ನಿತ್ಯ ಒಂದೆರಡು ಖರ್ಜೂರದಿಂದ ತೂಕ ಇಳಿಕೆ ಸೇರಿದಂತೆ ಈ ಸಮಸ್ಯೆಗಳಿಂದಲೂ ದೂರ ಉಳಿಯಬಹುದು

Dates Benefits: ಖರ್ಜೂರದಲ್ಲಿ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. 

Written by - Yashaswini V | Last Updated : Jan 12, 2024, 12:52 PM IST
  • ಖರ್ಜೂರ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ತುಂಬಾ ಪ್ರಯೋಜನಕಾರಿ.
  • ಅಷ್ಟೇ ಅಲ್ಲ ಇದು ಸ್ನಾಯುಗಳನ್ನು ಕೂಡ ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ.
  • ಪ್ರತಿದಿನ ಒಂದೆರಡು ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂದು ತಿಳಿಯೋಣ..
ನಿತ್ಯ ಒಂದೆರಡು ಖರ್ಜೂರದಿಂದ ತೂಕ ಇಳಿಕೆ ಸೇರಿದಂತೆ ಈ ಸಮಸ್ಯೆಗಳಿಂದಲೂ ದೂರ ಉಳಿಯಬಹುದು  title=

Dates Benefits For Health: ಬಹಳ ಸುಲಭವಾಗಿ ಲಭ್ಯವಿರುವ ಖರ್ಜೂರವನ್ನು ಆರೋಗ್ಯದ ಗಣಿ ಎಂತಲೇ ಪರಿಗಣಿಸಲಾಗಿದೆ. ಖರ್ಜೂರದಲ್ಲಿ ಕಬ್ಬಿಣ, ಖನಿಜಗಳು, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ರಂಜಕ ಮತ್ತು ವಿಟಮಿನ್‌ಗಳು ಹೇರಳವಾಗಿ ಕಂಡು ಬರುತ್ತದೆ.  ಆಯುರ್ವೇದದ ಪ್ರಕಾರ, ನಿತ್ಯ ಒಂದೆರಡು ಖರ್ಜೂರದಿಂದ ತೂಕ ಇಳಿಕೆ ಸೇರಿದಂತೆ ಈ ಸಮಸ್ಯೆಗಳಿಂದಲೂ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 

ಖರ್ಜೂರದ ಪ್ರಯೋಜನ: 
ಖರ್ಜೂರ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ ಇದು ಸ್ನಾಯುಗಳನ್ನು ಕೂಡ ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ ಒಂದೆರಡು ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂದು ತಿಳಿಯೋಣ... 

ಖರ್ಜೂರದ ಈ ಪ್ರಯೋಜನಗಳ ಬಗ್ಗೆ ತಿಳಿದರೆ ನೀವೂ ಅಚ್ಚರಿ ಪಡ್ತೀರಾ! 
ಗರ್ಭಿಣಿಯರಿಗೆ ಲಾಭದಾಯಕ:

ಗರ್ಭಿಣಿಯರು ನಿತ್ಯ ಒಂದೆರಡು ಖರ್ಜೂರ ತಿನ್ನುವುದರಿಂದ ಇದು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ- Salt Water Benefits: ಚಿಟಿಕೆ ಉಪ್ಪು ಹಾಕಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ?

ಶೀತದಿಂದ ಪರಿಹಾರ: 
ಸಾಮಾನ್ಯವಾಗಿ ಬಾಧಿಸುವ ನೆಗಡಿ, ಕೆಮ್ಮು, ಕಫದಂತಹ ಸಮಸ್ಯೆಗಳಿಗೆ ಖರ್ಜೂರ ಒಳ್ಳೆಯ ಮದ್ದು. 

ಜಂತುಳು ಸಮಸ್ಯೆಯಿಂದ ಸಿಗುತ್ತೆ ಮುಕ್ತಿ: 
ರಾತ್ರಿ ಒಂದೆರಡು ಖರ್ಜೂರವನ್ನು ನೀರಿನಲ್ಲಿ ನೆನೆಸಿತ್ತು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಜಂತುಳು ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಹಲ್ಲಿನ ಸಮಸ್ಯೆಗೆ ರಾಮಬಾಣ: 
ಖರ್ಜೂರದಲ್ಲಿ ಫ್ಲೋರಿನ್ ಎಂಬ ಖನಿಜವಿದ್ದು ಇದರ ಸೇವನೆಯಿಂದ ಹಲ್ಲಿನ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು. 

ತೂಕ ನಷ್ಟ: 
ಖರ್ಜೂರದಲ್ಲಿ ನಿಕೋಟಿನ್ ಇದ್ದು ಇದು ದೇಹದ ಜೀರ್ಣಕಾರಿ ಮತ್ತು ಕರುಳಿನ ಸಮಸ್ಯೆಗಳಿಗೆ ಅತ್ಯುತ್ತಮವಾಗಿದೆ. ಸಮತೋಲಿತ ಪ್ರಮಾಣದಲ್ಲಿ ಖರ್ಜೂರ ತಿನ್ನುವುದರಿಂದ ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Tulsi Water Benefits: ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದರೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನ

ಮುಟ್ಟಿನ ಸಮಸ್ಯೆ: 
ಖರ್ಜೂರ ಸೇವನೆಯು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಬಾಧಿಸುವ ಸೊಂಟ, ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ ಎನ್ನಲಾಗುವುದು. 

ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News