ಒಂದೇ ದಿನದಂದು ವಿಕ್ರಮ್‌ - ವಿಜಯ್‌ ಸಿನಿಮಾ ರಿಲೀಸ್‌..! ʼಬಿಗ್‌ ಸ್ಟಾರ್‌ ವಾರ್‌ʼ ಶುರು

Dhruva Natchathiram : ಕಾಲಿವುಡ್‌ನಲ್ಲಿ ಬಿಗ್‌ ಸ್ಟಾರ್‌ವಾರ್‌ ನಡೆಯಲಿರುವ ಸಾಧ್ಯತೆ ಇದೆ. ಚಿಯಾನ್‌ ವಿಕ್ರಮ್‌ ಮತ್ತು ಇಳಯದಳಪತಿ ವಿಜಯ್‌ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ರೋಚಕ ಸಂಗತಿಗೆ ಕಾರಣವಾಗಲಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Aug 21, 2023, 01:45 PM IST
  • ಕಾಲಿವುಡ್‌ನಲ್ಲಿ ಬಿಗ್‌ ಸ್ಟಾರ್‌ವಾರ್‌ ನಡೆಯಲಿರುವ ಸಾಧ್ಯತೆ ಇದೆ.
  • ವಿಕ್ರಮ್‌ ಮತ್ತು ವಿಜಯ್‌ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲಿವೆ.
  • ಲಿಯೋ ಬಿಡುಗಡೆ ದಿನವೇ ಧೃವ ನಕ್ಷತ್ರ ಸಿನಿಮಾ ರಿಲೀಸ್‌ ಆಗಲಿದೆ.
ಒಂದೇ ದಿನದಂದು ವಿಕ್ರಮ್‌ - ವಿಜಯ್‌ ಸಿನಿಮಾ ರಿಲೀಸ್‌..! ʼಬಿಗ್‌ ಸ್ಟಾರ್‌ ವಾರ್‌ʼ ಶುರು title=

Leo and Dhruva Natchathiram : ʼಧೃವ ನಕ್ಷತ್ರʼ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಚಿತ್ರ. ಈ ಸಿನಿಮಾದಲ್ಲಿ ಚಿಯಾನ್‌ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ಹಿಂದೆಯೇ ಘೋಷಣೆಯಾಗಿದ್ದ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈಗ ಬರುತ್ತಿರುವ ಸುದ್ದಿ ಪ್ರಕಾರ ವಿಜಯ್ ನಟನೆಯ ʼಲಿಯೋʼ ರಿಲೀಸ್‌ ದಿನವೇ ಧೃವ ನಕ್ಷತ್ರ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಕುತೂಹಲ ಕೆರಳಿಸಿದೆ. 

ಹೌದು.. ಅಕ್ಟೋಬರ್ 19 ರಂದು ʼಲಿಯೋʼ ಸಿನಿಮಾ ಬಿಡುಗಡೆಯಾಗಲಿದೆ. ಅಲ್ಲದೆ, ಈ ದಿನದಂದೇ ವಿಕ್ರಮ್‌ ನಟನೆಯ ಬಹುನಿರೀಕ್ಷಿತ ಸಿನಿಮಾ, ʼಧೃವ ನಕ್ಷತ್ರ ʼವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಸಾಲದ ವಸೂಲಿಗಾಗಿ ನಟ ಸನ್ನಿ ಡಿಯೋಲ್ ಮನೆ ಹರಾಜಿಗಿಟ್ಟ ಬ್ಯಾಂಕ್..!

ವಿಕ್ರಮ್, ಐಶ್ವರ್ಯ ರಾಜೇಶ್, ರಿತು ವರ್ಮಾ, ವಿನಾಯಕನ್, ಸಿಮ್ರಾನ್, ಪಾರ್ತಿಬನ್, ದಿವ್ಯದರ್ಶಿನಿ (ಡಿಡಿ), ಅರ್ಜುನ್ ದಾಸ್, ವಂಶಿ ಕೃಷ್ಣ, ರಾಧಿಕಾ ಶರತ್‌ಕುಮಾರ್, ಮಾಯಾ ಎಸ್. ಕೃಷ್ಣನ್, ಅಭಿರಾಮಿ ಸೇರಿದಂತೆ ಬಹು ದೊಡ್ಡ ತಾರಾಬಳಗ ʼಧೃವ ನಕ್ಷತ್ರʼ ಸಿನಿಮಾದಲ್ಲಿದೆ. ಮನೋಜ್ ಪರಮಹಂಸ, ಜೋಮೋನ್ ಟಿ ಜಾನ್, ಸಂತಾನ ಕೃಷ್ಣನ್ ರವಿಚಂದ್ರನ್ ಅವರ ಛಾಯಾಗ್ರಹಣ ಮತ್ತು ಪ್ರವೀಣ್ ಆಂಟೋನಿ ಸಂಕಲನ ಈ ಚಿತ್ರಕ್ಕಿದೆ. 2017ರಲ್ಲಿ ಸೆಟ್ಟೇರಿದ ಚಿತ್ರ ಇನ್ನೂ ಬಿಡುಗಡೆ ಕಂಡಿಲ್ಲ.

ಈ ಮಧ್ಯ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಹೆರಾಲ್ಡ್ ದಾಸ್ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಈ ಕುರಿತು ಪೊಸ್ಟರ್‌ ಸಹ ಬಿಡುಗಡೆಯಾಯಿತು. ಅಲ್ಲದೆ, ಸಂಜಯ್ ದತ್ ಪರಿಚಯದ ವಿಡಿಯೋ ಕೂಡ ವೈರಲ್ ಆಗಿತ್ತು. 

ಇದನ್ನೂ ಓದಿ: ಧರ್ಮ ಕೈಯಲ್ಲಿ ತಲ್ವಾರ್! ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರೀಸ್ :

ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮತ್ತು ದಿ ರೂಟ್ ಬ್ಯಾನರ್ ಅಡಿಯಲ್ಲಿ ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ಅವರು ಲಿಯೋವನ್ನು ನಿರ್ಮಿಸಿದ್ದಾರೆ. ತ್ರಿಶಾ, ಸಂಜಯ್ ದತ್, ದತ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮೈಶ್ಕಿನ್, ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್, ಸ್ಯಾಂಡಿ, ಜನನಿ, ಅಭಿರಾಮಿ ವೆಂಕಟಾಚಲಂ, ಬಾಬು ಆಂಟೋನಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News