ಯೂಟ್ಯೂಬ್ ನಲ್ಲಿ ಅಬ್ಬರದ ದರ್ಶನ ನೀಡಿದ 'ಒಡೆಯ'; ಉಘೇ ಎಂದ ಅಭಿಮಾನಿಗಳು

ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಟ್ರೈಲರ್ ಬಿಡುಗಡೆಯಾದ ಕೇವಲ ಮೂರು ಗಂಟೆಗಳಲ್ಲಿ ಸಾಕಷ್ಟು ಅಬ್ಬರಿಸಿದೆ. ಈಗ ಈ ಟ್ರೈಲರ್ ನ್ನು ಕೇವಲ ಮೂರು ಗಂಟೆಗಳಲ್ಲಿ 4.6 ಲಕ್ಷಕ್ಕೂ ಅಧಿಕ ಬಾರಿ ವಿಕ್ಷಿಸಲಾಗಿದೆ. 

Updated: Dec 1, 2019 , 02:08 PM IST
ಯೂಟ್ಯೂಬ್ ನಲ್ಲಿ ಅಬ್ಬರದ ದರ್ಶನ ನೀಡಿದ 'ಒಡೆಯ'; ಉಘೇ ಎಂದ ಅಭಿಮಾನಿಗಳು
Photo courtesy: Twitter

ಬೆಂಗಳೂರು: ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಟ್ರೈಲರ್ ಬಿಡುಗಡೆಯಾದ ಕೇವಲ ಮೂರು ಗಂಟೆಗಳಲ್ಲಿ ಸಾಕಷ್ಟು ಅಬ್ಬರಿಸಿದೆ. ಈಗ ಈ ಟ್ರೈಲರ್ ನ್ನು ಕೇವಲ ಮೂರು ಗಂಟೆಗಳಲ್ಲಿ 4.6 ಲಕ್ಷಕ್ಕೂ ಅಧಿಕ ಬಾರಿ ವಿಕ್ಷಿಸಲಾಗಿದೆ. 

ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯಿಸಿರುವ ಈ ಚಿತ್ರ ಪಕ್ಕಾ ಮಾಸ್ ಚಿತ್ರವೆನ್ನುವುದನ್ನು ಟ್ರೈಲರ್ ಸಾಬೀತು ಪಡಿಸುತ್ತದೆ. ಟ್ರೈಲರ್ ನಲ್ಲಿ ದರ್ಶನ ತಮ್ಮ ಎಂದಿನ ಶೈಲಿಯ ಖದರ್ ನಲ್ಲಿ ಮಿಂಚಿದ್ದಾರೆ. ದರ್ಶನ್ ಜೊತೆಗೆ ಚಿತ್ರದಲ್ಲಿ ನಟಿ ಸನಾಹ ತಿಮ್ಮಯ್ಯ, ದೇವರಾಜ್,ರವಿಶಂಕರ್, ಶರತ್ ಲೋಹಿತಾಶ್ವ ಸಾಧುಕೋಕಿಲಾ, ಚಿಕ್ಕಣ್ಣ, ಪಂಕಜ್ ನಾರಾಯಣ್ ಹಾಗೂ ಚಿತ್ರಾ ಶೆಣೈ ಅವರು ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಎಂ.ಡಿ ಶ್ರೀದರ್ ಅವರು ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ನೀಡಿದ್ದಾರೆ.