ಮತ್ತೆ ಸಿನಿಮಾ ಮಾಡ್ತಾರಾ ಚೆಲುವಿನ ಚಿತ್ತಾರ ಬೆಡಗಿ 'ಐಶು'!

ಒಂದು ಕಾಲದಲ್ಲಿ ಅಮೂಲ್ಯ ಅಂದ್ರೆ ಸಾಕು ಫ್ಯಾನ್ಸ್  ಹುಚ್ಚೆದ್ದು ಕುಣಿಯುತ್ತಿದ್ದರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಅಮೂಲ್ಯ ಜಗದೀಶ್ ಚಂದ್ರ ಅವರನ್ನ ವಿವಾಹವಾಗಿ ಎರಡು ಅವಳಿ ಮಕ್ಕಳ ತಾಯಿಯಾಗಿದ್ದಾರೆ.

Written by - YASHODHA POOJARI | Last Updated : Feb 14, 2023, 12:39 PM IST
  • ನಟಿ ಅಮೂಲ್ಯ ಮತ್ತೇ ಸಿನಿಮಾಗಳನ್ನ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ.
  • ರಾಜಕೀಯ ಕುಟುಂಬದ ಸೊಸೆಯಾಗಿರೋ ಅಮೂಲ್ಯ ಸಿನಿಮಾ ಮಾಡುತ್ತಾರಾ ಅಥವಾ ರಾಜಕೀಯ ಕಡೆ ಹೋಗುತ್ತಾರಾ ಅನ್ನೋ ಪ್ರಶ್ನೆ ಕಾಡುತ್ತಲೇ ಇದೆ.
ಮತ್ತೆ ಸಿನಿಮಾ ಮಾಡ್ತಾರಾ ಚೆಲುವಿನ ಚಿತ್ತಾರ ಬೆಡಗಿ 'ಐಶು'! title=
Actress Amulya

ಬಾಲ ನಟಿಯಾಗಿ ಬಣ್ಣ ಹಚ್ಚಿ ಹೆಸರು ಮಾಡಿದ್ದ ನಟಿ ಅಮೂಲ್ಯ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಚೆಲುವಿನ ಚಿತ್ತಾರ' ಅನ್ನೋ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಚಂದನವನದಲ್ಲಿ ಬಹುಬೇಡಿಕೆಯ ನಟಿಯಾದರು.

ಒಂದು ಕಾಲದಲ್ಲಿ ಅಮೂಲ್ಯ ಅಂದ್ರೆ ಸಾಕು ಫ್ಯಾನ್ಸ್  ಹುಚ್ಚೆದ್ದು ಕುಣಿಯುತ್ತಿದ್ದರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಅಮೂಲ್ಯ ಜಗದೀಶ್ ಚಂದ್ರ ಅವರನ್ನ ವಿವಾಹವಾಗಿ ಎರಡು ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಎರಡು ಮಕ್ಕಳ ತಾಯಿಯಾದ್ರೂ ಇವತ್ತಿಗೂ ಅವರ ಸೌಂದರ್ಯವನ್ನ ಹಾಗೇ ಮೇಂಟೈನ್ ಮಾಡಿದ್ದಾರೆ. ಇದೀಗ ಅವರ ಅಭಿಮಾನಿಗಳು ಮತ್ತೇ ಸಿನಿಮಾ ಮಾಡುತ್ತಾರಾ ಅಮೂಲ್ಯ ಅನ್ನೋ ಪ್ರಶ್ನೆ ಕೇಳುತ್ತಲೇ ಇದ್ದಾರೆ. ಅದಕ್ಕೆ ಅಮೂಲ್ಯ ಕಡೆಯಿಂದ ಇನ್ನೂ ಯಾವುದೇ ರೀತಿಯ ಉತ್ತರ ಬಂದಿಲ್ಲ.

ಇದನ್ನೂ ಓದಿ- ಅಪ್ಪು ಕನಸಿನ ಕೂಸು 'ಗಂಧದಗುಡಿ' ಬಗ್ಗೆ ಪತ್ನಿ ಅಶ್ವಿನಿ ಪುನೀತ್ ಜೊತೆ ಮಾತನಾಡಿದ ಪ್ರಧಾನಿ ಮೋದಿ..!

ಅಮೂಲ್ಯ ಇವರು 14 ಸೆಪ್ಟೆಂಬರ್ 1993 ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿರುವ ಅಮೂಲ್ಯ ತಾಯಿ ಜಯಮ್ಮನ ಮಡಿಯಲಲ್ಲಿ ಬೆಳೆದರು. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರು ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್, ಭರತ ನಾಟ್ಯ, ಡಾನ್ಸ್ ಗಳಲ್ಲಿ ಆಸಕ್ತಿ ಹೊಂದಿದ್ದರು.

ಇದನ್ನೂ ಓದಿ- ಆಧ್ಯಾತ್ಮದತ್ತ ವಾಲುತ್ತಿದ್ದಾರಾ ಸಮಂತಾ ? ಏನು ಹೇಳುತ್ತಿದೆ ಈ ಫೋಟೋಗಳು ?

ನಟಿ ಅಮೂಲ್ಯ ಮತ್ತೇ ಸಿನಿಮಾಗಳನ್ನ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ. ರಾಜಕೀಯ ಕುಟುಂಬದ ಸೊಸೆಯಾಗಿರೋ ಅಮೂಲ್ಯ ಸಿನಿಮಾ ಮಾಡುತ್ತಾರಾ ಅಥವಾ ರಾಜಕೀಯ ಕಡೆ ಹೋಗುತ್ತಾರಾ ಅನ್ನೋ ಪ್ರಶ್ನೆ ಕಾಡುತ್ತಲೇ ಇದೆ. ಸದ್ಯ ಇದೀಗ ತಮ್ಮ ಮುದ್ದು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ನಟಿ ಅಮೂಲ್ಯ ಮತ್ತೆ ಬೆಳ್ಳಿ ಪರದೆ ಮೇಲೆ ಯಾವಾಗಾ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾಡು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News