19 ಫ್ಲಾಪ್‌ಗಳನ್ನು ನೀಡಿದರೂ 4000 ಕೋಟಿ ಗಳಿಸಿದ ಈ ಸುಂದರಿ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ

Bollywood Most Successful actress : ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಚಿತ್ರಗಳನ್ನು ನೀಡಿ ಕೋಟಿಗಟ್ಟಲೆ ಲಾಭ ಗಳಿಸಿದ ಅನೇಕ ನಾಯಕಿಯರು ಬಾಲಿವುಡ್‌ನಲ್ಲಿ ಇದ್ದಾರೆ. ಇಂದು ನಾವು ನಿಮಗೆ ಭಾರತದ ಅತ್ಯಂತ ಯಶಸ್ವಿ ನಟಿಯ ಬಗ್ಗೆ ಹೇಳಲಿದ್ದೇವೆ. 

Written by - Chetana Devarmani | Last Updated : Sep 11, 2023, 02:28 PM IST
  • 19 ಫ್ಲಾಪ್‌ಗಳನ್ನು ನೀಡಿದರೂ ಟಾಪ್‌ ಹೀರೋಯಿನ್‌
  • ಈ ಸುಂದರಿ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ
  • ಕೋಟಿಗಟ್ಟಲೆ ಲಾಭ ಗಳಿಸಿದ ನಾಯಕಿ
19 ಫ್ಲಾಪ್‌ಗಳನ್ನು ನೀಡಿದರೂ 4000 ಕೋಟಿ ಗಳಿಸಿದ ಈ ಸುಂದರಿ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ  title=
Kareena Kapoor

Bollywood Hit Actress : ಬಾಲಿವುಡ್ ನಲ್ಲಿ ಮದುವೆಯಾಗಿ, ಮಕ್ಕಳಾದ ಮೇಲೆ ಚಿತ್ರರಂಗಕ್ಕೆ ಶಾಶ್ವತವಾಗಿ ಗುಡ್ ಬೈ ಹೇಳಿದ ಅದೆಷ್ಟೋ ಚೆಲುವೆಯರಿದ್ದಾರೆ. ಕೆಲವು ಸುಂದರಿಯರ ಹಾದಿ ಸುಲಭವಾಗಲಿಲ್ಲ, ಆದರೂ ಅವರು ಚಿತ್ರರಂಗದಲ್ಲಿ ಅಗ್ರ ನಟಿ ಎಂಬ ಬಿರುದನ್ನು ಸಾಧಿಸಿದರು. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 4000 ಕೋಟಿ ಗಳಿಸಿದರು. 19 ಫ್ಲಾಪ್ ಕೊಟ್ಟರೂ ಬಾಲಿವುಡ್ ನ ಟಾಪ್ ಹೀರೋಯಿನ್ ಗಳ ಪಟ್ಟಿಗೆ ಸೇರ್ಪಡೆಯಾಗಿರುವ ಈ ಚೆಲುವೆ ಯಾರು ಗೊತ್ತಾ.

ಈ ನಟಿ ಬೇರೆ ಯಾರೂ ಅಲ್ಲ, ಕಪೂರ್ ಕುಟುಂಬದ ಪ್ರೀತಿಯ ಕಿರಿಯ ಮಗಳು ಕರೀನಾ ಕಪೂರ್ ಖಾನ್. ಇತರ ನಟಿಯರಿಗಿಂತ ಹೆಚ್ಚು ಹಣ ಗಳಿಸಿದ ಬಾಲಿವುಡ್ ಬೆಡಗಿಯರ ಪಟ್ಟಿಯಲ್ಲಿ ಕರೀನಾ ಹೆಸರು ಸೇರಿದೆ. ವರದಿಗಳ ಪ್ರಕಾರ, ಕರೀನಾ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ. ದಾಖಲೆಗಳ ಬಗ್ಗೆ ಮಾತನಾಡುವುದಾದರೆ, ಕರೀನಾ ಅವರ ಸಹೋದರಿ ಕರಿಷ್ಮಾ 22 ಹಿಟ್‌ಗಳನ್ನು ನೀಡಿದ ಯಶಸ್ವಿ ನಟಿ, ಕತ್ರಿನಾ 22 ಹಿಟ್‌ಗಳನ್ನು ನೀಡಿದ್ದಾರೆ ಮತ್ತು ರಾಣಿ ಮುಖರ್ಜಿ 21 ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಶಾರುಕ್‌ ನ್ಯೂ ಸಿನಿಮಾ ಹಿಟ್ or ಫ್ಲಾಪ್‌...? ಇಲ್ಲಿದೆ ಬಜೆಟ್ ಮತ್ತು ಕಲೆಕ್ಷನ್‌ ಡಿಟೇಲ್ಸ್‌ 

