Yash Viral Photo: ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟ ಯಶ್ ಅವರ ಪ್ಯಾನ್-ಇಂಡಿಯಾ ಫಿಲ್ಮ್ ಫ್ರ್ಯಾಂಚೈಸ್ ಕೆಜಿಎಫ್‌ನ ಯಶಸ್ಸಿನ ನಂತರ ಅವರೊಬ್ಬ ನ್ಯಾಷನಲ್ ಐಕಾನ್ ಆಗಿದ್ದಾರೆ. ಕೆಜಿಎಪ್‌ನ ಎರಡೂ ಪಾರ್ಟ್‌ಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆದವು ಮತ್ತು ಅವರಿಗೆ ದೇಶದಲ್ಲಿ ಸಾಕಷ್ಟು ಮನ್ನಣೆಯನ್ನು ನೀಡಿತು. ಕೆಜಿಎಫ್ 2 ಬಿಡುಗಡೆಯಾದ ನಂತರ, ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಆದರೆ ಇದು ವರೆಗೂ ಮುಂದಿನ ಯೋಜನೆಗಳನ್ನು ಸಹ ಬಹಿರಂಗಪಡಿಸಿಲ್ಲ. ಇದೀಗ ಯಶ್ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿತ್ರದಲ್ಲಿ ಯಶ್ ಕಂದು ಬಣ್ಣದ ಶರ್ಟ್ ಧರಿಸಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕ್ಯಾಮೆರಾದ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅವರ ಮುಂಬರುವ ಚಿತ್ರದ ಸೆಟ್‌ಗಳಿಂದ ಲೀಕ್ ಆಗಿದೆ ಎಂದು ಅನೇಕರು ಊಹಿಸಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಅವರಲ್ಲಿ ಹಲವರು ತಮ್ಮ ನೆಚ್ಚಿನ ಸೂಪರ್‌ಸ್ಟಾರ್ ತಮ್ಮ ಮುಂದಿನ ಚಿತ್ರವನ್ನು ಯಾವಾಗ ಅಧಿಕೃತವಾಗಿ ಘೋಷಿಸುತ್ತಾರೆ ಎಂದು ಕಾಯುತ್ತಿದ್ದಾರೆ.
ಇದನ್ನೂ ಓದಿ : ಅಂಬರೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ "ಅಂತ" ಮರು ಬಿಡುಗಡೆ
ವದಂತಿಗಳ ಪ್ರಕಾರ, ನಟ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿರುವ ದೊಡ್ಡ-ಬಜೆಟ್ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಅವರಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ.
#Yash19 pic leaked pic.twitter.com/Zt9A9NPGkd
— iNTRovert Akshith ʸᵃˢʰ ¹⁹ 🌊 (@yashcultakshith) May 22, 2023
ಅವರ ಯಾವುದೇ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಲಿ, ಅಭಿಮಾನಿಗಳು ಅದನ್ನು ಮುಂದಿನ ಸಿನಿಮಾಗೆ ಲಿಂಕ್ ಮಾಡುತ್ತಾರೆ. ಅವರ ಪ್ರತಿ ನಡೆಯನ್ನೂ ಮುಂದಿನ ಚಿತ್ರಕ್ಕೆ ಲಿಂಕ್ ಕೊಡುವುದು ಸಾಮಾನ್ಯ. ಇತ್ತೀಚೆಗೆ, ಉದ್ದನೆಯ ಕೂದಲು ಮತ್ತು ಪೂರ್ಣವಾಗಿ ಬೆಳೆದ ಗಡ್ಡದೊಂದಿಗೆ ಅವರ ಕೆಲವು ಫೋಟೋಗಳು ವೈರಲ್ ಆಗಿದ್ದವು. ಇದು ಯಶ್ ಅವರ ಮುಂದಿನ ಚಿತ್ರದ ಹೊಸ ಲುಕ್ ಎಂದು ಹಲವರು ಊಹಿಸಲು ಪ್ರಾರಂಭಿಸಿದರು. ಆದರೆ, ಆ ಚಿತ್ರಗಳು ಜಾಹೀರಾತಿನ ಚಿತ್ರೀಕರಣದ್ದಾಗಿದ್ದವು.
ಇದನ್ನೂ ಓದಿ : ಮಿತಿ ಮೀರಿದ ಬೋಲ್ಡ್ ಲುಕ್.. ದಿಶಾ ಪಟಾನಿ ಪ್ರೈವೆಟ್ ಪಾರ್ಟ್ ಕಂಡು ಹುಚ್ಚೆದ್ದು ಕುಣಿದ ಫ್ಯಾನ್ಸ್.!
ಪ್ರಸ್ತುತ, ಯಶ್ ಅವರ ಮುಂಬರುವ ಚಿತ್ರಕ್ಕೆ ತಾತ್ಕಾಲಿಕವಾಗಿ ಯಶ್ 19 ಎಂದು ಹೆಸರಿಸಲಾಗಿದೆ. ಯಶ್ 19 ರಲ್ಲಿ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕಿ ಗೀತು ಮೋಹನ್ ದಾಸ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂಬ ವದಂತಿಗಳಿವೆ. ಮಲಯಾಳಂ ನಿರ್ದೇಶಕರು ಯಶ್ ಜೊತೆ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ಸಹ ವರದಿಯಾಗಿದೆ. ಕೆಜಿಎಫ್: ಅಧ್ಯಾಯ 3 ರಲ್ಲಿ ಯಶ್ ರಾಕಿ ಭಾಯ್ ಆಗಿ ಮರಳಬಹುದು ಎಂಬ ವದಂತಿಗಳೂ ಇವೆ. ಆದಾಗ್ಯೂ, ಈ ಊಹಾಪೂಹಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯಾಗಲಿ ಮಾಹಿತಿಯಾಗಲಿ ನೀಡಿಲ್ಲ.
ಇದನ್ನೂ ಓದಿ : ಹಳೆಯ ಚಿತ್ರಮಂದಿರ ಖರೀದಿಸಿದ ನಯನತಾರಾ! ನಟನೆ ಜೊತೆ ಇಷ್ಟೆಲ್ಲಾ ಬ್ಯುಸಿನೆಸ್ ಮಾಡ್ತಾರೆ ಈ ನಟಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.