Covid-19 And Breastfeeding: ತಾಯಿ ಎದೆ ಹಾಲಿನಿಂದ Covid ಬರಲ್ಲ, ಗರ್ಭಾವಸ್ಥೆಯಲ್ಲೂ ಕೂಡ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಬಹುದು

Covid-19 And Pregnancy: ತಾಯಿಯ ಹಾಲಿನಿಂದ (Brestfeeding) ನವಜಾತ ಶಿಶುವಿಗೆ ಕೋವಿಡ್ ಸೋಂಕಿನ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Written by - Nitin Tabib | Last Updated : Jan 18, 2022, 01:53 PM IST
  • ತಾಯಿ ಎದೆಹಾಲಿನಿಂದ ನವಜಾತ ಶಿಶುವಿಗೆ Covid-19 ಅಪಾಯವಿಲ್ಲ.
  • ಗರ್ಭಾವಸ್ಥೆಯಲ್ಲೂ ಕೂಡ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಬಹುದು.
  • ಗರ್ಭಧಾರಣೆಯ ಮೂರು ತಿಂಗಳುಗಳ ಬಳಿಕ ಲಸಿಕೆ ಹಾಕಿಸಿಕೊಳ್ಳಲು ಸರಿಯಾದ ಸಮಯ
Covid-19 And Breastfeeding: ತಾಯಿ ಎದೆ ಹಾಲಿನಿಂದ Covid ಬರಲ್ಲ, ಗರ್ಭಾವಸ್ಥೆಯಲ್ಲೂ ಕೂಡ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಬಹುದು title=
Women Can Get Vaccine During Pregnancy (File Photo)

Women Can Get Vaccine During Pregnancy: ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರಿ ಓಮಿಕ್ರಾನ್ (Omicron) ಪ್ರಕರಣಗಳು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಗರ್ಭಿಣಿಯರು (Pregnancy) ಇದರ ಹಿಡಿತಕ್ಕೆ ಬೀಳಬಾರದು ಮತ್ತು ತಾಯಿ ಮತ್ತು ಮಗುವನ್ನು ಹೇಗೆ ಸುರಕ್ಷಿತವಾಗಿರಿಸಬೇಕು ಎಂಬುದರ ಕುರಿತು ವೈದ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. ತಜ್ಞರ ಪ್ರಕಾರ, ಕರೋನಾ ಲಸಿಕೆ (Covid-19 Vaccine) ಅನೇಕ ರೀತಿಯ ಸೋಂಕುಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ಕರೋನಾದಿಂದ (Covid-19) ಉಂಟಾಗುವ ತೊಡಕುಗಳನ್ನು ಸಹ ಅದರ ಮೂಲಕ ಕಡಿಮೆ ಮಾಡಬಹುದು. ಇದು ಸ್ವತಃ ಬಲವಾದ ರಕ್ಷಣಾ ಕವಚವಾಗಿದೆ ಎಂದು ತಜ್ಞರು ಹೇಳಿದ್ದಾರೆ..

ಈ ಬಾರಿ ಸೋಂಕು ವೇಗವಾಗಿ ಹರಡುತ್ತಿದೆ ಆದರೆ ಅದು ಮಾರಣಾಂತಿಕವಲ್ಲ, ಇನ್ನಾದರೂ ಜನರು ಜಾಗರೂಕರಾಗಿರಬೇಕು ಎಂದು ಯುಪಿ ರಾಜಧಾನಿಯ ಕೆಜಿಎಂಯುನ ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞ ಡಾ.ಸುಜಾತಾ ದೇವ್ ಹೇಳಿದ್ದಾರೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ವಿಶೇಷವಾಗಿ ಗರ್ಭಿಣಿ ಮಹಿಳೆಯರಲ್ಲಿ ಸಾಕಷ್ಟು ಜಾಗೃತಿ ಕಂಡುಬಂದಿದೆ. ಈ ಅಲೆಯಲ್ಲಿ ಗರ್ಭಿಣಿಯರಿಗೆ ಲಸಿಕೆ ಹಾಕುವ ಮಾರ್ಗಸೂಚಿ ಬಂದಿದ್ದು, ಈ ಕಾರಣಕ್ಕೆ ಅವರಿಗೆ ದೊಡ್ಡ ರಕ್ಷಣಾ ಕವಚ ಸಿಕ್ಕಿದೆ. ತಾಯಿಯ ಹಾಲಿನಿಂದ (Breastfeeding) ನವಜಾತ ಶಿಶುವಿಗೆ ಕೋವಿಡ್ ಸೋಂಕಿನ ಅಪಾಯವಿಲ್ಲ ಎಂದು ಡಾ. ಸುಜಾತಾ ದೇವ್ ಹೇಳಿದ್ದಾರೆ. 

