ಆಸ್ಟ್ರೇಲಿಯಾದಲ್ಲಿ #NewYear ಆಚರಿಸಿದ ವಿರಾಟ್-ಅನುಷ್ಕಾ ದಂಪತಿ

ವಿರುಷ್ಕಾ ದಂಪತಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ, ಮುಂದಿನ ವರ್ಷ ಹರ್ಷದಾಯಕವಾಗಿರಲಿ ಎಂದಿದ್ದಾರೆ.

Last Updated : Dec 31, 2018, 09:32 PM IST
ಆಸ್ಟ್ರೇಲಿಯಾದಲ್ಲಿ #NewYear ಆಚರಿಸಿದ ವಿರಾಟ್-ಅನುಷ್ಕಾ ದಂಪತಿ title=
Pic: Twitter/@imVkohli

ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದ್ದಾರೆ.

ಸಿಡ್ನಿಯಲ್ಲಿ ಇಬ್ಬರೂ ತಬ್ಬಿಕೊಂಡಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ, ಮುಂದಿನ ವರ್ಷ ಹರ್ಷದಾಯಕವಾಗಿರಲಿ ಎಂದಿದ್ದಾರೆ.

ಭಾನುವಾರವಷ್ಟೇ ಮೆಲ್ಬೋರ್ನ್ನಲ್ಲಿ ಮುಕ್ತಾಯವಾದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 137 ರನ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ 150ನೇ ಗೆಲುವನ್ನು ದಾಖಲಿಸಿ ಸಂಭ್ರಮಿಸಿತ್ತು. ಇದಾದ ಬಳಿಕ ವಿರುಷ್ಕಾ ದಂಪತಿ ಮೆಲ್ಬೋರ್ನ್​ನಿಂದ ಸಿಡ್ನಿಗೆ ತೆರಳಿದ್ದು ಹೊಸ ವರ್ಷವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

Trending News