ಕಿಚ್ಚನ 46ನೇ ಚಿತ್ರಕ್ಕೆ ಕಬಾಲಿ ನಿರ್ಮಾಪಕರ ಬಂಡವಾಳ,ಸಿನಿಮಾ ಟೈಟಲ್‌ ಏನು?

Kichha Sudeep : ವಿಕ್ರಾಂತ್‌ ರೋಣ ಸಿನಿಮಾದ ಯಶಸ್ಸಿನ ನಂತರ ಒಂದು ವರ್ಷದ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದ ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್‌ ಯಾವುದೇ ಹೊಸ ಚಿತ್ರಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಂತರ ಇತ್ತೀಚೆಗೆ ಇವರು ಚುನಾವಣಾ ಪ್ರಚಾರದಲ್ಲಿ ತೊಡಿದ್ದರು.  

Written by - Zee Kannada News Desk | Last Updated : May 25, 2023, 08:43 AM IST
  • ಕಿಚ್ಚ ಸುದೀಪ್‌ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವ ಮುನ್ನ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು
  • ತಾವು ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು.
  • ಆ ಪೈಕಿ ಇದೀಗ 46ನೇ ಸಿನಿಮಾದ ಪ್ರೋಮೋ ಶೂಟ್‌ ಪೂರ್ಣಗೊಂಡಿದ್ದು, ಚಿತ್ರತಂಡ ವಿಡಿಯೋ ತುಣುಕೊಂದನ್ನು ಶೇರ್‌ ಮಾಡಿಕೊಂಡಿದೆ.
ಕಿಚ್ಚನ 46ನೇ ಚಿತ್ರಕ್ಕೆ ಕಬಾಲಿ ನಿರ್ಮಾಪಕರ ಬಂಡವಾಳ,ಸಿನಿಮಾ ಟೈಟಲ್‌ ಏನು?  title=

Kichha sudeep next movie : ಕಿಚ್ಚ ಸುದೀಪ್‌ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವ ಮುನ್ನ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಅದೇನೆಂದರೆ ತಾವು ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. ಆ ಪೈಕಿ ಇದೀಗ 46ನೇ ಸಿನಿಮಾದ ಪ್ರೋಮೋ ಶೂಟ್‌ ಪೂರ್ಣಗೊಂಡಿದ್ದು, ಚಿತ್ರತಂಡ ವಿಡಿಯೋ ತುಣುಕೊಂದನ್ನು ಶೇರ್‌ ಮಾಡಿಕೊಂಡಿದೆ.

ಪ್ಯಾನ್‌ ಇಂಡಿಯಾ ಮಾದರಿಯ ಚಿತ್ರಗಳಲ್ಲಿ ನಟಿಸುತ್ತಿರುವ ಕಿಚ್ಚ ಸುದೀಪ್‌, ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್‌ಪ್ರಭು ಜೊತೆ ಕೈಜೋಡಿಸುತ್ತಿದ್ದಾರೆ ಎನ್ನುವ ಗುಸು ಗುಸು ಸುದ್ದಿಗಳು ಕೇಳಿಬಂದಿದ್ದವು. ಸದ್ಯ ಶೇರ್‌ ಮಾಡಲಾಗಿರುವ ವಿಡಿಯೋದಲ್ಲಿ ನಿರ್ದೇಶಕರು ಮತ್ತು ಚಿತ್ರತಂಡದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರಲ್ಲಿ ಕಿಚ್ಚ ಸುದೀಪ್‌ ಪ್ರೋಮೋ ಶೂಟ್‌ಗಾಗಿ ತಯಾರಿ ನಡೆಸಿರುವ ದೃಶ್ಯಗಳಿದ್ದು, ಹೆಚ್ಚಿನ ವಿವರಗಳನ್ನು ಟೀಸರ್‌ ಮೂಲಕ ಹಂಚಿಕೊಳ್ಳುವುದಾಗಿ ತಿಳಿಸಲಾಗಿದೆ. 

ಇದನ್ನೂ ಓದಿ-ಮಾಸ್‌ ಮಹಾರಾಜನ ʼಟೈಗರ್‌ ನಾಗೇಶ್ವರ್‌ ರಾವ್‌ʼ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌

ರಜನಿಕಾಂತ್‌ ನಟಿಸಿರುವ ʼಕಬಾಲಿʼ ಮತ್ತು ಧನುಷ್‌ ಅಭಿನಯದ ʼಅಸುರನ್‌ʼ ಚಿತ್ರಗಳಿಗೆ ಬಂಡವಾಳ ಹೂಡಿದ್ದ ತಮಿಳಿನ ಖ್ಯಾತ ನಿರ್ಮಾಪಕ ʼಕಲೈಪುಲಿʼ ಖ್ಯಾತಿಯ ಎಸ್.‌ ಧನು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ʼವಿ ಕ್ರಿಯೇಷನ್ಸ್‌ʼ ಬ್ಯಾನರ್‌ನಡಿ ಸುದೀಪ್‌ ಅವರ 46ನೇ ಸಿನಿಮಾ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.

ಎಸ್.‌ ಧನು ಸುದೀಪ್‌ ಅವರ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವದು ಖಚಿತವಾಗುತ್ತಲೇ, ನಿರೀಕ್ಷೆಯಂತೆ ವೆಂಕಟ್‌ ಪ್ರಭು ಅವರೇ ಕಿಚ್ಚನ 46ನೇ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಾರೆ ಎಂದು ಅಭಿಮಾನಿಗಳ ಚರ್ಚೆಯಾಗಿದೆ. 

 

ಇದನ್ನೂ ಓದಿ-"ನಾನು ಪ್ರಿಯಾಂಕಾ ಚೋಪ್ರಾಳ ಅಂಡರ್ ವೇರ್ ನೋಡಬೇಕು" ಎಂದಿದ್ದ ಸಿನಿಮಾ ನಿರ್ದೇಶಕ...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News