ನೀವು ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದರೆ ಏನು ಮಾಡಬೇಕು?
ಈ ಕುರಿತು ಮಾತನಾಡಿರುವ ನವಿ ಮುಂಬೈನ ಅಪೋಲೋ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞೆ ಮತ್ತು ಪ್ರಸೂತಿ ತಜ್ಞ ತೃಪ್ತಿ ದುಬೆ, 'ಹಾಲುಣಿಸುವ ತಾಯಿ ಮಾತ್ರವಲ್ಲದೆ ಪ್ರತಿಯೊಬ್ಬರೂ ಗಂಟು ಹಾಕಿಕೊಳ್ಳಬೇಕಾದ ಮೊದಲ ವಿಷಯವೆಂದರೆ ತಾಯಿಯ ಹಾಲಿನಿಂದ ಮಗುವಿಗೆ ಸೋಂಕಿನ ಅಪಾಯವು ಅಪವಾದವಾಗಿದೆ (Rare). ಸೋಂಕು ಹನಿಗಳ ಮೂಲಕ ಮಾತ್ರ ಹರಡುತ್ತದೆ (ಉಸಿರಾಟ, ಕೆಮ್ಮು, ಸೀನುವಾಗ ಅಥವಾ ಬಾಯಿ ಮತ್ತು ಮೂಗಿನಿಂದ ಉಗುಳುವ ಸಮಯದಲ್ಲಿ ಬಿಡುಗಡೆಯಾಗುವ ಸಣ್ಣ ಹನಿಗಳು). ಸೋಂಕಿನ ಲಕ್ಷಣಗಳನ್ನು ಹೊಂದಿರುವ ಮಹಿಳೆಯರು, ಸಾಧ್ಯವಾದರೆ, ತಾವು ಐಸೊಲೆಟ್ ಆಗಿರುವ ಕೋಣೆಯಿಂದ ಮಗುವನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿ. ಬಳಿಕ ಸ್ತನ ಪಂಪ್‌ನಿಂದ ಹಾಲನ್ನು ತೆಗೆದುಕೊಂಡು ಮಗುವನ್ನು ನೋಡಿಕೊಳ್ಳುವವರಿಗೆ ನೀಡಿ. ಹಾಲನ್ನು ಹೊರತೆಗೆಯುವ ಮೊದಲು ಪ್ರತಿ ಬಾರಿ ಸ್ತನ ಪಂಪ್ ಅನ್ನು ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. 

ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೆ, ಅಂತಹ ಮಹಿಳೆಯರು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ ಮಗುವನ್ನು ತಮ್ಮೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಬಹುದು ಎಂದು ಅವರು ಹೇಳಿದ್ದಾರೆ. ಕೋಣೆಯಲ್ಲಿ ಎರಡು ಮೀಟರ್ ದೂರದಲ್ಲಿ ಮಗುವನ್ನು ಇರಿಸಿ. ಎಲ್ಲಾ ಸಮಯದಲ್ಲೂ ಸರಿಯಾದ ರೀತಿಯಲ್ಲಿ (ಗಲ್ಲದಿಂದ ಮೂಗಿಗೆ) ಮಾಸ್ಕ್  (N-95) ಧರಿಸಿ. ಪ್ರತಿ ಬಾರಿ ಆಹಾರ ನೀಡುವ ಮೊದಲು, ಕೋವಿಡ್ ಪ್ರೋಟೋಕಾಲ್ ಪ್ರಕಾರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ. ಮಾಸ್ಕ್ ಅನ್ನು ಸರಿಯಾಗಿ ಅಳವಡಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಕೋವಿಡ್ ಸಮಯದಲ್ಲಿಯೂ ಸಹ ಮಹಿಳೆಯರು ತಮ್ಮ ಮಕ್ಕಳಿಗೆ ಆಹಾರವನ್ನು ನೀಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದೆ. ಇದು ಇಬ್ಬರಿಗೂ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Curd: ಮೊಸರಿನೊಂದಿಗೆ ಈ 6 ಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ

ಗರ್ಭಾವಸ್ಥೆಯು ಮಹಿಳೆಯರಿಗೆ ವಿಶೇಷ ಹಂತವಾಗಿರುವುದರಿಂದ ಅವರಿಗೆ ಉಸಿರಾಟದ ತೊಂದರೆಗಳು ಹೆಚ್ಚಾಗಬಹುದು ಎಂದು ಡಾ.ದುಬೆ ಹೇಳುತ್ತಾರೆ. ಈ ಸ್ಥಿತಿಯಲ್ಲಿ, ಅವರಿಗೆ ಕೆಲವು ಶಿಫಾರಸು ಮಾಡಲಾದ ಉಸಿರಾಟದ ಔಷಧಿಗಳನ್ನು ಸಹ ಬಳಕೆ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ-ಪಪ್ಪಾಯಿಯ ಪ್ರಯೋಜನ ತಿಳಿದೇ ಇದೆ.. ಆದರೆ ಅದರಿಂದಾಗುವ ಅನಾರೋಗ್ಯದ ಅರಿವಿದೆಯೇ?

ಗರ್ಭಾವಸ್ಥೆಯಲ್ಲಿಯೂ ಮಹಿಳೆಯರು ಲಸಿಕೆಯನ್ನು ಪಡೆಯಬಹುದೇ?
'ಇದರಿಂದ ಸಂಪೂರ್ಣವಾಗಿ ಯಾವುದೇ ಅಪಾಯವಿಲ್ಲ. ಅವಳು ಯಾವಾಗ ಬೇಕಾದರೂ ಲಸಿಕೆಯನ್ನು ಪಡೆಯಬಹುದು, ಆದರೆ ಗರ್ಭಧಾರಣೆಯ ಮೂರು ತಿಂಗಳ ನಂತರ ಲಸಿಕೆ ಪಡೆಯಲು ಉತ್ತಮ ಸಮಯವಾಗಿದೆ. ಎರಡು ಲಸಿಕೆಗಳ ನಡುವಿನ ಅಂತರವು ಸಾಮಾನ್ಯ ಜನರಂತೆಯೇ ಇರುತ್ತದೆ. ಕಣ್ಣು, ಬಾಯಿ, ಮೂಗು ಮತ್ತು ಮಾಸ್ಕ್ ಗಳನ್ನು ಮುಟ್ಟಬೇಡಿ. ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಜನರು ಸ್ಪರ್ಶಿಸುವ ಸ್ಥಳಗಳು ಅಥವಾ ವಸ್ತುಗಳನ್ನು (ಡೋರ್ ಹ್ಯಾಂಡಲ್‌ಗಳು, ಟೇಬಲ್‌ಗಳು, ಲೈಟರ್‌ಗಳು, ಹೊರಗಿನ ಕಾರ್ಡ್‌ಬೋರ್ಡ್, ಇತ್ಯಾದಿ) ಸ್ಪರ್ಶಿಸುವುದನ್ನು ತಪ್ಪಿಸಿ. ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯುವುದು, ಶೇ.60ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಯಾನಿಟೈಸರ್ ಬಳಕೆ, ಕೋವಿಡ್‌ನ ಈ ಸಾಮಾನ್ಯ ಪ್ರೋಟೋಕಾಲ್‌ಗಳು ಎಲ್ಲರಿಗೂ ಅನ್ವಯಿಸುತ್ತವೆ ಎಂದು ಡಾ. ದುಬೆ ಹೇಳಿದ್ದಾರೆ. 

ಇದನ್ನೂ ಓದಿ-ಕುತ್ತಿಗೆ-ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಈ ಸುಲಭ ಉಪಾಯಗಳ ಮೂಲಕ ಪರಿಹಾರ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News