ಆದಿಪುರುಷ್‌ದಲ್ಲಿ ಯಶ್ ರಾಧಿಕಾ..ಹೇಗಿದೆ ನೋಡಿ ಸ್ಯಾಂಡಲ್‌ವುಡ್ ರಾಮ ಸೀತೆ ಜೋಡಿ..

Yash Radhika Pandith : ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದಲೂ ರಾಮ ಸೀತೆಯ ವೇಷ ಧರಿಸಿ ರೀಲ್ಸ್ ಹಾಗೂ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂತದ್ದೆ ಪೋಸ್ಟ್ ಒಂದು ವೈರಲ್ ಆಗಿದ್ದು, ಆ ಪೋಟೋದಲ್ಲಿ ಇರೋರು ಆಲ್‌ಮೋಸ್ಟ್ ಎಲ್ಲರ ಫೇವರೆಟ್ ಅಂತಾನೇ ಹೇಳಬಹುದು.   

Written by - Savita M B | Last Updated : Jun 20, 2023, 01:11 PM IST
  • ಆದಿಪುರುಷ್ ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಕಂಡಿದೆ.
  • ಈ ಸಿನಿಮಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ
  • ಇದೀಗ ಸೋಷಿಯುಲ್ ಮಿಡಿಯಾದಲ್ಲಿ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
ಆದಿಪುರುಷ್‌ದಲ್ಲಿ ಯಶ್ ರಾಧಿಕಾ..ಹೇಗಿದೆ ನೋಡಿ ಸ್ಯಾಂಡಲ್‌ವುಡ್ ರಾಮ ಸೀತೆ ಜೋಡಿ.. title=

Viral Post : ಓಂ ರಾವುತ್ ನಿರ್ದೇಶನದ ಪ್ರಭಾಸ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಕಂಡಿದೆ. ಈ ಸಿನಿಮಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಸಹ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ 2 ದಿನಗಳಲ್ಲಿ 300 ಕೋಟಿ ಗಳಿಕೆ ಮಾಡಿ ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ. 

ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಫೇಮಸ್ ಹಾಗೂ ಎಲ್ಲರ ಫೆವರೆಟ್ ಜೋಡಿ ಅಂದರೆ ಅದು ಯಶ್ ಮತ್ತು ರಾಧಿಕಾ ಜೋಡಿ.. ಈ ಜೋಡಿನಾ ಇಷ್ಟ ಪಡದೇ ಇರೋ ಮನಸ್ಸುಗಳೇ ಇಲ್ಲ. ಹಾಗಾದ್ರೆ ಈ ಜೊಡಿನ ರಾಮಾ ಸೀತೆ ಅವತಾರದಲ್ಲಿ ನೋಡ್ಬೇಕು ಅನ್ನೋದು ಎಷ್ಟೋ ಅಭಿಮಾನಿಗಳ ಆಸೆ. ಆ ಆಸೆ ಇಂದು ನೆರವೇರಿದೆ. ಇದೀಗ ಸೋಷಿಯುಲ್ ಮಿಡಿಯಾದಲ್ಲಿ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ-Adipurush: "600 ಕೋಟಿ ವ್ಯರ್ಥ, ನನಗೆ ಸಹಿಸಲಾಗಲಿಲ್ಲ.." ಆದಿಪುರುಷ ನೋಡಿ ಕೋಪಗೊಂಡ ನಟ!

ವೈರಲ್ ಪೋಸ್ಟ್‌ ನಲ್ಲಿ ಚಿತ್ರಗಾರನ ಕೈಚಳಕದಿಂದ ಯಶ್ ಮತ್ತು ರಾಧಿಕಾ ರಾಮಾ ಸೀತೆ ಅವತಾರದಲ್ಲಿ ಮೂಡಿಬಂದಿದ್ದಾರೆ. ಈ ಪೋಸ್ಟ್ ಅಭಿಮಾನಿಗಳ ಮನಮುಟ್ಟಿದೆ. ಈ ಪೋಟೋಗೆ ಕಾಮೆಂಟ್‌ಗಳ ಸುರಿಮಳೆಯೆ ಸುರಿದಿದ್ದು, ಅಭಿಮಾನಿಗಳು ಯಶ್ ಮತ್ತು ರಾಧಿಕಾ ನಿಜವಾಗಿಯೂ ರಾಮಸೀತೆಯ ಹಾಗೇಯೆ ಇರಲಿ ಎಂದು ಆಶಿಸಿದ್ದಾರೆ. 

ಯಶ್ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 7 ವರ್ಷಗಳು ಕಳೆಯುತ್ತಾ ಬಂದರೂ ಇಂದಿಗೂ ಅವರ ಜೀವನದಲ್ಲಿ ಒಂದು ಬಿರುಕು ಮೂಡಿಲ್ಲ. ಇದೇ ಈ ಜೊಡಿಯ ಸ್ಟ್ರೇಂತ್. ಈ ಜೊಡಿಯನ್ನು ಸ್ಯಾಂಡಲ್‌ವುಡ್‌ನ ಮಾದರಿ ಕಪಲ್ ಎಂದರೇ ತಪ್ಪಾಗುವುದಿಲ್ಲ. ಇನ್ನೊಂದು ಅಚ್ಚರಿಯ ವಿಷಯವೆಂದರೆ ರಾಧಿಕಾ ಅವರು ಯಶ್‌ಗಿಂತ 2 ವರ್ಷ ದೊಡ್ಡವರು. ಹೀಗಿದ್ದರು ಇಬರಿಬ್ಬರ ಭಾಂದವ್ಯ ಕನ್ನಡಿಗರು ಮೆಚ್ಚುವಂತಿದೆ.

ಇದನ್ನೂ ಓದಿ-Ram Charan Upsana: ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News