ಕಿಡ್ನಿ ಸ್ಟೋನ್ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳಿಂದ ದೂರವಿರಿ

ಬೀಜಗಳಿರುವ ಆಹಾರಗಳ ಸೇವನೆಯಿಂದಲೂ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುತ್ತದೆ.   

Last Updated : Jul 22, 2018, 06:57 PM IST
ಕಿಡ್ನಿ ಸ್ಟೋನ್ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳಿಂದ ದೂರವಿರಿ title=

ನವದೆಹಲಿ: ಕಿಡ್ನಿ ಸ್ಟೋನ್ ಸಮಸ್ಯೆ ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆಗೆ ಸಾಕಷ್ಟು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದೂ ಸಹ ಈ ಸಮಸ್ಯೆಗೆ ಮುಖ್ಯ ಕಾರಣ. ಅಲ್ಲದೆ, ಬೀಜಗಳಿರುವ ಆಹಾರಗಳ ಸೇವನೆಯಿಂದಲೂ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುತ್ತದೆ. 

ಕಿಡ್ನಿಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಬೀಜಗಳಿರುವ ಟೊಮ್ಯಾಟೋ, ಸೀಬೆಹಣ್ಣು, ದಾಳಿಂಬೆ, ಬದನೇಕಾಯಿ ಮೊದಲಾದವುಗಳ ಸೇವಿಸಬಾರದು.

ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕಡಿಮೆ ನೀರು ಕುಡಿಯುವುದು. ಆದರೆ, ನಿಮ್ಮ ದೇಹದಲ್ಲಿ 5 ಮಿಮೀ ನಷ್ಟು ಕಲ್ಲು ಇದ್ದರೆ, ಅದನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ತೆಗೆಯಲು ಸಾಧ್ಯ. ಆದರೆ ನಿಮ್ಮ ದೇಹದಲ್ಲಿ ಸಣ್ಣ ಕಲ್ಲು ಇದ್ದರೆ, ಅದನ್ನು ತೊಡೆದುಹಾಕಲು ಔಷಧಿಗಳನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದೂ ಅಷ್ಟೇ ಅಗತ್ಯ.

ಮೂತ್ರಪಿಂಡ, ಪಿತ್ತಕೋಶ ಮತ್ತು ಮೂತ್ರದ ಕೊಳವೆಗಳಲ್ಲಿ ಕಲ್ಲಿನ ಸಮಸ್ಯೆ ಇರಬಹುದು. ಈ ಸಮಸ್ಯೆ ಎದುರಾದರೆ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಸೇವಿಸುವ ಪ್ರತಿಯೊಂದು ಆಹಾರವೂ ಪೌಷ್ಟಿಕವಾಗಿದ್ದು, ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಿ.
 

Trending News