ಬೆಂಗಳೂರು : ನಾವು ಬೆಳಿಗ್ಗೆ ಎದ್ದ ತಕ್ಷಣ ಏನನ್ನು ಸೇವಿಸುತ್ತೇವೆ ಎನ್ನುವುದರಿಂದಲೇ ನಮ್ಮ ದಿನದ ಆರೋಗ್ಯ ಪ್ರಾರಂಭವಾಗುತ್ತದೆ. ನಮ್ಮಲ್ಲಿ ಹಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವಿರುತ್ತದೆ. ಒಂದು ಲೋಟ ಕಾಫಿ ಅಥವಾ ಚಹಾ ಕುಡಿದರೆ ಏನು ಹಾನಿಯಾಗುವುದಿಲ್ಲ ಎಂದು ನಮಗೆ ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ಈ ಒಂದು ಲೋಟ ಚಹಾ ಅಥವಾ ಕಾಫಿಯನ್ನು ನಾವು ಹೀರುವುದು ಖಾಲಿ ಹೊಟ್ಟೆಗೆ ಅನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಹೀಗಾಗಿ ತಕ್ಷಣಕ್ಕೆ ಇದು ಹಾನಿಯನ್ನುಂಟು ಮಾಡುವುದಿಲ್ಲ ಎಂದೆನೆಸಿದರೂ ದೀರ್ಘಾವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಬದಲು ಬೆಳಿಗ್ಗೆ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ದೇಹಕ್ಕೆ ಉತ್ತಮ ಪ್ರಯೋಜನ ಸಿಗುತ್ತದೆ.
ಈ ಪಾನೀಯವನ್ನು ಬೆಳಿಗ್ಗೆ ಎದ್ದ ತಕ್ಷಣ ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಸೇರಿಕೊಂಡಿರುವ ಕೊಬ್ಬು ಬೆಣ್ಣೆಯಂತೆ ಕರಗಿ ಬಿಡುತ್ತದೆ.
1. ನಿಂಬೆ ನೀರು:
ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ಎದ್ದ ನಂತರ ಈ ರೀತಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹ ಉಲ್ಲಾಸದಿಂದ ಕೂಡಿರುತ್ತದೆ. ಎದ್ದ ತಕ್ಷಣ ಅಂದರೆ ಬ್ರೆಶ್ ಮಾಡುವ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯಲು ಇಷ್ಟವಿಲ್ಲದವರು ನಿಂಬೆ ನೀರನ್ನು ಕುಡಿಯಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿರುವ ಜೀವಕೋಶಗಳನ್ನು ಒಳಗಿನಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಪ್ರತಿದಿನ ಎಳನೀರು ಕುಡಿಯುವುದರಿಂದ ಆಗುವ ಲಾಭಗಳು!
2. ಗ್ರೀನ್ ಟೀ:
ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಹೀಗಾಗಿ, ದೀರ್ಘಕಾಲದ ಕಾಯಿಲೆಗಳನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಗ್ರೀನ್ ಟೀ ಕುಡಿಯಲೇಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅಲ್ಲದೆ, ಗ್ರೀನ್ ಟೀ ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
3. ಬ್ಲಾಕ್ ಕಾಫಿ:
ಬ್ಲಾಕ್ ಕಾಫಿಯನ್ನು ಕಡಿಮೆ ಕೊಬ್ಬಿನಂಶ ಹೊಂದಿರುವ ಪಾನೀಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕೆಫೀನ್ ಇರುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ದೇಹದಲ್ಲಿನ ರಕ್ತ ಕಣಗಳ ಮೇಲೆ ಪರಿಣಾಮ ಬೀರುವುದಿಲ್ಲ. ಟೈಪ್ 2 ಮಧುಮೇಹ ಇರುವವರು ಬ್ಲಾಕ್ ಕಾಫಿ ಕುಡಿಯಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಸಾಮಾನ್ಯ ಚಹಾ ಮತ್ತು ಕಾಫಿಯ ಬದಲಿಗೆ ಬ್ಲಾಕ್ ಕಾಫಿ ಕುಡಿಯುವುದು ಪ್ರಯೋಜನಕಾರಿಯಾಗಿರುತ್ತದೆ.
ಇದನ್ನೂ ಓದಿ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸೂಪರ್ ಫುಡ್ ಈ ಹಾಲು, ಮನೆಯಲ್ಲಿಯೇ ಹೀಗೆ ತಯಾರಿಸಿ!
4. ದಾಲ್ಚಿನ್ನಿ ಚಹಾ:
ಚಕ್ಕೆ ಚಹಾವು ಸುವಾಸನೆ ಹೊಂದಿರುವ ಪಾನೀಯವಾಗಿದೆ. ಹಸಿವನ್ನು ಕಡಿಮೆ ಮಾಡಲು ಚಕ್ಕೆ ಚಹಾವನ್ನು ಕುಡಿಯಬಹುದು. ಇದನ್ನು ಕುಡಿಯುವುದರಿಂದ, ದೇಹದಲ್ಲಿನ ಸಕ್ಕರೆಯ ಮಟ್ಟವು ಸಮತೋಲನಗೊಳ್ಳುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ಸೃಷ್ಟಿಸುತ್ತದೆ. ಕೆಲವು ಕ್ಲಿನಿಕಲ್ ಅಧ್ಯಯನಗಳು ಚಕ್ಕೆ ಚಹಾ ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿದಿದೆ.
5. ಅಲೋವೆರಾ ಜ್ಯೂಸ್ :
ಅಲೋವೆರಾ ರಸವನ್ನು ಅಲೋವೆರಾದ ಸಾರದಿಂದ ತಯಾರಿಸಲಾಗುತ್ತದೆ. ಇದರಲ್ಲಿ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಅಡಗಿರುತ್ತವೆ. ಅಲೋವೆರಾ ಜ್ಯೂಸ್ ಹೊಟ್ಟೆಯ ಸಮಸ್ಯೆಗಳು, ಜೀರ್ಣಕಾರಿ ಸಮಸ್ಯೆಗಳು, ಮಲಬದ್ಧತೆ ಮುಂತಾದ ಅನೇಕ ಅಸ್ವಸ್ಥತೆಗಳನ್ನು ಸುಲಭವಾಗಿ ಗುಣಪಡಿಸುತ್ತದೆ. ಅಲೋವೆರಾ ಜ್ಯೂಸ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಅಲೋವೆರಾ ಜ್ಯೂಸ್ ಚರ್ಮದ ಆರೈಕೆಯಲ್ಲಿ ಸಹಾಯ ಮಾಡುತ್ತದೆ. ಅಲೋವೆರಾ ಜ್ಯೂಸ್ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪಾನೀಯಗಳಲ್ಲಿ ಒಂದಾಗಿದೆ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=q9auZ2eqeZo
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.