ಕ್ಯಾರೆಟ್ ಮಾತ್ರವಲ್ಲ ಈ ಸಮಸ್ಯೆಗಳಿಗೆ ಕ್ಯಾರೆಟ್ ಸೊಪ್ಪು ಕೂಡಾ ಪರಿಣಾಮಕಾರಿ

Health Benefits Of Carrot Leaves: ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್ ಸಹಕಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕ್ಯಾರೆಟ್ ನಷ್ಟೇ ಅದರ ಸೊಪ್ಪು ಕೂಡಾ ಸಹಕಾರಿ ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.

Written by - Ranjitha R K | Last Updated : Jan 28, 2022, 02:45 PM IST
  • ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಇದು ಯಕೃತ್ತಿನ ಆರೋಗ್ಯಕ್ಕೂ ಪ್ರಯೋಜನಕಾರಿ
  • ಮೂಳೆಗಳ ಆರೋಗ್ಯಕ್ಕೂ ಇದು ಸಹಕಾರಿ
ಕ್ಯಾರೆಟ್ ಮಾತ್ರವಲ್ಲ ಈ ಸಮಸ್ಯೆಗಳಿಗೆ ಕ್ಯಾರೆಟ್ ಸೊಪ್ಪು ಕೂಡಾ ಪರಿಣಾಮಕಾರಿ  title=
Carrot Leaves Benefits (file photo)

Health Benefits Of Carrot Leaves: ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್ ಸಹಕಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕ್ಯಾರೆಟ್ ನಷ್ಟೇ ಅದರ ಸೊಪ್ಪು ಕೂಡಾ ಸಹಕಾರಿ (Benefits of carrot leaves) ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಇದರ ಎಲೆಗಳ ಸೂಪ್ ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿರಲಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಕೊಲೆಸ್ಟ್ರಾಲ್ ಮಟ್ಟ ಕಡಿಮೆಮಾಡುತ್ತದೆ : 
ಕ್ಯಾರೆಟ್ ಮತ್ತು ಅದರ ಎಲೆಗಳು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ.  ಇದು ಎಲ್ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ  ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಕೂಡಾ ಇರುತ್ತದೆ. 

ಇದನ್ನೂ ಓದಿ :  ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಐದು ವಿಧಾನಗಳನ್ನು ಅನುಸರಿಸಿ, ಆರೋಗ್ಯ ವೃದ್ದಿಸುತ್ತದೆ

ದೃಷ್ಟಿ ಹೆಚ್ಚಿಸುತ್ತವೆ :
ಕ್ಯಾರೆಟ್‌ನಂತೆ (benefits of carrot), ಇದರ ಸೊಪ್ಪು ಕೂಡಾ  ಹೆಚ್ಚಿನ ಪ್ರಮಾಣದಲ್ಲಿ ಲುಟೀನ್, ಲೈಕೋಪೀನ್ ಮತ್ತು ವಿಟಮಿನ್ ಎ ಅನ್ನು ಹೊಂದಿರುತ್ತವೆ. ದೃಷ್ಟಿ ದುರ್ಬಲವಾಗಿದ್ದರೆ, ಕ್ಯಾರೆಟ್ ಸೊಪ್ಪನ್ನು (benefits of carrot leaves) ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಬಹಳ ಸಹಕಾರಿಯಾಗಿರಲಿದೆ. ಲುಟೀನ್ ಮತ್ತು ಲೈಕೋಪೀನ್ ಎರಡೂ ದೃಷ್ಟಿಯನ್ನು ಹೆಚ್ಚಿಸುತ್ತವೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : 
ಇದರಲ್ಲಿ ಕಂಡುಬರುವ ಕ್ಯಾರೊಟಿನಾಯ್ಡಗಳು ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ (cancer) ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾರೊಟಿನಾಯ್ದ್ ಗಳು  ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದ್ದು, ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್‌ನಲ್ಲಿರುವ ಆಂಟಿಆಕ್ಸಿಡೆಂಟ್ ಆಂಥೋಸಯಾನಿನ್‌ಗಳು ಕ್ಯಾನ್ಸರ್ ತಡೆಗಟ್ಟಲು  ಸಹಾಯ ಮಾಡುತ್ತದೆ.

ಇದನ್ನೂ ಓದಿ : Apples: ಸೇಬು ತಿನ್ನುವ ಮುನ್ನ ಸಿಪ್ಪೆ ತೆಗೆಯಬೇಕೇ ಅಥವಾ ಬೇಡವೇ? ಯಾವುದು ಹೆಚ್ಚು ಪ್ರಯೋಜನಕಾರಿ

ಯಕೃತ್ತಿನ ಆರೋಗ್ಯಕ್ಕೆ :
ಕ್ಯಾರೆಟ್ ಸೊಪ್ಪಿನಲ್ಲಿರುವ ಗುಣಲಕ್ಷಣಗಳು ಯಕೃತ್ತಿನಲ್ಲಿ ಕಂಡುಬರುವ ಕೊಬ್ಬು ಮತ್ತು ಪಿತ್ತರಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಕ್ಯಾರೆಟ್ ಸೊಪ್ಪು, ಉತ್ತಮ ಪ್ರಮಾಣದ ಫೈಬರ್ (fiber) ಅನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಬಲಿಷ್ಠ ಮೂಳೆಗಳಿಗಾಗಿ :
ಇದರಲ್ಲಿ  ವಿಟಮಿನ್ ಕೆ 1, ಎ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಪೋಷಕಾಂಶಗಳು ಮೂಳೆಗಳು ಒಡೆಯುವುದನ್ನು ತಡೆಯುತ್ತದೆ. ಇದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ : 
ಕ್ಯಾರೆಟ್ ಸೊಪ್ಪಿನಲ್ಲಿರುವ ಫೈಬರ್ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು (blood sugar level) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿರುವ ಆಲ್ಫಾ ಮತ್ತು ಬೀಟಾ ಕ್ಯಾರೋಟಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News