Benefits of Guava Leave Kadha: ಸೀಬೆ ಹಣ್ಣು ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿವೆ. ಹಲವು ಕಾಯಿಲೆಗಳಿಗೆ ಈ ಎಲೆಗಳನ್ನು ಸಾಂಪ್ರದಾಯಿಕ ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ. ಸೀಬೆ ಹಣ್ಣಿನ ಎಲೆಗಳ ಕಷಾಯವನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳು ಲಭಿಸುತ್ತವೆ. ಮಧುಮೇಹ ನಿಯಂತ್ರಣ, ತೂಕ ಇಳಿಕೆಯ ಜೊತೆಗೆ ಅಲರ್ಜಿಯಂತಹ ಸಮಸ್ಯೆಯನ್ನು ಸಹ ಅವು ನಿವಾರಿಸುತ್ತವೆ. ಇದಲ್ಲದೆ, ಸೀಬೆ ಗಿಡದ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಸರಿಯಾದ ಸಮಯಕ್ಕೆ ಸೇವಿಸಿ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೀಬೆ ಎಲೆಗಳನ್ನು ನೀರಿನಲ್ಲಿ ಕುದಿಸಿದ ನಂತರ ನೀವು ಈ ನೀರನ್ನು ಸೇವಿಸಿದರೆ, ಅದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೀಬೆ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ, ಅನೇಕ ಜೀವಸತ್ವಗಳು, ಖನಿಜಗಳು, ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್ಸ್ ಗಳಿಂದ ಅವು ಸಮೃದ್ಧವಾಗಿವೆ. ಇದರ ಎಲೆಗಳು ಬಯೋಆಕ್ಟಿವ್ಸ್ ಎಂಬ ಸಂಯುಕ್ತಗಳನ್ನು ಸಹ ಹೊಂದಿರುತ್ತವೆ.
ಆರೋಗ್ಯದ ನಿಧಿ
ಈ ಎಲೆಗಳು ಪ್ರೋಟೀನ್, ವಿಟಮಿನ್ ಸಿ, ಗ್ಯಾಲಿಕ್ ಆಮ್ಲ ಮತ್ತು ಫೀನಾಲಿಕ್ ಸಂಯುಕ್ತಗಳ ಅತ್ಯುತ್ತಮ ಮೂಲವಾಗಿವೆ, ಜೊತೆಗೆ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಸಹ ಇವು ಹೊಂದಿದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಸೀಬೆ ಎಲೆಗಳ ರುಚಿ ಸ್ವಲ್ಪ ಕಟುವಾಗಿರುತ್ತದೆ. ರಕ್ತದಲ್ಲಿನ ಅಧಿಕ ಸಕ್ಕರೆಯನ್ನು ನಿಯಂತ್ರಿಸಲು ಮಧುಮೇಹ ರೋಗಿಗಳಿಗೆ ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಉತ್ತಮ
ಸೀಬೆ ಎಲೆಗಳ ನೀರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಇದರ ಎಲೆಗಳ ನೀರಿನ ಕಷಾಯವು ಅಧಿಕ ಬಿಪಿ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ.
ತೂಕ ಇಳಿಕೆಗೆ ಸಹಕಾರಿ
ಸೀಬೆ ಎಲೆಗಳ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಬಹಳ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯಕವಾಗಿದೆ, ಇದು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.
ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಸಹಕಾರಿ
ಸೀಬೆ ಗಿಡದ ಎಲೆಗಳ ಕಷಾಯ ಅನಿಮಿಯಾ ಅಥವಾ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿ ಆಮ್ಲಜನಕವನ್ನು ಹೆಚ್ಚಿಸುತ್ತದೆ. ಇದು ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಕೆಂಪು ರಕ್ತ ಕಣಗಳನ್ನು ಇದು ಉತ್ತೇಜಿಸುತ್ತದೆ.
ಇದನ್ನೂ ಓದಿ-ಲಿವರ್ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆಯೇ ದೇಹ ನೀಡುವ ಈ ಸಂಕೇತಗಳನ್ನು ಕಡೆಗಣಿಸಬೇಡಿ
ಬಾಯಿ ಹುಣ್ಣಿನ ನೋವಿನಲ್ಲಿ ಪರಿಹಾರವಿದೆ
ದೇಹದ ಉಷ್ಣತೆಯಿಂದ ಬಾಯಿ ಮತ್ತು ನಾಲಿಗೆಯಲ್ಲಿ ಗುಳ್ಳೆಗಳಾಗಿದ್ದರೆ. ಸೀಬೆ ಗಿಡದ ಎಲೆಗಳ ನೀರಿನಿಂದ ಬಾಯಿ ಮುಕ್ಕಳಿಸಿದರೆ ಆ ಹುಣ್ಣುಗಳಿಂದ ಆಗುವ ಉರಿಯಿಂದ ಪರಿಹಾರವನ್ನು ಸಿಗುತ್ತದೆ.
ಇದನ್ನೂ ಓದಿ-ಮಧುಮೇಹ ರೋಗಿಗಳು ಈ ಐದು ಆಹಾರಗಳ ಸಹಾಯದಿಂದ ಇಮ್ಯುನಿಟಿ ಹೆಚ್ಚಿಸಿಕೊಳ್ಳಬಹುದು .!
ಚರ್ಮಕ್ಕೆ ವರದಾನ
ಸೀಬೆ ಎಲೆಯ ನೀರು ನೈಸರ್ಗಿಕ ರಕ್ತ ಶುದ್ಧೀಕರಣ ಮತ್ತು ನಿರ್ವಿಶೀಕರಣ ಪಾನೀಯವಾಗಿದೆ, ಇದು ನಮ್ಮ ದೇಹದಲ್ಲಿರುವ ವಿಷ ಮತ್ತು ಹಾನಿಕಾರಕ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ, ಈ ನೀರು ಮೊಡವೆಗಳು ಮತ್ತು ಕಲೆಗಳನ್ನು ತೆಗೆದುಹಾಕುವಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಹೊಳಪಾದ ಚರ್ಮ ಪಡೆಯಲು ಸಹಕಾರಿಯಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.