VIRAL VIDEO:ರೇಖಾಗೆ ಬಲವಂತವಾಗಿ ಚುಂಬನ ನೀಡಿದ್ದರಂತೆ ಕಮಲ್ ಹಾಸನ್!

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಖ್ಯಾತ ಹಿರಿಯ ನಟಿ ರೇಖಾ, ಚಿತ್ರವೊಂದರ ಚಿತ್ರೀಕರಣದ ವೇಳೆ ಕಮಲ್ ಹಾಸನ್ ತಮಗೆ ಆಕಸ್ಮಿಕವಾಗಿ KISS ಮಾಡಿದ್ದರು ಮತ್ತು ಇದು ಆ ಚಿತ್ರದ ಸ್ಕ್ರಿಪ್ಟ್ ನ ಭಾಗವಾಗಿರಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಘಟನೆಯ ಬಳಿಕ ತಾವು ತುಂಬಾ ನೊಂದುಕೊಂಡಿರುವುದಾಗಿ ರೇಖಾ ಹೇಳಿದ್ದಾರೆ.

Updated: Feb 26, 2020 , 11:30 AM IST
VIRAL VIDEO:ರೇಖಾಗೆ ಬಲವಂತವಾಗಿ ಚುಂಬನ ನೀಡಿದ್ದರಂತೆ ಕಮಲ್ ಹಾಸನ್!

ನವದೆಹಲಿ: ದಕ್ಷಿಣದ ಹಿರಿಯ ನಟಿ ರೇಖಾ ಅವರು ನೀಡಿರುವ ಒಂದು ಸಂದರ್ಶನದ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ಕಮಲ್ ಹಾಸನ್ ಮೇಲೆ ಪ್ರಶೆ ಎಬ್ಬಿಸುತ್ತಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ರೇಖಾ, 1986ರಲ್ಲಿ ತಾವು ಬಾಲಚಂದರ್ ಅವರ ಚಿತ್ರ 'ಪುನ್ನಾಗೌ ಮಣ್ಣನ್' ಚಿತ್ರದ ಶೂಟಿಂಗ್ ಮಾಡುತ್ತಿದ್ದ ವೇಳೆ ಅವರ ಜೊತೆಗೆ ಕಮಲ್ ಹಾಸನ್ ಕೂಡ ಇದ್ದರು ಎಂದು ಹೇಳಿದ್ದಾರೆ. ಈ ಚಿತ್ರೀಕರಣದ ವೇಳೆ ಕಮಲ್ ಹಾಸನ್ ದೃಶ್ಯವೊಂದರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಚುಂಬನ ನೀಡಿದ್ದರು ಎಂದು ಹೇಳಿದ್ದಾರೆ. ಈ KISSನ ಯೋಜನೆ ಕಮಲ್ ಹಾಸನ್ ಹಾಗೂ ಬಾಲಚಂದರ್ ಜಂಟಿಯಾಗಿ ರಚಿಸಿದ್ದರು. ಬಳಿಕ ಎಂದಿಗೂ ಕೂಡ ಆ ಇಬ್ಬರು ತಮ್ಮ ಬಳಿ ಈ ಕುರಿತು ಕ್ಷಮೆಯಾಚಿಸಲಿಲ್ಲ ಎಂದಿದ್ದಾರೆ.

