijay Devarakonda: ಯುವತಿಯರ ವಿಚಿತ್ರ ಬೇಡಿಕೆಗೆ ಪ್ರತಿಕ್ರಿಯಿಸಿದ ಲೈಗರ್! ವಿಜಯ್‌ ಹೇಳಿದ್ದೇನು?

Vijay Devarakonda Fans Video: ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡಗೆ ದೊಡ್ಡ ಅಭಿಮಾನಿಗಳ ಬಳಗವೇ ಇದ್ದು, ಅವರಲ್ಲಿ ಇಬ್ಬರು ಮಹಿಳಾ ಫ್ಯಾನ್ಸ್‌ ತಮ್ಮ ನೆಚಿನ ಸ್ಟಾರ್‌ ನಟನಿಗೆ ವಿಚಿತ್ರ ಬೇಡಿಕೆಯೊಂದು ಇಟ್ಟಿದ್ದಾರೆ. ಅದಕ್ಕೆ ವಿಜಯ್‌ ಪ್ರತಿಕ್ರಿಯಿಸಿದ್ದಾರೆ. ಇಕ್ಕಿದೆ ಇದರ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Feb 19, 2024, 10:06 AM IST
  • ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ಆತನ ಅಭಿಮಾನಿಗಳಲ್ಲಿ, ಮಹಿಳಾ ಫ್ಯಾನ್ಸ್‌ ಸಂಖ್ಯೆಯೂ ಜಾಸ್ತಿನೇ ಆಗಿದೆ.
  • ಇತ್ತೀಚೆಗೆ ಇಬ್ಬರು ವಿದ್ಯಾರ್ಥಿನಿಯರು ಟಾಲಿವುಡ್‌ ಸ್ಟಾರ್‌ ನಟ ವಿಜಯ್ ದೇವರಕೊಂಡ ಗಮನ ಸೆಳೆಯಲು ಮಾಡಿರುವವೊಂದು ಅಚ್ಚರಿ ಮೂಡಿಸುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
  • ಹುಡುಗಿರ ವಿಡಿಯೋ ನೋಡಿದ ನೆಟ್ಟಿಗರು ನಿಮ್ಮ ವೀಡಿಯೊ ನೋಡಿ ನಿಜಕ್ಕೂ ವಿಜಯ್‌ ಕಾಮೆಂಟ್ ಮಾಡ್ತಾರಾ? ಅಷ್ಟೆಲ್ಲಾ ಸೀನ್ ಇದ್ಯಾ? ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
Vijay Devarakonda: ಯುವತಿಯರ ವಿಚಿತ್ರ ಬೇಡಿಕೆಗೆ ಪ್ರತಿಕ್ರಿಯಿಸಿದ ಲೈಗರ್! ವಿಜಯ್‌ ಹೇಳಿದ್ದೇನು? title=

Vijay Devarakonda Replied To Fans Question: ಇತ್ತೀಚಿನ ದಿನಗಳಲ್ಲಿ ಅದರಲ್ಲಂತೂ ಸೋಶಿಯಲ್ ಮೀಡಿಯಾ ಬಳಕೆ ದಿನದಿಂದ ದಿನಕ್ಕೆ ಹೆಚಾಗುತ್ತಿದ್ದಂತೆ ಸೆಲೆಬ್ರೆಟಿಗಳು ಫ್ಯಾನ್ಸ್‌ಗಳ ಜೊತೆ ಸಂಪರ್ಕದಲ್ಲಿರುವುದು ತುಂಬಾ ಸುಲಭವಾಗಿಬಿಟ್ಟಿದೆ. ಜನರು ತಮ್ಮ ನೆಚ್ಚಿನ ಸ್ಟಾರ್‌ ನಟ, ನಟಿಯರನ್ನು ಪ್ರಶ್ನಿಸುವುದು, ತಮ್ಮ ಅಭಿಮಾನ ವ್ಯಕ್ತಪಡಿಸಲು ಇದೊಂದು ಸರಳವಾದ ಮಾರ್ಗವಾಗಿದೆ. ಇದಕ್ಕೆ ತಕ್ಕ ಉದಾಹರಣೆಯಂತೆ ವಿಜಯ್‌ ದೇವರಕೊಂಡ ಅಭಿಮಾನಿಗಳು.

ಹೌದು.. ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ಆತನ ಅಭಿಮಾನಿಗಳಲ್ಲಿ, ಮಹಿಳಾ ಫ್ಯಾನ್ಸ್‌ ಸಂಖ್ಯೆಯೂ ಜಾಸ್ತಿನೇ ಆಗಿದೆ. ಈಗಿನ ಯುವ ಜನತೆಗೆ ಈ ನಟನ ಮೇಲಿರುವ ಕ್ರೇಜ್‌ ಇನ್ನಷ್ಟು ಹೆಚ್ಚಾಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಅಥವಾ ಹೀರೋಯಿಗಳಿಗೆ ವಿಚಿತ್ರ ಬೇಡಿಕೆಗಳನ್ನು ಇಡುತ್ತಿರುತ್ತಾರೆ. ಅದರಂತೆ ಇಂತಹ ಕೆಲಸವನ್ನು ವಿಜಯ್‌ ದೇವರಕೊಂಡ ಮಹಿಳಾ ಫ್ಯಾನ್ಸ್‌ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Harshitha reddy (@harshithaareddy__)

ಇದನ್ನೂ ಓದಿ: ಬಾಲಿವುಡ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌... ಶೀಘ್ರದಲ್ಲೇ ತಂದೆಯಾಗಲಿದ್ದಾರೆ‌ ಈ ಖ್ಯಾತ ನಟ!

ಇತ್ತೀಚೆಗೆ ಇಬ್ಬರು ವಿದ್ಯಾರ್ಥಿನಿಯರು ಟಾಲಿವುಡ್‌ ಸ್ಟಾರ್‌ ನಟ ವಿಜಯ್ ದೇವರಕೊಂಡ ಗಮನ ಸೆಳೆಯಲು ಮಾಡಿರುವವೊಂದು ಅಚ್ಚರಿ ಮೂಡಿಸುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಿದ್ಯಾರ್ಥಿನಿಯರು "ನಟ ವಿಜಯ್‌ ದೇವರಕೊಂಡ ನಮ್ಮ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದರೆ ಮಾತ್ರ ನಾವು ಪರೀಕ್ಷೆಗೆ ತಯಾರಿ ನಡೆಸುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಈ ಯುವತಿಯರು ಹಾಕಿರುವ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಹುಡುಗಿರ ವಿಡಿಯೋ ನೋಡಿದ ನೆಟ್ಟಿಗರು ನಿಮ್ಮ ವೀಡಿಯೊ ನೋಡಿ ನಿಜಕ್ಕೂ ವಿಜಯ್‌ ಕಾಮೆಂಟ್ ಮಾಡ್ತಾರಾ? ಅಷ್ಟೆಲ್ಲಾ ಸೀನ್ ಇದ್ಯಾ? ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಆದರೆ ಇದೀಗ ನಟ ವಿಜಯ್‌ ದೇವರಕೊಂಡ ಈ ಪೋಸ್ಟ್ ರಿಪ್ಲೇ ಮಾಡಿದ್ದಾರೆ. ಈ ನಟ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ 90% ಅಂಕ ಗಳಿಸಿದರೆ ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ನಟನ ಪ್ರಿತಿಕ್ರಿಯೆಗೆ ಅಭಿಮಾನಿಗಳು ಸೋಷಿಯಲ್‌ ಮಿಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News