"ಸುದೀಪ್ ಮತ್ತು ದರ್ಶನ್ ಒಂದಾದರೆ ಚಿತ್ರರಂಗ ನಂದನವನವಾಗುತ್ತದೆ"- ನಟ ಜಗ್ಗೇಶ್

 

Written by - Zee Kannada News Desk | Last Updated : Dec 22, 2022, 01:37 AM IST
  • ಕನ್ನಡ ಚಿತ್ರರಂಗ ಎಲ್ಲಾ ನಟ ನಟಿಯರು ಈ ಕಿಡಿಗೇಡಿ ಕೃತ್ಯಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
  • ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಟಿಪ್ಪಣಿಯೊಂದನ್ನು ಬರೆದುಕೊಂಡು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
  • ಈಗ ಆ ನಿಟ್ಟಿನಲ್ಲಿಇಬ್ಬರು ನಟರು ಮುಂದಾಗಲಿ ಎನ್ನುವುದು ನಾಡಿನ ಎಲ್ಲ ಅಭಿಮಾನಿಗಳ ಆಶಯವಾಗಿದೆ
"ಸುದೀಪ್ ಮತ್ತು ದರ್ಶನ್ ಒಂದಾದರೆ ಚಿತ್ರರಂಗ ನಂದನವನವಾಗುತ್ತದೆ"- ನಟ ಜಗ್ಗೇಶ್  title=
file photo

ಬೆಂಗಳೂರು: ಹೊಸಪೇಟೆಯಲ್ಲಿ ಚಾಲೆಂಜಿಂಗ್ ದರ್ಶನ್ ಅವರ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆಯುವ ಮೂಲಕ ಹೇಯ ಕೃತ್ಯವನ್ನು ಎಸೆಗಿದ್ದರು.

ಇದಾದ ಬೆನ್ನಲ್ಲೇ ಕನ್ನಡ ಚಿತ್ರರಂಗ ಎಲ್ಲಾ ನಟ ನಟಿಯರು ಈ ಕಿಡಿಗೇಡಿ ಕೃತ್ಯಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.ಅದರಲ್ಲೂ ಕಿಚ್ಚ ಸುದೀಪ್ ಅವರು ತಮ್ಮ ಸ್ನೇಹಿತನ ಮೇಲಾಗಿರುವ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಟಿಪ್ಪಣಿಯೊಂದನ್ನು ಬರೆದುಕೊಂಡು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: "ಬೇರೆ ಪಕ್ಷಗಳು ಸೋಲುತ್ತವೆ ಎಂದು ಆ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಕಡಿಮೆ ಇದ್ದಾರೆ"

ಈಗ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಅಷ್ಟೇ ಅಲ್ಲದೆ ಇನ್ನೊಂದು ವಿಶೇಷವೆಂದರೆ ಈಗ ದರ್ಶನ್ ಅವರು ಈ ಟಿಪ್ಪಣಿಗೆ ಪ್ರತಿಕ್ರಿಯಿಸುತ್ತಾ “ ಕಿಚ್ಚ ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿರುವುದು ಎಲ್ಲ ಅಭಿಮಾನಿಗಳು ಸಂತವನ್ನು ತಂದಿದೆ.ಹೌದು, ಈಗ ತಮ್ಮ ಎಲ್ಲಾ ಹಿಂದಿನ ಮನಸ್ತಾಪವನ್ನು ಹಿಂದಿಕ್ಕಿ ಈಗ ಪರಸ್ಪರ ಒಂದಾಗಿರುವುದು ಚಿತ್ರರಂಗಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಅವರು ಪ್ರೀತಿಯ ದರ್ಶನ್ ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ  ಮುನ್ನುಡಿ ಬರೆದು ಕಿಚ್ಚ ಸುದೀಪ್ ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲುಹರಸಿ. ನೀವಿಬ್ಬರು ಒಂದಾದರೆ ಕೋಟಿಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ! ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!

ಹೌದು, ಕನ್ನಡ ಚಿತ್ರ ರಂಗದ ದಿಗ್ಗಜ ನಟರಾಗಿರುವ ಸುದೀಪ್ ಮತ್ತು ದರ್ಶನ್ ಅವರು ಒಂದಾದರೆ ಬಾಕ್ಸ್ ಆಫೀಸ್ ನಲ್ಲಂತೂ ಹೊಸ ಭಾಷ್ಯಯನ್ನು ಬರೆಯುವಂತಹ ಸಾಮರ್ಥ್ಯವಿದೆ.ಈಗ ಆ ನಿಟ್ಟಿನಲ್ಲಿಇಬ್ಬರು ನಟರು ಮುಂದಾಗಲಿ ಎನ್ನುವುದು ನಾಡಿನ ಎಲ್ಲ ಅಭಿಮಾನಿಗಳ ಆಶಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News