Hair Fall : ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು..!

Coconut Oil For Hair Fall : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ರಾಸಾಯನಿಕ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಕಲುಷಿತ ವಾತಾವರಣವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

Written by - Channabasava A Kashinakunti | Last Updated : Jan 21, 2023, 07:05 PM IST
  • ತೆಂಗಿನ ಎಣ್ಣೆ ಬಳಸುವ ಸರಿಯಾದ ಮಾರ್ಗ
  • ಕೂದಲನ್ನು ಪೋಷಣೆ
  • ಕೊಳಕು ಮತ್ತು ತಲೆಹೊಟ್ಟಿಗೆ
Hair Fall : ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು..! title=

Coconut Oil For Hair Fall : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ರಾಸಾಯನಿಕ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಕಲುಷಿತ ವಾತಾವರಣವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲು ಉದುರುವಿಕೆಯನ್ನು ಸಮಯಕ್ಕೆ ನಿಲ್ಲಿಸದಿದ್ದರೆ, ನೀವು ಬೊಕ್ಕ ತಲೆಗೆ ಬಲಿಯಾಗಬಹುದು. ಕೂದಲು ಉಳಿಸಿಕೊಳ್ಳುವ ಬಯಕೆ ಇದ್ದರೆ, ಅವುಗಳನ್ನು ಬಲಿಷ್ಠವಾಗಿಸುವುದು ಬಹಳ ಮುಖ್ಯ. ಇದಕ್ಕೆ ಒಣಸ್ ಮನೆ ಮದ್ದು ಇದೆ. ಹೌದು, ನೀವು ದಿನ ಬಳಸುವ ತೆಂಗಿನ ಎಣ್ಣೆ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಮನೆ ಮದ್ದಾಗಿದೆ. ಹೇಗೆ ಇಲ್ಲಿದೆ ನೋಡಿ..

ತೆಂಗಿನ ಎಣ್ಣೆ ಬಳಸುವ ಸರಿಯಾದ ಮಾರ್ಗ

ಹರಳೆಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ತುಂಬಾ ಪ್ರಯೋಜನಕಾರಿ. ನೀವು ಕೂದಲು ಉದುರುವುದನ್ನು ನಿಲ್ಲಿಸಲು ಬಯಸಿದರೆ, ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಹರಳೆಣ್ಣೆಯನ್ನು ಸೇರಿಸಿ, ನಂತರ ನಿಮ್ಮ ಕೂದಲನ್ನು ಈ ಎಣ್ಣೆಯಿಂದ ಮಸಾಜ್ ಮಾಡಿ. ಕೂದಲನ್ನು ತೊಳೆಯುವ ಮೊದಲು ಈ ಎಣ್ಣೆಯನ್ನು ಬಳಸಿ ಮತ್ತು ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದು ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ : Hair Care : ಕೂದಲಿನ ಈ ಸಮಸ್ಯೆಗಳಿಗೆ ನೆಲ್ಲಿಕಾಯಿಯಲ್ಲಿದೆ ಶಾಶ್ವತ ಪರಿಹಾರ

ಕೂದಲನ್ನು ಪೋಷಣೆ

ತೆಂಗಿನ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದರ ಬಳಕೆಯಿಂದ ಕೂದಲು ಪೋಷಣೆ ಪಡೆಯುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ಕೂದಲು ಉದುರುವುದನ್ನು ತಡೆಯುತ್ತದೆ. ಇದು ಕೂದಲನ್ನು ತೇವಗೊಳಿಸುವುದರ ಮೂಲಕ ಮತ್ತು ಅದನ್ನು ಬಲಪಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ತೆಂಗಿನ ಎಣ್ಣೆಯ ಪದರವು ಬಿಸಿಲು, ಧೂಳು ಮತ್ತು ಕೊಳಕುಗಳಿಂದ ಕೂದಲನ್ನು ರಕ್ಷಿಸುತ್ತದೆ ಮತ್ತು ಆರೋಗ್ಯಕರವಾಗಿರಿಸುತ್ತದೆ.

ಕೊಳಕು ಮತ್ತು ತಲೆಹೊಟ್ಟಿಗೆ 

ಈ ಎಣ್ಣೆಯಲ್ಲಿರುವ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬ್ಯಾಕ್ಟೀರಿಯಾವನ್ನು ಕೂದಲಿನಿಂದ ದೂರವಿಡುತ್ತವೆ. ಕೂದಲಿನ ಬೇರುಗಳಿಂದ ಡ್ಯಾಂಡ್ರಫ್ ಮತ್ತು ಕೊಳೆಯನ್ನು ತೆಗೆದುಹಾಕಲು ಇದು ಸಹಾಯಕವಾಗಿದೆ. ಇದು ಕೂದಲಿಗೆ ಬಲವನ್ನು ನೀಡುತ್ತದೆ. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ಕೂದಲನ್ನು ಬೇರುಗಳಿಂದ ಬಲಗೊಳಿಸುತ್ತದೆ.

ಹೊಳೆಯುವ ಕೂದಲು 

ಕೊಬ್ಬರಿ ಎಣ್ಣೆ ಕೂದಲಿಗೆ ಮಾಯಿಶ್ಚರೈಸ್ ರೀತಿ ಕೆಲಸ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಶುಷ್ಕತೆಯನ್ನು ಹೋಗಲಾಡಿಸಿ ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ತೆಂಗಿನೆಣ್ಣೆ ಮತ್ತು ಹರಳೆಣ್ಣೆ ಹಚ್ಚುವುದರಿಂದ ಕೂದಲು ನಯವಾಗುತ್ತದೆ.

ಇದನ್ನೂ ಓದಿ : Tongue Color : ನಾಲಿಗೆ ಬಣ್ಣ ನೋಡಿ ನಿಮ್ಮ ಆರೋಗ್ಯ ಸಮಸ್ಯೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News