ನವದೆಹಲಿ: ಹಾಸ್ಯನಟ ಕಪಿಲ್ ಶರ್ಮಾ ತಮ್ಮ ಮೊದಲ ರೀಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಕಾಲೇಜಿಗೆ ಹೋಗಲು ಕಾರ್ ಕೇಳಿದ ಸಂಜಯ್ ದತ್ ಗೆ ತಂದೆ ಸುನಿಲ್ ದತ್ ನೀಡಿದ ಸಲಹೆ ಏನು ಗೊತ್ತೇ?
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ತನ್ನ ಇತ್ತೀಚಿನ ಪಂಜಾಬಿ ಹಾಡು 'ಮಿಲ್ ಮಹಿಯಾ'ಗೆ ಲಿಪ್ ಸಿಂಕ್ ಮಾಡುವುದನ್ನು ಕಾಣಬಹುದು .ಇದೆ ವೇಳೆ ಕಪಿಲ್ ಶರ್ಮಾ "ಮಿಲ್ನೆ ಆತೆ ಹೈ ತೋ ಆಪ್ಕೆ ಪಿತಾಜಿ ಕೆಹತೆ ಹೈ ಖಾಮೋಶ್"ಎಂದು ಹೇಳುತ್ತಾರೆ.ಈ ತಮಾಷೆಯ ಕ್ಲಿಪ್‌ನಲ್ಲಿ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಪಟಾರ್ ಎಂದು ಕಪಿಲ್ ಶರ್ಮಾಗೆ ಪಂಚಿಂಗ್ ಮಾಡುತ್ತಾರೆ.
ಇದನ್ನೂ ಓದಿ: 'ಮರ್ದ್ ಕಿ ಬಾಡಿ ವಾಲಿ' ಎಂದು ಟ್ರೋಲ್ ಮಾಡಿದ್ದಕ್ಕೆ ನಟಿ ತಪ್ಸಿ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?
ಸೋನಾಕ್ಷಿ ಪ್ರಸ್ತುತ ತನ್ನ ಮುಂಬರುವ ಚಿತ್ರ 'ಕಾಕುಡ' ಚಿತ್ರೀಕರಣದಲ್ಲಿದ್ದಾರೆ. ಆದಿತ್ಯ ಸರ್ಪೋದ್ದಾರ್ ನಿರ್ದೇಶನದ ಈ ಚಿತ್ರದಲ್ಲಿ ರಿತೇಶ್ ದೇಶಮುಖ್ ಮತ್ತು ಸಾಕಿಬ್ ಸಲೀಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಅವರು ಕೊನೆಯದಾಗಿ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಸಂಜಯ್ ದತ್ ಜೊತೆಯಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಆಗಸ್ಟ್ 13 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ OTT ಬಿಡುಗಡೆಯಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.