Kichcha Sudeep : ಚಿಕ್ಕಬಳ್ಳಾಪುರ ಉತ್ಸವದಲ್ಲಿ 'ಕಿಚ್ಚ ಸುದೀಪ್ ಹವಾ', ಹೇಗಿದೆ ನೋಡಿ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಸುಧಾಕರ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ 'ಚಿಕ್ಕಬಳ್ಳಾಪುರ ಉತ್ಸವ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಈ ಉತ್ಸವವು ಉತ್ಸವವನ್ನು ಜ. 7 ರಿಂದ 14 ರವರೆಗೆ ನಡೆಯಲಿದೆ. 

Written by - Channabasava A Kashinakunti | Last Updated : Jan 7, 2023, 11:45 PM IST
  • ಚಿಕ್ಕಬಳ್ಳಾಪುರ ಉತ್ಸವ 2023
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಇಂದಿನಿಂದ ಅಂದರೆ, ಜ. 7 ರಿಂದ 14 ರವರೆಗೆ
Kichcha Sudeep : ಚಿಕ್ಕಬಳ್ಳಾಪುರ ಉತ್ಸವದಲ್ಲಿ 'ಕಿಚ್ಚ ಸುದೀಪ್ ಹವಾ', ಹೇಗಿದೆ ನೋಡಿ! title=

ಚಿಕ್ಕಬಳ್ಳಾಪುರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಸುಧಾಕರ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ 'ಚಿಕ್ಕಬಳ್ಳಾಪುರ ಉತ್ಸವ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಸಂಜೆ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರ ಜೊತೆ ನಟ ಕಿಚ್ಚ ಸುದೀಪ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕಿಚ್ಚನ ಫ್ಯಾನ್ಸ್ ನೋಡಿ ಸಿಎಂ ಕೂಡ ದಂಗಾಗಿದ್ದಾರೆ.

ಇಂದು ಮಧ್ಯಾಹ್ನ 2:00 ಗಂಟೆಗೆ ನಗರದ ಶ್ರೀಮರಳು ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಿಕ್ಕಬಳ್ಳಾಪುರ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.

ಇದನ್ನೂ ಓದಿ : Kranti Trailer Review : ಕ್ಲಾಸ್ ಮಾಸ್ ನ ಸಮ್ಮಿಶ್ರಣದೊಂದಿಗೆ ಅಬ್ಬರಿಸಿದ ಡಿಬಾಸ್ ಕ್ರಾಂತಿ..!

ಚಿಕ್ಕಬಳ್ಳಾಪುರ ಉತ್ಸವಕ್ಕಾಗಿ ಇಡೀ ನಗರಕ್ಕೆ ವಿದ್ಯುತ್ ದೀಪಗಳಿಂದ ಭರ್ಜರಿ ಅಲಂಕಾರ ಮಾಡಲಾಗಿದೆ. ಈ ಉತ್ಸವವು ಇಂದಿನಿಂದ ಅಂದರೆ, ಜ. 7 ರಿಂದ 14 ರವರೆಗೆ ನಡೆಯಲಿದೆ.

ಕಿಚ್ಚ ಸುದೀಪ್ ಉದ್ಘಾಟನಾ ಕಾರ್ಯಕ್ರಮದ ವೇದಿಕೆಗೆ ಆಗಮಿಸುತ್ತ ಅಲ್ಲಿ ಕುಳಿತ್ತಿದ್ದ ಗಣ್ಯ ವ್ಯಕ್ತಿಗಳಿಗೆ ಕೈ ಮುಗಿಯುತ್ತ ಬಂದು ಸಿಎಂ ಬೊಮ್ಮಾಯಿ ಅವರ ಕಾಲಿಗೆ ನಮಸ್ಕರಿಸಿ, ತಬ್ಬಿಕೊಂಡುರು. ಇದಕ್ಕೂ ಮೊದಲೇ ಕಿಚ್ಚನ ಫ್ಯಾನ್ಸ್ ಕೇಕೆ ಹಾಕುತಿದ್ದರು. ಸಿಎಂ ಅವರನ್ನ ತಬ್ಬಿಕೊಂಡ ಮೇಲೆ ಕಿಚ್ಚ.. ಕಿಚ್ಚ.. ಕಿಚ್ಚ ಎಂದು ಜೋರಾಗಿ ಕೂಗಲು ಆರಂಭಿಸಿದರು. ಅಷ್ಟರಲ್ಲೇ ನಟ ಸುದೀಪ್ ವೇದಿಕೆ ಮೇಲಿದ್ದ ಗಣ್ಯರಿಗೆ ಥ್ಯಾಂಕ್ಸ್ ಕೊಡುತ್ತ ಅಭಿಮಾನಿಗಳತ್ತ ತಿರುಗಿ, ಫ್ಲೈಯಿಂಗ್ ಕಿಸ್ ಕೊಟ್ಟರು ಇದಕ್ಕೆ ಅಭಿಮಾನಿಗಳು ಜೋರಾಗಿ ಕಿಚ್ಚ ಕಿಚ್ಚ ಎಂದು ಕೂಗಿದರು.

ಇದನ್ನೂ ಓದಿ : Kranti trailer : ಡಿಬಾಸ್‌ ʼಕ್ರಾಂತಿʼ ಅಬ್ಬರಕ್ಕೆ ಯೂಟ್ಯೂಬ್‌ ಧೂಳಿಪಟ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News