ನಟಿ ವಿಜಯಲಕ್ಷ್ಮಿಗೆ 7 ಬಾರಿ ಗರ್ಭಪಾತ ಆರೋಪ, ಈ ನಟನಿಗೆ ಪೊಲೀಸ್‌ ನೋಟಿಸ್​

Vijayalakshmi Harassment Allegations : ನಟಿ ವಿಜಯಲಕ್ಷ್ಮಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ದೂರಿನ ಕುರಿತು ನಟ ಮತ್ತು ರಾಜಕಾರಿಣಿ ಸೀಮನ್ ಅವರನ್ನು ಚೆನ್ನೈ ನಗರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. 

Written by - Chetana Devarmani | Last Updated : Sep 11, 2023, 03:53 PM IST
  • ನಟಿ ವಿಜಯಲಕ್ಷ್ಮಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
  • ನಟ ಮತ್ತು ರಾಜಕಾರಿಣಿ ಸೀಮನ್ ಗೆ ಪೊಲೀಸ್‌ ನೋಟಿಸ್‌
  • ವಿಚಾರಣೆಗೆ ಹಾಕರಾಗುವಂತೆ ಪೊಲೀಸ್‌ ಬುಲಾವ್‌
ನಟಿ ವಿಜಯಲಕ್ಷ್ಮಿಗೆ 7 ಬಾರಿ ಗರ್ಭಪಾತ ಆರೋಪ, ಈ ನಟನಿಗೆ ಪೊಲೀಸ್‌ ನೋಟಿಸ್​   title=

ಚೆನ್ನೈ : ನಟಿ ವಿಜಯಲಕ್ಷ್ಮಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ದೂರಿನ ಕುರಿತು ನಟ ಮತ್ತು ರಾಜಕಾರಿಣಿ ಸೀಮನ್ ಅವರನ್ನು ಚೆನ್ನೈ ನಗರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಮದುವೆಯ ನೆಪದಲ್ಲಿ ತನಗೆ ಮೋಸ ಮಾಡಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.  

ವಿಜಯಲಕ್ಷ್ಮಿ ಅವರು ಸೀಮನ್ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಕಳೆದ ವಾರ ಪೊಲೀಸರಿಗೆ ಹೊಸ ದೂರು ನೀಡಿದ್ದರು. ಸೀಮನ್ ತನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾನೆ ಮತ್ತು ಲೈಂಗಿಕ ಸಂಬಂಧ ಹೊಂದಿದ್ದ ನಂತರ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ತಂದೆ ಜೊತೆಗಿನ ಲಿಪ್‌ಲಾಕ್‌ ವಿವಾದದ ಬಗ್ಗೆ ಮತ್ತೆ ಮೌನ ಮುರಿದ ಪೂಜಾ ಭಟ್‌!!

ಸೀಮನ್,  ನಾಮ್​ ತಮಿಳರ್​ ಕಟ್ಚಿ (ಎನ್‌ಟಿಕೆ) ಪಕ್ಷದ ನಾಯಕರಾಗಿದ್ದಾರೆ. ಇವರ ವಿರುದ್ಧ ನಟಿ ವಿಜಯಲಕ್ಷ್ಮಿ ಮಾಧ್ಯಮಗಳ ಎದುರೂ ನೋವು ತೋಡಿಕೊಂಡಿದ್ದರು. ಸೀಮನ್‌ ರಹಸ್ಯವಾಗಿ ಮದುವೆಯಾಗಿದ್ದು, ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಈ ವಿಚಾರದಲ್ಲಿ ತನಗೆ ನ್ಯಾಯ ಕೊಡಿಸಿ ಎಂದು ನಟಿ ವಿಜಯಲಕ್ಷ್ಮಿ ಮನವಿ ಮಾಡಿದ್ದರು. 

ಆರೋಪಗಳಿಗೆ ಪ್ರತಿಕ್ರಿಯಿಸಿದ ಸೀಮಾನ್, ವಿಜಯಲಕ್ಷ್ಮಿ ಅವರ ಆರೋಪದಲ್ಲಿ "ಸತ್ಯದ ಒಂದು ತುಣುಕೂ" ಇಲ್ಲ ಎಂದು ಹೇಳಿದ್ದರು. ಇದೀಗ ಸೀಮನ್‌ ಅವರನ್ನು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಮಿಳು ನಾಡು ಪೊಲೀಸರು ನೋಟಿಸ್‌ ಹೊರಡಿಸಿದ್ದಾರೆ. 

ಇದನ್ನೂ ಓದಿ: 19 ಫ್ಲಾಪ್‌ಗಳನ್ನು ನೀಡಿದರೂ 4000 ಕೋಟಿ ಗಳಿಸಿದ ಈ ಸುಂದರಿ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News