ಬೆಂಗಳೂರು : ಚಂದನವನದಿಂದ ಒಳ್ಳೊಳ್ಳೆ ಕಂಟೆಂಟ್ ಇರೋ ಅದ್ಭುತ ಸಿನಿಮಾಗಳು ಬರುತ್ತಿವೆ. ವಿಶ್ವದೆಲ್ಲೆಡೆ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲೇ ಸೌಂಡ್ ಮಾಡಲು ಶುರು ಮಾಡಿವೆ. ಕಾಂತಾರ ಮತ್ತು KGF ಪಾರ್ಟ್ ಒಂದು ಹಾಗೂ ಎರಡರ ಬಗ್ಗೆ ಎಲ್ಲೆಡೆ ಇಂದಿಗೂ ಚರ್ಚೆಯಾಗುತ್ತಲೇ ಇದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನ ಭೇಟಿಯಾಗಿ ಸಿನಿಮಾ ರಂಗದ ಬಗ್ಗೆ ತಮಗಿರೋ ಕಾಳಜಿಯ ಬಗ್ಗೆ ಮಾತನಾಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಳಿ ಮಾತನಾಡಿದ ಮೋದಿ ಸರ್ಕಾರದಿಂದ ಚಿತ್ರರಂಗದವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುವ ಬಗ್ಗೆ ವಿಚಾರಿಸಿದ್ದಾರೆ. ಚಿತ್ರರಂಗವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚರ್ಚಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ : ಮತ್ತೆ ಸಿನಿಮಾ ಮಾಡ್ತಾರಾ ಚೆಲುವಿನ ಚಿತ್ತಾರ ಬೆಡಗಿ 'ಐಶು'!
ಇನ್ನೂ ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ಮೋದಿ ಅವರ ಜೊತೆ ಕಳೆದ ಸಮಯವನ್ನು ಕನಸು ನನಸಾದ ಕ್ಷಣ ಎಂದು ಬಣ್ಣಿಸಿದ್ದಾರೆ. ಪ್ರಧಾನ ಮಂತ್ರಿ ಅವರನ್ನು ನಾನು ಮಹಾನ್ ನಾಯಕರೆಂದು ತಿಳಿದಿದ್ದೇನೆ. ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬ ಖುಷಿ ಆಯಿತು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನೂ ಏನೆಲ್ಲ ಬೇಕು ಎಂಬ ಬಗ್ಗೆ ಅವರು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಏನೆಲ್ಲ ಮಾಡಬಹುದು ಎಂಬುದನ್ನೂ ಹೇಳಿದ್ದಾರೆ ಎಂದು ಖಾಸಗಿ ವಾಹಿನಿಗೆ ಮಾಹಿತಿ ಕೊಟ್ಟಿದ್ದಾರೆ.
ಅದೇನೇ ಇರಲಿ ಪ್ರತಿಭೆಗಳನ್ನ ಗುರುತಿಸಿ ಅವರೊಂದಿಗೆ ದೇಶದ ಪ್ರಧಾನಿ ಸಮಯ ಕಳೆದಿದ್ದಾರೆ ಅನ್ನೋದು ನಿಜಕ್ಕೂ ಅಚ್ಚರಿ ಮತ್ತು ಉತ್ತಮ ಬೆಳವಣಿಗೆ.
ಇದನ್ನೂ ಓದಿ : ಮಗ ಅಕ್ಷಿತ್ ನಟನೆಯ 'ಖೆಯೊಸ್' ಸಿನಿಮಾದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.