ಡಯಾಬಿಟೀಸ್ ಇರುವವರು ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಎಂದಿಗೂ ಏರುವುದಿಲ್ಲ ಬ್ಲಡ್ ಶುಗರ್

Blood Sugar Level Controling Tips : ಮಧುಮೇಹಿಗಳಿಗೆ ಆಹಾರದ ಆಯ್ಕೆಗಳ ಬಗ್ಗೆ ಜಾಗರೂಕರಾಗಿರುವುದು ಅತ್ಯಂತ ಮುಖ್ಯವಾಗಿದೆ. ದಿನದ ಮೊದಲ ಊಟ ಆರೋಗ್ಯಕರವಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. 

Written by - Ranjitha R K | Last Updated : May 25, 2023, 12:54 PM IST
  • ಮೊಟ್ಟೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ
  • ಮೊಳಕೆ ಕಾಳು ಆರೋಗ್ಯಕರ ಮತ್ತು ರುಚಿಕರವಾದ ಉಪಹಾರ ಆಯ್ಕೆ
  • ಮಧುಮೇಹ ನಿಯಂತ್ರಣಕ್ಕೆ ಸುಲಭ ವಿಧಾನ
ಡಯಾಬಿಟೀಸ್ ಇರುವವರು ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಎಂದಿಗೂ ಏರುವುದಿಲ್ಲ ಬ್ಲಡ್ ಶುಗರ್ title=

Blood Sugar Level Controling Tips : ಮಧುಮೇಹ ರೋಗವು ವೇಗವಾಗಿ ಹರಡುತ್ತಿದೆ. ಈ ರೋಗಕ್ಕೆ ಯಾವುದೇ ರೀತಿಯ ಶಾಶ್ವತ ಚಿಕಿತ್ಸೆ ಇಲ್ಲ. ಒಮ್ಮೆ ಇದು ಕಾಣಿಸಿಕೊಂಡರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಮತ್ತೊಂದೆಡೆ, ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಉತ್ತಮ ಆಹಾರ, ಸಾಕಷ್ಟು ನಿದ್ರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಿರುವ ಮೂಲಕ  ಡಯಾಬಿಟೀಸ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟು ಕೊಳ್ಳಬಹುದು. ನೀವು ಕೂಡಾ ಮಧುಮೇಹ ನಿಯಂತ್ರಣದಲ್ಲಿರಲು ಬಯಸುವುದಾದರೆ ಬೆಳಿಗ್ಗೆ ಎದ್ದ ತಕ್ಷಣ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಹಾಗಿದ್ದರೆ ಮಧುಮೇಹವನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ. 

ಮಧುಮೇಹಿಗಳು ಬೆಳಗ್ಗೆ ಎದ್ದ ತಕ್ಷಣ ಈ 5 ಕೆಲಸಗಳನ್ನು ಮಾಡಬೇಕು : 
ಆರೋಗ್ಯಕರ ಉಪಹಾರ : 
ಆರೋಗ್ಯಕರ ಉಪಹಾರ ಆರೋಗ್ಯಕರ ದಿನಚರಿಯ ಒಂದು ಭಾಗ. ಹೌದು, ನೀವು ಮಧುಮೇಹಿಗಳಾಗಿದ್ದರೆ, ಆರೋಗ್ಯಕರ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಈ ಮೂಲಕ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರಲಿದೆ. ಇದಕ್ಕಾಗಿ ಬೆಳಗಿನ ಉಪಹಾರವಾಗಿ ಮೊಟ್ಟೆ, ಮೊಳಕೆ ಕಾಳು, ಒಟ್ ಮಿಲ್ಸ್, ಆವಕಾಡೊ ಟೋಸ್ಟ್, ಹಣ್ಣುಗಳು ಅಥವಾ ಕಾಟೇಜ್ ಚೀಸ್ , ಅದರಲ್ಲೂ ಮಲ್ಟಿಗ್ರೇನ್ ಆವಕಾಡೊ ಟೋಸ್ಟ್ ಮಧುಮೇಹಿಗಳಿಗೆ ಸರಳ ಮತ್ತು ಆರೋಗ್ಯಕರ ಉಪಹಾರವಾಗಿರುತ್ತದೆ. ಈ ಆಹಾರ ಪದಾರ್ಥಗಳಲ್ಲಿರುವ ಪ್ರೋಟೀನ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರರ್ಥ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದೀರ್ಘಕಾಲದವರೆಗೆ ಸ್ಥಿರವಾಗಿಡಲು ಇವುಗಳು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಸ್ಪಾ, ಪಾರ್ಲರ್ ಯಾವುದೂ ಬೇಡ ! ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಡ್ಯಾಮೇಜ್ಡ್ ಹೇರ್ ಸರಿಪಡಿಸಿಕೊಳ್ಳಿ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ :
ನೀರನ್ನು ಕುಡಿಯುವುದರಿಂದ  ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದರಲ್ಲೂ ನೀವು ಮಧುಮೇಹ ರೋಗಿಗಳಾಗಿದ್ದರೆ, ನೀರನ್ನು ಕುಡಿಯುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನೀವು ಸಾಕಷ್ಟು ನೀರು ಕುಡಿದರೆ, ನಿಮ್ಮ ತೂಕ ಕೂಡಾ  ನಿಯಂತ್ರಣದಲ್ಲಿರುತ್ತದೆ.  

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನದಲ್ಲಿರಿಸಿಕೊಳ್ಳಿ : 
ಯಾವುದೇ ಹಠಾತ್  ಟ್ರಿಗರ್ ಅನ್ನು ತಪ್ಪಿಸಲು ಮಧುಮೇಹ ರೋಗಿಯು ಪ್ರತಿದಿನ ರಕ್ತದ ಮಟ್ಟವನ್ನು ಪರೀಕ್ಷಿಸುತ್ತಿರಬೇಕು. ಬೆಳಗ್ಗೆ ಮಧುಮೇಹದಿಂದ ಬಳಲುತ್ತಿದ್ದರೆ, ಎದ್ದ ಕೂಡಲೇ ಮೊದಲು ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು. ಹೀಗೆ ಮಾಡುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಇದನ್ನೂ ಓದಿ : Health Tips: ಈ 5 ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News