ಮತ್ತೆ ಒಂದಾಗುತ್ತಾರಾ ಸಮಂತಾ-ನಾಗ ಚೈತನ್ಯ? ಹಿಂಟ್‌ ಸಿಕ್ಕೆ ಬಿಡ್ತು..!

Samantha-Nag Chaitanya: ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಅವರ ಇನ್‌ಸ್ಟಾ ಪೋಸ್ಟ್ ಅವರು ಮತ್ತೆ ಒಂದಾಗುತ್ತಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.  

Written by - Savita M B | Last Updated : Oct 9, 2023, 01:06 PM IST
  • ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
  • ವಿಚ್ಛೇದನದ ನಂತರ ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
  • ಇತ್ತೀಚೆಗೆ ಅವರು ಮತ್ತೆ ಒಂದಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಮತ್ತೆ ಒಂದಾಗುತ್ತಾರಾ ಸಮಂತಾ-ನಾಗ ಚೈತನ್ಯ? ಹಿಂಟ್‌ ಸಿಕ್ಕೆ ಬಿಡ್ತು..!  title=

Samantha-Nag Chaitanya reunite: ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ಇಬ್ಬರೂ ಸಿನಿಮಾದತ್ತ ಗಮನ ಹರಿಸಿದರು. ಇದೆಲ್ಲದರ ಮಧ್ಯ 2021 ರಲ್ಲಿ, ಇಬ್ಬರೂ ಒಟ್ಟಿಗೆ ವಿಚ್ಛೇದನ ಮತ್ತು ಬೇರ್ಪಡುವುದಾಗಿ ಘೋಷಿಸುವ ಮೂಲಕ ಶಾಕ್ ನೀಡಿದ್ದರು. ಆದರೆ ಅವರು ಏಕೆ ವಿಚ್ಛೇದನ ಪಡೆದರು ಮತ್ತು ಬೇರ್ಪಟ್ಟರು ಎಂಬುದು ಇನ್ನೂ ನಿಗೂಢವಾಗಿದೆ.

ವಿಚ್ಛೇದನದ ನಂತರ ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಇಬ್ಬರೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಾಗ ಚೈತನ್ಯ ಅವರು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದೇ ರೀತಿ ನಟಿ ಸಮಂತಾ, ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಸದ್ಯ ಬಾಲಿವುಡ್ ನಲ್ಲಿ ಅವರ ನಟನೆಯಲ್ಲೇ ಸಿಟಾಡೆಲ್ ಎಂಬ ವೆಬ್ ಸೀರೀಸ್ ಕೂಡ ತಯಾರಾಗುತ್ತಿದೆ.

ಇದನ್ನೂ ಓದಿ-ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌

ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಬೇರ್ಪಟ್ಟು ಸುಮಾರು 2 ವರ್ಷಗಳಾದವು. ಆದರೆ ಇತ್ತೀಚೆಗೆ ಅವರು ಮತ್ತೆ ಒಂದಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇದಕ್ಕೆ ಕಾರಣ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು. ಕೆಲವು ತಿಂಗಳ ಹಿಂದೆ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಗ ಚೈತನ್ಯ ಜೊತೆಗಿನ ಫೋಟೋವನ್ನು ಅನ್ ಆರ್ಕೈವ್ ಮಾಡಿದ್ದರು.

ಇದೀಗ ನಟ ನಾಗ ಚೈತನ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮುದ್ದಿನ ನಾಯಿಯೊಂದಿಗೆ ಕಾರ್ ರೈಡ್ ಎಂಜಾಯ್ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಸಮಂತಾ ಜೊತೆಗಿದ್ದ ನಾಯಿ ಮರಿ ಈಗ ನಾಗ ಚೈತನ್ಯ ಬಳಿ ಇರುವುದನ್ನು ನೋಡಿ ಮತ್ತೆ ಇವರಿಬ್ಬರು ಒಂದಾಗುತ್ತಾರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. 

ಇದನ್ನೂ ಓದಿ-ನಯನತಾರಾ ಮನೆಯಲ್ಲಿದೆ ಕೋಟಿಗಟ್ಟಲೆ ಬೆಲೆ ಬಾಳುವ ನಾಯಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News