ಅರ್ಮಾನ್ ಮಲಿಕ್ ಇಬ್ಬರು ಹೆಂಡತಿಯರು ಒಂದೇ ಬಾರಿಗೆ ಪ್ರಗ್ನೆಂಟ್‌ : ಹೇಗೆ ಸಾಧ್ಯ..!

ಹೈದರಾಬಾದ್ ಮೂಲದ ಮಾಡೆಲ್‌, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅರ್ಮಾನ್ ಮಲಿಕ್ ಹೆಂಡತಿಯರ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಅರ್ಮಾನ್‌ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್‌ ಎಂಬ ಇಬ್ಬರು ಪತ್ನಿಯರಿದ್ದಾರೆ. ಇದೀಗ ಅವರ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 15 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 20 ಲಕ್ಷ ಫಾಲೋವರ್ಸ್ ಹೊಂದಿರುವ ಅರ್ಮಾನ್ ಇನ್‌ಸ್ಟಾಗ್ರಾಮ್ ಪೋಸ್ಟ್ ಇದಕ್ಕೆಲ್ಲ ಮೂಲ ಕಾರಣವಾಗಿದೆ.

Written by - Krishna N K | Last Updated : Dec 11, 2022, 11:07 AM IST
  • ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಸ್ಟಾರ್‌ ಅರ್ಮಾನ್ ಮಲಿಕ್ ಹೆಂಡತಿಯರ ವಿಚಾರ
  • ಯೂಟ್ಯೂಬರ್‌ ಅರ್ಮಾನ್‌ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್‌ ಎಂಬ ಇಬ್ಬರು ಪತ್ನಿಯರಿದ್ದಾರೆ
  • ಇದೀಗ ಇಬ್ಬರು ಒಂದೇ ಬಾರಿಗೆ ಗರ್ಭಿಣಿಯರಾಗಿದ್ದು, ನೆಟ್ಟಿಗರು ಹೇಗೆ ಸಾಧ್ಯ ಎಂದು ಟ್ರೋಲ್‌ ಮಾಡುತ್ತಿದ್ದಾರೆ
ಅರ್ಮಾನ್ ಮಲಿಕ್ ಇಬ್ಬರು ಹೆಂಡತಿಯರು ಒಂದೇ ಬಾರಿಗೆ ಪ್ರಗ್ನೆಂಟ್‌ : ಹೇಗೆ ಸಾಧ್ಯ..! title=

YouTuber Armaan Malik : ಹೈದರಾಬಾದ್ ಮೂಲದ ಮಾಡೆಲ್‌, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅರ್ಮಾನ್ ಮಲಿಕ್ ಹೆಂಡತಿಯರ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಅರ್ಮಾನ್‌ಗೆ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್‌ ಎಂಬ ಇಬ್ಬರು ಪತ್ನಿಯರಿದ್ದಾರೆ. ಇದೀಗ ಅವರ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 15 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 20 ಲಕ್ಷ ಫಾಲೋವರ್ಸ್ ಹೊಂದಿರುವ ಅರ್ಮಾನ್ ಇನ್‌ಸ್ಟಾಗ್ರಾಮ್ ಪೋಸ್ಟ್ ಇದಕ್ಕೆಲ್ಲ ಮೂಲ ಕಾರಣವಾಗಿದೆ.

ಹೌದು, ಒಂದು ಅರ್ಮಾನ್‌ ಒಂದು ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದೇನೆಂದರೆ, ತಮ್ಮ ಇಬ್ಬರೂ ಪತ್ನಿಯರು ಒಂದೇ ಬಾರಿಗೆ ಗರ್ಭಿಣಿಯಾದರು ಎಂದು ಕಳೆದ ವಾರ ಅರ್ಮಾನ್‌ ಪೋಸ್ಟ್ ಮಾಡಿದ್ದರು. ಪೋಸ್ಟ್‌ನಲ್ಲಿ, ಅವರು ತಮ್ಮ ಇಬ್ಬರೂ ಪತ್ನಿಯರು ಗರ್ಭಿಣಿಯಾಗಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಜೊತೆ 'ನನ್ನ ಕುಟುಂಬ' ಎಂದು ಶೀರ್ಷಿಕೆ ಬರೆದಿದ್ದರು.

ಇದನ್ನೂ ಓದಿ: ರಿಷಬ್‌ ಶೆಟ್ಟಿ ಆ ತಪ್ಪು ಮಾಡ್ಬೇಡಿ : ಕನ್ನಡಿಗನಿಗೆ ಬಾಲಿವುಡ್‌ ನಿರ್ಮಾಪಕ ವಾರ್ನಿಂಗ್‌...!

ಈ ಪೋಸ್ಟ್‌ಗೆ ಲಕ್ಷಾಂತರ ಜನ ನೆಟ್ಟಿಗರು ಲೈಕ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ಸೂಪರ್‌ ಅಂದ್ರೆ ಇನ್ನೂ ಕೆಲವರು ಟೀಕಿಸಿದ್ದಾರೆ. ಕೆಲ ನೆಟಿಜನ್ಸ್‌ ಇಬ್ಬರೂ ಪತ್ನಿಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ದೆ, ನೀವು ಕ್ರಿಕೆಟ್ ತಂಡವನ್ನು ಮಾಡಿ ಎಂದು ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ವಿಡಂಬನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇಬ್ಬರು ಹೆಂಡತಿಯರನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಸುಮಾರು 1.50 ಲಕ್ಷ ಮಂದಿಗೂ ಹೆಚ್ಚು ಜನ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.

ಯೂಟ್ಯೂಬರ್‌ ಅರ್ಮಾನ್ ಮಲಿಕ್ 2011 ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು. ಅವರಿಗೆ ಸಿರಾಯು ಮಲಿಕ್ ಎಂಬ ಮಗನೂ ಇದ್ದಾನೆ. ನಂತರ 2018 ರಲ್ಲಿ, ಅರ್ಮಾನ್ ಪಾಯಲ್ ಮಲಿಕ್ ಅವರ ಆತ್ಮೀಯ ಸ್ನೇಹಿತೆ ಕೃತಿಕಾ ಅವರನ್ನು ವಿವಾಹವಾದರು. ಆರಂಭದಲ್ಲಿ ಅರ್ಮಾನ್ ಹಾಗೂ ಮೊದಲ ಪತ್ನಿ ಪಯಲುಮ್ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದ ಅವರು ಕೆಲ ದಿನಗಳ ಕಾಲ ಕೃತಿಕಾ ಜತೆ ದೆಹಲಿ ವಾಸವಾಗಿದ್ದರು. ಈಗ ನಾಲ್ವರು ಒಟ್ಟಿಗೆ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News