ಈ ಚಿತ್ರದ ದೃಶ್ಯವೊಂದರಲ್ಲಿ ಚಿತ್ರದ ನಾಯಕ ನಟ ಹಾಗೂ ನಾಯಕ ನಟಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುತ್ತಾರೆ, ಈ ವೇಳೆಯ ಕಮಲ್ ಹಾಸನ್, ರೇಖಾಗೆ ಚುಂಬನ ನೀಡಿದ್ದಾರೆ. ಈ ಕುರಿತು ರೇಖಾಗೆ ಯಾವುದೇ ಮಾಹಿತಿ ನೀಡಿರದ ಕಾರಣ, ತಾವು ತುಂಬಾ ಭಯಭೀತರಾಗಿರುವುದಾಗಿ ರೇಖಾ ಹೇಳಿದ್ದಾರೆ. ಈ ದೃಶ್ಯ ಚಿತ್ರದ ಸ್ಕ್ರಿಪ್ಟ್ ನಲ್ಲಿ ಇರಲಿಲ್ಲ ಎಂದು ರೇಖಾ ಪ್ರಶ್ನಿಸಿದಾಗ, ಚಿತ್ರದ ನಿರ್ದೇಶಕರು ತಾವು ಚಿತ್ರದ ನಾಯಕ ನಟ ಹಾಗೂ ನಟಿಯ ಮಧ್ಯೆ ಇರುವ ಭಾವನೆಯನ್ನು ಎತ್ತಿ ತೋರಿಸಲು ಇದನ್ನು ಮಾಡಿದ್ದು, ಇದರಲ್ಲಿ ಯಾವುದೇ ರೀತಿಯ ಅಶ್ಲೀಲತೆ ಇಲ್ಲ ಎಂದು ಹೇಳಿ ಜಾರಿಕೊಂಡಿದ್ದರು ಎಂದು ರೇಖಾ ಹೇಳಿದ್ದಾರೆ. ಈ ಚಿತ್ರದ ವೇಳೆ ತಮ್ಮ ವಯಸ್ಸು ಕೇವಲ 16 ಆಗಿದ್ದು, ತಾವು 10ನೇ ತರಗತಿಯಲ್ಲಿ ಓದುತ್ತಿದ್ದೆ ಎಂದು ರೇಖಾ ಹೇಳಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂದೆ ಈ ದೃಶ್ಯ ವೀಕ್ಷಿಸಿ ಬೇಸರಪಟ್ಟುಕೊಳ್ಳಬಹುದು ಎಂಬುದು ರೇಖಾ ಅವರ ಭೀತಿಯಾಗಿತ್ತು. ಈ ಘಟನೆಯ ಬಳಿಕ ದೀರ್ಘ ಕಾಲದವರೆಗೆ ತಾವು ನೊಂದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ರೇಖಾ ನೀಡಿರುವ ಈ ಸಂದರ್ಶನ ಇದೀಗ ಭಾರಿ ವೈರಲ್ ಆಗಿದ್ದು, ಕಮಲ್ ಹಾಸನ್ ಅವರು ರೇಖಾ ಅವರ ಕ್ಷಮೆಯಾಚಿಸಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಗ್ರಹಿಸುತ್ತಿದ್ದಾರೆ.

ಮಾಧ್ಯಮಗಳ ವರದಿಗಳ ಪ್ರಕಾರ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ರೇಖಾ, ಈ ಪ್ರಕರಣದಲ್ಲಿ ತಾವು ಸದ್ಯ ಏನನ್ನು ಹೇಳಲು ಬಯಸುವುದಿಲ್ಲ ಎಂದಿದ್ದಾರೆ. ಸದ್ಯ ನನಗೆ ಜನರಿಂದ ಹಲವು ಕಾಲ್ ಗಳು ಬರುತ್ತಿದ್ದು, ಈ ವಿಡಿಯೋ ಈಗ ಏಕೆ ವೈರಲ್ ಆಗುತ್ತಿದೆ ತಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಈ ಕುರಿತು ಮಾತನಾಡಿ ನಾನು ಪ್ರಸಿದ್ಧಿಯನ್ನು ಬಯಸುವುದಿಲ್ಲ ಮತ್ತು ಸದ್ಯ ತಾವು ಬೇರೆ ಜವಾಬ್ದಾರಿಗಳಲ್ಲಿ ವ್ಯಸ್ತರಾಗಿರುವುದಾಗಿ ಅವರು ಹೇಳಿದ್ದಾರೆ.

ವೃತ್ತಿ ಜೀವನದ ಕುರಿತು ಹೇಳುವುದಾದರೆ ಕಮಲ್ ಹಾಸನ್ ಅವರ 'ಇಂಡಿಯನ್-2' ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಕಮಲ್ ಹಾಸನ್ ತಮ್ಮ ಹಿಂದಿನ ಚಿತ್ರ 'ಹಿಂದೂಸ್ತಾನಿ'ಯ ವೃದ್ಧನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗುತ್ತಿರುವ ಚಿತ್ರ 1996ರಲ್ಲಿ ಬಿಡುಗಡೆಯಾಗಿದ್ದ 'ಹಿಂದೂಸ್ತಾನಿ' ಚಿತ್ರದ ಸಿಕ್ವಲ್ ಚಿತ್ರ ಇದಾಗಿದ್ದು, ಇದರಲ್ಲಿ ಸಿದ್ಧಾರ್ಥ್ ಹಾಗೂ ಕಾಜಲ್ ಅಗರವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.