ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಬೆಂಗಳೂರಿನಲ್ಲಿ ನಡೆದ ಆಪ್ತ ಸ್ನೇಹಿತರ ವಿವಾಹದಲ್ಲಿ ಪಾಲ್ಗೊಂಡರು. ಇದೀಗ ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇತ್ತೀಚಿನ ಫೋಟೋ ಮತ್ತು ವೀಡಿಯೊಗಳಲ್ಲಿ, ಸಾಂಪ್ರದಾಯಿಕ ಚೋಕರ್ ಆಭರಣಗಳ ಸೆಟ್ನೊಂದಿಗೆ ಗೋಲ್ಡನ್ ಬಣ್ಣದ ಬೆನಾರಾಸಿ ರೇಷ್ಮೆ ಚಿನ್ನದ ಸೀರೆ ಧರಿಸಿ ಸಹೋದರಿ ಅನಿಷಾ ಪಡುಕೋಣೆ ಅವರ ಪಕ್ಕದಲ್ಲಿ ದೀಪಿಕಾ ನಿಂತಿದ್ದಾರೆ. ಇದೀಗ ದೀಪಿಕಾ ಅವರ ಈ ಫೋಟೋ, ವಿಡಿಯೋಗೆ ಹೆಚ್ಚು ಲೈಕ್ ಬರುತ್ತಿದೆ.
ಹಲವಾರು ಅಭಿಮಾನಿ ಕ್ಲಬ್‌ಗಳು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿವೆ.
ಫೋಟೋ, ವಿಡಿಯೋಗಳನ್ನು ನೀವೂ ಒಮ್ಮೆ ನೋಡೋ: