KCC-CCL ನಂತರ ಕಿಚ್ಚನ ನಡೆ ಯಾವ ಕಡೆ..?

Kichcha Sudeepa: ಕಿಚ್ಚನಿಗಿರುವ ಕ್ರಿಕೇಟ್ ಕ್ರೇಜ್ ಎಂತದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೀಗ ಕಿಚ್ಚ ತಮ್ಮ ಕ್ರಿಕೇಟ್ ಮ್ಯಾಚ್ ಗಳನ್ನೆಲ್ಲ ಮುಗಿಸಿ ವಿಶ್ರಾಂತಿಯಲ್ಲಿದ್ದಾರೆ. ಇದರ ನಡುವೆ ಇದೀಗ ಸುದೀಪ್ ಮುಂದಿನ ಸಿನಿಮಾದ ಚರ್ಚೆ ಶುರುವಾಗಿದೆ. 

Written by - K Karthik Rao | Edited by - Yashaswini V | Last Updated : Mar 27, 2023, 05:49 PM IST
  • ನಮ್ಮ ಸ್ಯಾಂಡಲ್ ವುಡ್ ತೆರೆ ಮೆರೆ ಮಿಂಚಿ ಮ್ಯಾಜಿಕ್ ಮಾಡ್ತಾಇದ್ದ ತಾರೆಯರಲ್ಲಿ ಕ್ರಿಕೇಟ್ ಕ್ರೇಜ್ ಎಬ್ಬಿಸಿ ಎಲ್ಲರನ್ನೂ ಒಗ್ಗೂಡಿಸಿ ಕೆ‌ಸಿ‌ಸಿ ಪಂದ್ಯ ಆಡಿಸಿದ್ದ ಸುದೀಪ್ ನಂತರ ಸಿ‌ಸಿ‌ಎಲ್ ಅಲ್ಲಿ ಫುಲ್ ಬ್ಯುಸಿಯಾಗಿದ್ದರು.
  • ಕರ್ನಾಟಕ ಬುಲ್ದೋಜರ್ಸ್ ತಂಡವನ್ನ ಉತ್ತಮವಾಗಿ ಮುನ್ನೆಡೆಸಿದ ಕ್ರೆಡಿಟ್ ಕಿಚ್ಚನಿಗೂ ಸೇರುತ್ತೆ.
  • ಈ ಭಾರಿಯ ಸಿ‌ಸಿ‌ಎಲ್ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿತ್ತು ಕರ್ನಾಟಕ ಬುಲ್ಡೋಜರ್ಸ್ ತಂಡ. ಮೊದಲ ಪಂದ್ಯದಿಂದ ಗೆಲುವಿನ ನೀರಿಕ್ಷೆ ಹುಟ್ಟಿಸಿದ್ದ ತಂಡ
KCC-CCL ನಂತರ ಕಿಚ್ಚನ ನಡೆ ಯಾವ ಕಡೆ..? title=
Kichcha Sudeepa

Kiccha Sudeep: ಕನ್ನಡ ಚಲನಚಿತ್ರ ಕಪ್(KCC), ಸೆಲೆಬ್ರಿಟಿ ಕ್ರಿಕೇಟ್ ಲೀಗ್(CCL) ಪಂದ್ಯಗಳಲ್ಲಿ ಬ್ಯುಸಿಯಾಗಿದ್ದ ಕಿಚ್ಚ ಸುದೀಪ್ ಮುಂದಿನ ನಡೆ ಯಾವ ಕಡೆ ಎಂಬ ಟಾಕ್ ಶುರುವಾಗಿದೆ.

ನಮ್ಮ ಸ್ಯಾಂಡಲ್ ವುಡ್ ತೆರೆ ಮೆರೆ ಮಿಂಚಿ ಮ್ಯಾಜಿಕ್ ಮಾಡ್ತಾಇದ್ದ ತಾರೆಯರಲ್ಲಿ ಕ್ರಿಕೇಟ್ ಕ್ರೇಜ್ ಎಬ್ಬಿಸಿ ಎಲ್ಲರನ್ನೂ ಒಗ್ಗೂಡಿಸಿ  ಕೆ‌ಸಿ‌ಸಿ ಪಂದ್ಯ ಆಡಿಸಿದ್ದ ಸುದೀಪ್ ನಂತರ ಸಿ‌ಸಿ‌ಎಲ್ ಅಲ್ಲಿ ಫುಲ್ ಬ್ಯುಸಿಯಾಗಿದ್ದರು. ಕರ್ನಾಟಕ ಬುಲ್ದೋಜರ್ಸ್ ತಂಡವನ್ನ ಉತ್ತಮವಾಗಿ ಮುನ್ನೆಡೆಸಿದ ಕ್ರೆಡಿಟ್ ಕಿಚ್ಚನಿಗೂ ಸೇರುತ್ತೆ. ಈ ಭಾರಿಯ ಸಿ‌ಸಿ‌ಎಲ್ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿತ್ತು ಕರ್ನಾಟಕ ಬುಲ್ಡೋಜರ್ಸ್ ತಂಡ. ಮೊದಲ ಪಂದ್ಯದಿಂದ ಗೆಲುವಿನ ನೀರಿಕ್ಷೆ ಹುಟ್ಟಿಸಿದ್ದ ತಂಡ ಸೆಮಿಫೈನಲ್ಸ್ ಅಲ್ಲಿ ಸೊಲನ್ನ ಕಂಡು ಸಿ‌ಸಿ‌ಎಲ್ನಿಂದ ಹೊರಬಂದಿದೆ. 

ಇದನ್ನೂ ಓದಿ- ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್​ನ 2ನೇ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ!

ಕಿಚ್ಚನಿಗಿರುವ ಕ್ರಿಕೇಟ್ ಕ್ರೇಜ್ ಎಂತದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೀಗ ಕಿಚ್ಚ ತಮ್ಮ ಕ್ರಿಕೇಟ್ ಮ್ಯಾಚ್ ಗಳನ್ನೆಲ್ಲ ಮುಗಿಸಿ ವಿಶ್ರಾಂತಿಯಲ್ಲಿದ್ದಾರೆ. ಇದರ ನಡುವೆ ಇದೀಗ ಸುದೀಪ್ ಮುಂದಿನ ಸಿನಿಮಾದ ಚರ್ಚೆ ಶುರುವಾಗಿದೆ. ಕಾರಣ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಹುಟ್ಟುಹಬ್ಬದಂದು ಮಾಡಿದ್ದ ಆ ಒಂದು ಟ್ವೀಟ್ ಇದೀಗ ಸದ್ದು ಮಾಡ್ತಾ ಇದೆ.  

'ಬಿ' ಗಿಯಾಗ್ ಕೂತ್ಕೋಳಿ, 'ರಂ' ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು, 'ಬಾ' ಡೂಟದ್ ಜೊತೆ ಬರ್ತೀವಿ.  ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ -Be Right Back!. ಇದು ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದರು. ಇದ್ದನ್ನ ಗಮನಿಸಿದರೆ ಬಿಲ್ಲರಂಗಭಾಷ ಸಿನಿಮಾದ ಸುಳಿವು ಸಿಗುತ್ತೆ. ಸುದೀಪ್ ಬಿಲ್ಲರಂಗಭಾಷ ಸಿನಿಮಾ ಮಾಡ್ತಾ ಇದ್ದಾರೆ ಎಂಬುದು ತಿಳಿದಿರುವ ವಿಷಯ, ಆದ್ರೆ ಯಾವಾಗ ಎಂಬುದು ಎಲ್ಲೂ ಕೂಡ ಮಾಹಿತಿ ಹೊರಬಿದ್ದಿಲ್ಲ. 

ಇದನ್ನೂ ಓದಿ- ಕಿಚ್ಚ ಸುದೀಪ್ ನಿತ್ಯ ಮಿಸ್ ಇಲ್ಲದೆ ಮಾಡೋ ಕೆಲಸ ಏನು ಗೊತ್ತಾ....?

ಇದೀಗ ಕಿಚ್ಚನ ಬಳಿ ಹಲವು ಸಿನಿಮಾ ಪ್ರಾಜೆಕ್ಟ್ ಗಳು ಇದ್ದು ಯಾವುದು ಮೊದಲು ಸೆಟ್ಟೇರುತ್ತೆ, ಯಾವುದು ಮೊದಲು ತೆರೆ ಕಾಣುತ್ತೆ ಎಂಬ ಪ್ರಶ್ನೆಗಳಿಗೆ ಉತ್ತರ ಸುದೀಪ್ ರವರ ಬಳಿಯೇ ಇದೆ. ಆದರೆ ಎಲ್ಲೂ ಕೂಡ ಈ ಸಂಬಂಧ ಸುದೀಪ್ ಮಾಹಿತಿ ನೀಡಿಲ್ಲ. ವಿಕ್ರಾಂತ್ ರೋಣ, ಕಬ್ಜ ನಂತರ ಕಿಚ್ಚನನ್ನ ತೆರೆಮೇಲೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News