'ಮರ್ದ್ ಕಿ ಬಾಡಿ ವಾಲಿ' ಎಂದು ಟ್ರೋಲ್ ಮಾಡಿದ್ದಕ್ಕೆ ನಟಿ ತಪ್ಸಿ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?

ಬಾಲಿವುಡ್ ನಲ್ಲಿ ತಮ್ಮ ಮುಕ್ತ ಅಭಿಪ್ರಾಯಗಳಿಗಾಗಿ ಹೆಸರುವಾಸಿಯಾಗಿರುವ ನಟಿ ತಪ್ಸಿ ಪನ್ನು ಆಗಾಗ ತಮ್ಮ ಬೋಲ್ಡ್ ಉತ್ತರದಿಂದ ಗಮನ ಸೆಳೆಯುತ್ತಾರೆ.

Written by - ZH Kannada Desk | Last Updated : Sep 20, 2021, 08:17 PM IST
  • ಬಾಲಿವುಡ್ ನಲ್ಲಿ ತಮ್ಮ ಮುಕ್ತ ಅಭಿಪ್ರಾಯಗಳಿಗಾಗಿ ಹೆಸರುವಾಸಿಯಾಗಿರುವ ನಟಿ ತಪ್ಸಿ ಪನ್ನು ಆಗಾಗ ತಮ್ಮ ಬೋಲ್ಡ್ ಉತ್ತರದಿಂದ ಗಮನ ಸೆಳೆಯುತ್ತಾರೆ.
  • ಈಗ ಅವರು ತಮ್ಮ ಬಿಡುಗಡೆಯಾಗಲಿರುವ ರಶ್ಮಿ ರಾಕೆಟ್ ಚಿತ್ರಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸಿದ್ದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ.
  • ಇದಕ್ಕೆ ತಪ್ಸಿ ಪನ್ನು (Taapsee Pannu) ಕೂಡ ಅಷ್ಟೇ ಶಾಂತವಾಗಿ ಉತ್ತರ ನೀಡುವ ಮೂಲಕ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
'ಮರ್ದ್ ಕಿ ಬಾಡಿ ವಾಲಿ' ಎಂದು ಟ್ರೋಲ್ ಮಾಡಿದ್ದಕ್ಕೆ ನಟಿ ತಪ್ಸಿ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?

ನವದೆಹಲಿ: ಬಾಲಿವುಡ್ ನಲ್ಲಿ ತಮ್ಮ ಮುಕ್ತ ಅಭಿಪ್ರಾಯಗಳಿಗಾಗಿ ಹೆಸರುವಾಸಿಯಾಗಿರುವ ನಟಿ ತಪ್ಸಿ ಪನ್ನು ಆಗಾಗ ತಮ್ಮ ಬೋಲ್ಡ್ ಉತ್ತರದಿಂದ ಗಮನ ಸೆಳೆಯುತ್ತಾರೆ.

ಈಗ ಅವರು ತಮ್ಮ ಬಿಡುಗಡೆಯಾಗಲಿರುವ ರಶ್ಮಿ ರಾಕೆಟ್ ಚಿತ್ರಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸಿದ್ದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ.ಇದಕ್ಕೆ ತಪ್ಸಿ ಪನ್ನು (Taapsee Pannu) ಕೂಡ ಅಷ್ಟೇ ಶಾಂತವಾಗಿ ಉತ್ತರ ನೀಡುವ ಮೂಲಕ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಟಿಎಂಸಿಗೆ ಸೇರಿದ ನಂತರ ಬಾಬುಲ್ ಸುಪ್ರಿಯೋ ಭದ್ರತೆ ಕಡಿತಗೊಳಿಸಿದ ಕೇಂದ್ರ

ಸಾಮಾಜಿಕ ಮಾಧ್ಯಮದಲ್ಲಿ ಪನ್ನು ಅವರ ಅಥ್ಲೆಟಿಕ್ ದೇಹದ ರೂಪಾಂತರಕ್ಕೆ ಹಲವರು ಟ್ರೋಲ್ ಮಾಡಿ ಪುರುಷನ ದೇಹವನ್ನು ಹೊಂದಿದ್ದಾರೆ ಎಂದು ಬರೆದುಕೊಂಡಿದ್ದರು.ಇದಕ್ಕೆ ಶಾಂತವಾಗಿ ಉತ್ತರಿಸಿರುವ ಪನ್ನು, ಅಂತಹ ಪ್ರತಿಕ್ರಿಯೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಇದೇ ಅಕ್ಟೋಬರ್ 15 ರಂದು ಬಿಡುಗಡೆಯಾಗಲಿರುವ ರಶ್ಮಿ ರಾಕೆಟ್ ಚಿತ್ರಕ್ಕಾಗಿ ಅವರು ಅಥ್ಲೆಟಿಕ್ ಬಾಡಿಯಂತೆ ಹುರಿಗೊಳಿಸಿದ್ದರು.

"ನಾನು ಹೇಳುವುದೇನೆಂದರೆ ... ಈ ಸಾಲನ್ನು ನೆನಪಿಟ್ಟುಕೊಳ್ಳಿ ಮತ್ತು 23 ನೇ ಸೆಪ್ಟೆಂಬರ್‌ಗಾಗಿ ಕಾಯಿರಿ :)  ಈ ಅಭಿನಂದನೆಗಾಗಿ ನಿಜವಾಗಿಯೂ ಶ್ರಮಿಸಿದ್ದೇನೆ." ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವರಿಗೆ ನಟಿ ತಪ್ಸಿ ಪನ್ನು ಬಾಯ್ ಫ್ರೆಂಡ್ ಮೆಸೇಜ್..Reply ಏನ್ ಗೊತ್ತಾ?

ನಟಿ ತಪ್ಸಿ ಪನ್ನು ಅವರು 'ಲೂಪ್ ಲ್ಯಾಪೆಟಾ', 'ರಶ್ಮಿ ರಾಕೆಟ್', 'ಬ್ಲರ್ರ್' ಮತ್ತು ಅನುರಾಗ್ ಕಶ್ಯಪ್ ನಿರ್ದೇಶನದ 'ದೋಬಾರಾ' ಎಂಬ ವೈಜ್ಞಾನಿಕ ಥ್ರಿಲ್ಲರ್ ನಟಿಸುತ್ತಿದ್ದಾರೆ.ಕೊನೆಯ ಬಾರಿಗೆ ಅವರು ವಿಕ್ರಾಂತ್ ಮಾಸ್ಸೆ ಜೊತೆಯಲ್ಲಿ 'ಹಸೀನ್ ದಿಲ್ರುಬಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News