Curd Hair Pack: ಕೂದಲು ಉದುರುವಿಕೆ, ಬಿಳಿ ಕೂದಲ ಸಮಸ್ಯೆಗೆ ಬಳಸಿ ಈ ವಿಶೇಷ ಹೇರ್ ಪ್ಯಾಕ್

ನೀವು ಈ ಮೊಸರಿನ ಹೇರ್ ಪ್ಯಾಕ್‌ಗಳನ್ನು ಮನೆಯಲ್ಲಿಯೇ ತಯಾರಿಸಬಹುದು.

Written by - Yashaswini V | Last Updated : Jun 21, 2021, 03:16 PM IST
  • ದೇಹದಲ್ಲಿನ ಪೋಷಕಾಂಶಗಳ ಕೊರತೆಯಿಂದ ಕೂದಲು ಸಮಸ್ಯೆಗಳು ಪ್ರಾರಂಭವಾಗುತ್ತವೆ
  • ಮೊಸರಿನಲ್ಲಿ ಕಂಡುಬರುವ ಪೋಷಕಾಂಶಗಳು ಅದರ ಹೇರ್ ಪ್ಯಾಕ್ ಮೂಲಕ ದೇಹಕ್ಕೆ ಸಿಗುತ್ತವೆ
  • ಇದರಿಂದಾಗಿ ಕೂದಲಿನ ಆರೋಗ್ಯ ಸುಧಾರಿಸುತ್ತದೆ
Curd Hair Pack: ಕೂದಲು ಉದುರುವಿಕೆ, ಬಿಳಿ ಕೂದಲ ಸಮಸ್ಯೆಗೆ ಬಳಸಿ ಈ ವಿಶೇಷ ಹೇರ್ ಪ್ಯಾಕ್ title=
ಕೂದಲಿಗೆ ತುಂಬಾ ಪ್ರಯೋಜನಕಾರಿ ಮೊಸರಿನ ಹೇರ್ ಪ್ಯಾಕ್‌

Curd Hair Pack: ಮೊಸರು ಹೇರ್ ಪ್ಯಾಕ್ ಕೂದಲಿಗೆ ತುಂಬಾ ಪ್ರಯೋಜನಕಾರಿ. ಮೊಸರಿನ ಹೇರ್ ಪ್ಯಾಕ್ ಅನ್ವಯಿಸುವ ಮೂಲಕ, ಕೂದಲು ಉದುರುವುದು, ದುರ್ಬಲ ಕೂದಲು, ಬಿಳಿ ಕೂದಲು ಸೇರಿದಂತೆ ಕೂದಲಿಗೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು. ನೀವು ಈ ಮೊಸರು ಹೇರ್ ಪ್ಯಾಕ್‌ಗಳನ್ನು ಮನೆಯಲ್ಲಿಯೇ ತಯಾರಿಸಬಹುದು.

ವಾಸ್ತವವಾಗಿ, ದೇಹದಲ್ಲಿನ ಪೋಷಕಾಂಶಗಳ ಕೊರತೆಯಿಂದ ಕೂದಲು ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮೊಸರಿನಲ್ಲಿ ಕಂಡುಬರುವ ಪೋಷಕಾಂಶಗಳು ಅದರ ಹೇರ್ ಪ್ಯಾಕ್ (Hair Pack) ಮೂಲಕ ದೇಹಕ್ಕೆ ಸಿಗುತ್ತವೆ. ಇದರಿಂದಾಗಿ ಕೂದಲಿನ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ- Curd/Yoghurt Tips: ಈ ಪದಾರ್ಥಗಳನ್ನು ಮೊಸರಿನೊಂದಿಗೆ ಅಪ್ಪಿ-ತಪ್ಪಿಯೂ ತಿನ್ನಲೇಬಾರದು

ನೀವು ಈ ಹೇರ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಮಾತ್ರ ಅನ್ವಯಿಸಿ. ಮೊಸರಿನ ಹೇರ್ ಪ್ಯಾಕ್ (Curd Hair Pack) ಅನ್ನು ಮೂರರಿಂದ ನಾಲ್ಕು ಬಾರಿ ಅನ್ವಯಿಸಿದ ನಂತರವೇ ನಿಮಗೆ ಅದರ ಪರಿಣಾಮ ಗೋಚರಿಸಲಿದೆ.

ಮೊಸರಿನ ಹೇರ್ ಪ್ಯಾಕ್ ತಯಾರಿಸಲು ನಿಮಗೆ ಹೆಚ್ಚಿನ ಪದಾರ್ಥಗಳ ಅಗತ್ಯವಿಲ್ಲ. ಕೇವಲ ಮೊಸರು ಮತ್ತು ನೀರನ್ನು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ಮಿಕ್ಸ್ ಮಾಡುವ ಮೂಲಕ ಪ್ಯಾಕ್ ಮಾಡಿ. ನೆನಪಿಡಿ ನೀರು ಸ್ವಲ್ಪವೆ ಸಾಕು. ಮೊಸರನ್ನು ಸ್ವಲ್ಪ ಗಟ್ಟಿಯಾಗಿರಬೇಕು.

ಮೊದಲು ಕೂದಲನ್ನು ಒದ್ದೆ ಮಾಡಿ. ಅದರ ನಂತರ ಮೊಸರು ಅನ್ವಯಿಸಿ. ಇದನ್ನು 15-20 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಹೇರ್ ವಾಶ್ ಮಾಡಿ.

ಇದನ್ನೂ ಓದಿ- Health Insurance: ಆರೋಗ್ಯ ವಿಮಾ ಕಂಪನಿಯು ನಿಮ್ಮ ಕ್ಲೈಂ ತಿರಸ್ಕರಿಸಿದರೆ ಭಯಪಡಬೇಡಿ, ಇಲ್ಲಿ ದೂರು ನೀಡಿ

ಇದಲ್ಲದೆ ನೀವು ಮೊಸರನ್ನು ಮೆಂತ್ಯದೊಂದಿಗೆ ಬೆರೆಸಿ ಸಹ ಬಳಸಬಹುದು. ಇದು ಕೂದಲು ಉದುರುವಿಕೆ ಸಮಸ್ಯೆಯಿಂದ ನಿಮಗೆ ಪರಿಹಾರ ನೀಡುತ್ತದೆ. 

ಮೊಸರಿನಲ್ಲಿ ಅರ್ಧ ಕಪ್ ಮೆಂತ್ಯ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. 10 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಚೆನ್ನಾಗಿ ತೊಳೆಯಿರಿ.

ಮೊಟ್ಟೆಯ ಹಳದಿ ಲೋಳೆಯೊಂದಿಗೆ ಮೊಸರು ಬೆರೆಸಿ ಬಳಸುವುದು ಕೂಡ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಮೊಟ್ಟೆಯ ಹಳದಿ ಲೋಳೆ ತೆಗೆದುಕೊಳ್ಳಿ. ಮೊಸರು ಮಿಶ್ರಣ ಮಾಡಿ. ನಯವಾದ ಪೇಸ್ಟ್ ಮಾಡಿ ಮತ್ತು ಕೂದಲಿಗೆ ಅನ್ವಯಿಸಿ. 20-25 ನಿಮಿಷಗಳ ನಂತರ ತೊಳೆಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News