ಗರ್ಭಿಣಿ ರಾಧಿಕಾ ಪಂಡಿತ್ ಹೇಗಿದ್ದಾರೆ ಗೊತ್ತಾ!

ಎಂಗೇಜ್ಮೆಂಟ್ ಆಗಿ ಎರಡು ವರ್ಷ ಪೂರೈಸಿದ ಸಂಭ್ರಮದಲ್ಲಿ ಯಶ್-ರಾಧಿಕಾ ಜೋಡಿ.

Yashaswini V Yashaswini V | Updated: Aug 13, 2018 , 08:37 AM IST
ಗರ್ಭಿಣಿ ರಾಧಿಕಾ ಪಂಡಿತ್ ಹೇಗಿದ್ದಾರೆ ಗೊತ್ತಾ!
Pic: Facebook@RadhikaPandit

ಬೆಂಗಳೂರು: ಇತ್ತೀಚೆಗಷ್ಟೆ ತಾವು ತಂದೆ ಆಗ್ತಿರೊ‌ ಖುಷಿಯನ್ನು ಹಂಚಿಕೊಂಡಿದ್ದ ಯಶ್ ದಂಪತಿ, ಇದೀಗ ಫೇಸ್ಬುಕ್ ನಲ್ಲಿ ತುಂಬು ಗರ್ಭಿಣಿ ರಾಧಿಕಾ ಫೋಟೊ ಹಾಕಿದ್ದಾರೆ.

"ನಾನು ನಿಮ್ಮೊಂದಿಗೆ ಸಂತಸದ ವಿಚಾರವನ್ನು ಹಂಚಿಕೊಳ್ಳಬೇಕೆಂದಿದ್ದೇನೆ. ಈ ವರ್ಷ ಡಿಸೆಂಬರ್ ನನಗೆ ತುಂಬಾ ವಿಶೇಷವಾಗಲಿದೆ" ಎಂದು ಹೇಳುವ ಮೂಲಕ ಇದನ್ನು YGF "Yash is Going to be Father!" ಎಂದು ಯಶ್ ಹೇಳಿಕೊಂಡಿದ್ದರು. 

ಆಗಸ್ಟ್ 12, 2016ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಜೋಡಿ, ಆ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಎಂಗೇಜ್ ಆಗಿ ಎರಡು ವರ್ಷಗಳಾಯ್ತು ಇದು ಖಚಿತವಾಗಿ 'bumpy ride' ಅಂತ ರಾಧಿಕಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಂಗೇಜ್ಮೆಂಟ್ ಫೋಟೋ ಜೊತೆಗೆ ಗರ್ಭಿಣಿ ರಾಧಿಕಾ ಫೋಟೋವನ್ನು ಹಂಚಿಕೊಂಡಿದ್ದಾರೆ.