Benefits of Black Gram : ಮಧುಮೇಹಿಗಳಿಗೆ ರಾಮಬಾಣ ಕರಿ ಕಡಲೆ ಕಾಳು : ಈ ಸಮಯದಲ್ಲಿ ಸೇವಿಸಿ ಆರೋಗ್ಯ ಪ್ರಯೋಜನ ಪಡೆಯಿರಿ!

ಕರಿ ಕಡಲೆ ಕಾಳು ಸುಲಭವಾಗಿ ರಕ್ತದಲ್ಲಿ ಕರಗುತ್ತದೆ. ಆದ್ದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಈ ಕಾಳನ್ನು ಸೇವಿಸುವುದು ಸೂಕ್ತ.

Written by - Channabasava A Kashinakunti | Last Updated : Aug 21, 2021, 11:49 AM IST
  • ಇಂದು ದೇಶದ ಶೇ. 7.8 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ
  • ಈ ಕಾಯಿಲೆಯ ರೋಗಿಗಳಿಗೆ ಕರಿ ಕಡಲೆ ಕಾಳು ತುಂಬಾ ಪ್ರಯೋಜನಕಾರಿ
  • ಕರಿ ಕಡಲೆ ಕಾಳು ಸುಲಭವಾಗಿ ರಕ್ತದಲ್ಲಿ ಕರಗುತ್ತದೆ
Benefits of Black Gram : ಮಧುಮೇಹಿಗಳಿಗೆ ರಾಮಬಾಣ ಕರಿ ಕಡಲೆ ಕಾಳು : ಈ ಸಮಯದಲ್ಲಿ ಸೇವಿಸಿ ಆರೋಗ್ಯ ಪ್ರಯೋಜನ ಪಡೆಯಿರಿ! title=

ನವದೆಹಲಿ : ಇಂದು ದೇಶದ ಶೇ. 7.8 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಔಷಧಿಗಳ ಜೊತೆಗೆ, ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಕಾಯಿಲೆಯ ರೋಗಿಗಳಿಗೆ ಕರಿ ಕಡಲೆ ಕಾಳು ತುಂಬಾ ಪ್ರಯೋಜನಕಾರಿಯಾಗಿದೆ. ಖ್ಯಾತ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಹೇಳುವಂತೆ ಮಧುಮೇಹಿ ರೋಗಿಗಳಿಗೆ ಕರಿ ಕಡಲೆ ಕಾಳು ಸೂಪರ್ ಫುಡ್ ಗಿಂತ ಕಡಿಮೆ ಇಲ್ಲ ಎಂದು ಹೇಳಿದ್ದಾರೆ.

ಸಕ್ಕರೆ ಹೆಚ್ಚಾದಾಗ ಈ ರೋಗಗಳ ಅಪಾಯ

ರಕ್ತ(Blood)ದಲ್ಲಿ ಹೆಚ್ಚಿದ ಸಕ್ಕರೆಯ ಮಟ್ಟವು ಮೂತ್ರಪಿಂಡ ವೈಫಲ್ಯ, ಬಹು ಅಂಗಾಂಗ ವೈಫಲ್ಯ, ಹೃದಯಾಘಾತ ಮತ್ತು ಮಿದುಳಿನ ಪಾರ್ಶ್ವವಾಯುಗಳಂತಹ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಇದನ್ನೂ ಓದಿ : Oils For Digestion: ಮಳೆಗಾಲದಲ್ಲಿ ಅಡುಗೆಗೆ ಯಾವ ಎಣ್ಣೆ ಬಳಸುವುದು ಸೂಕ್ತ ?

ಮಧುಮೇಹದಲ್ಲಿ ಕರಿ ಕಡಲೆ ಕಾಳು ಹೇಗೆ ಪ್ರಯೋಜನಕಾರಿ

ಕರಿ ಕಡಲೆ ಕಾಳು(Black Gram) ಸುಲಭವಾಗಿ ರಕ್ತದಲ್ಲಿ ಕರಗುತ್ತದೆ. ಆದ್ದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಈ ಕಾಳನ್ನು ಸೇವಿಸುವುದು ಸೂಕ್ತ. ಕಕರಿ ಕಡಲೆ ಕಾಲಿನಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಎ, ಬಿ, ಸಿ, ಡಿ, ರಂಜಕ, ಪೊಟ್ಯಾಶಿಯಂ, ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಖನಿಜಗಳಿವೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಈ ಕಾರಣದಿಂದಾಗಿ ಇದು ಹೃದಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ : Buttermilk for kids : ಬಲಾಢ್ಯ ಮೂಳೆಗಳಿಗಾಗಿ ಮಕ್ಕಳಿಗೆ ನಿತ್ಯ ನೀಡಿ ಮಜ್ಜಿಗೆ

ಮಧುಮೇಹಿ ರೋಗಿಗಳು ಈ ರೀತಿ ಕರಿ ಕಡಲೆ ಕಾಳು ಸೇವಿಸಿ

ಮೊಗ್ಗುಗಳ ರೂಪದಲ್ಲಿ ನಿಮ್ಮ ಆಹಾರ(Food)ದಲ್ಲಿ ಕರಿ ಕಡಲೆ ಕಾಳು ಸೇವಿಸಿ. ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಬೆಳಿಗ್ಗೆ ತರಕಾರಿಯಾಗಿ ಬೇಯಿಸಿ ಕೂಡ ತಿನ್ನಬಹುದು.

ಇದನ್ನೂ ಓದಿ : Zydus Cadila 3 ಡೋಸ್ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ

ಕರಿ ಕಡಲೆ ಕಾಳು ನೀರು ಸಹ ಪ್ರಯೋಜನಕಾರಿ 

ಮಧುಮೇಹಿಗಳಿಗೂ ಕರಿ ಕಡಲೆ ಕಾಳು ನೀರು(Water) ಪ್ರಯೋಜನಕಾರಿ. ಇದಕ್ಕಾಗಿ, ರಾತ್ರಿಯಿಡೀ ಕರಿ ಕಡಲೆ ಕಾಳು ನೆನೆಸಿ. ಬೆಳಿಗ್ಗೆ ಎದ್ದು ಅದರ ನೀರನ್ನು ಕುಡಿಯಿರಿ. ಇದು ದೇಹದಲ್ಲಿ ಹೆಚ್ಚುವರಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News