ಪ್ರಿಯಾಂಕಾ ಚೋಪ್ರಾ 18 ಹಿಟ್‌ಗಳನ್ನು ನೀಡಿದ್ದಾರೆ ಮತ್ತು ಕಾಜೋಲ್ ಸುಮಾರು 14 ಹಿಟ್‌ಗಳನ್ನು ನೀಡಿದ್ದಾರೆ. ಕರೀನಾ ಕಪೂರ್ಸುಮಾರು 23 ಹಿಟ್‌ಗಳನ್ನು ನೀಡಿದ್ದಾರೆ. ಬ್ಲಾಕ್‌ಬಸ್ಟರ್ ಚಿತ್ರಗಳ ಬಗ್ಗೆ ಹೇಳುವುದಾದರೆ, 'ಬಜರಂಗಿ ಭಾಯಿಜಾನ್' ಮತ್ತು '3 ಈಡಿಯಟ್ಸ್', 'ಕಭಿ ಖುಷಿ ಕಭಿ ಗಮ್', 'ಐತ್ರಾಜ್', 'ಜಬ್ ವಿ ಮೆಟ್', 'ಬಾಡಿಗಾರ್ಡ್' ಮತ್ತು 'ಗುಡ್ ನ್ಯೂಸ್' ಸೇರಿವೆ. ಈ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ 4000 ಕೋಟಿ ರೂ.ಗಿಂತ ಹೆಚ್ಚು ಗಳಿಸಿವೆ. ಆದರೆ 19 ಚಿತ್ರಗಳು ಸೋತಿವೆ. ಕರೀನಾ ಕೊನೆಯದಾಗಿ ಅಮೀರ್ ಖಾನ್ ಜೊತೆ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಶೀಘ್ರದಲ್ಲೇ 'ಜಾನೆ ಜಾನ್' ಚಿತ್ರದ ಮೂಲಕ OTT ನಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 21 ರಂದು ಬಿಡುಗಡೆಯಾಗಲಿದೆ.

ವರದಿಗಳ ಪ್ರಕಾರ, ಅನೇಕ ನಾಯಕಿಯರು 3000 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ್ದಾರೆ, ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಹೆಸರುಗಳಿವೆ. 'ಬಾಹುಬಲಿ' ಚಿತ್ರದಿಂದಾಗಿ ತಮನ್ನಾ ಭಾಟಿಯಾ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು. ಈ ಚಿತ್ರ ಬರೋಬ್ಬರಿ 2400 ಕೋಟಿಗೂ ಹೆಚ್ಚು ಗಳಿಸಿದೆ. ಐಶ್ವರ್ಯಾ ರೈ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ನಯನತಾರಾ ಅವರ ಹೆಸರುಗಳನ್ನು ಒಳಗೊಂಡಂತೆ ಅನೇಕ ನಟಿಯರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ರೂ 2000 ಕೋಟಿಗಿಂತ ಹೆಚ್ಚು ಗಳಿಸಿವೆ.

ಇದನ್ನೂ ಓದಿ: ಜವಾನ್‌ 4ನೇ ದಿನ : ವಾರಾಂತ್ಯದಲ್ಲಿ ಹೇಗಿತ್ತು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News