Diabetes Control Tips For Patients : ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ, ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಹೀಗಾಗಿ ಜನ ಕಟ್ಟಿ ನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಂಡರು ಔಷಧಿಗಳ ಮೇಲೆ ಅವಲಂಬಿತರಾಗಿದ್ದಾರೆ, ಆದರೆ ನಿಮ್ಮ ದಿನ ನಿತ್ಯದ ಅಭ್ಯಾಸಗಳನ್ನು ಬದಲಾಯಿಸುವುದು ಮತ್ತು ನಿಮ್ಮ ಜೀವನಶೈಲಿಯಿಂದ ಕೆಲವು ಆಹಾರಗಳನ್ನು ತೇಜಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಂತಹ ಆಹಾರಗಳ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ ನೋಡಿ..
ಹುರಿದ ಆಹಾರದಿಂದ ದೂರವಿರಿ
ಹುರಿದ ಮತ್ತು ಕರಿದ ತಿನ್ನುವ ಆಹಾರಗಳು ಹೊಸ ರೋಗಗಳನ್ನು ಹಬ್ಬಿಸುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಮತೋಲನದಲ್ಲಿಲ್ಲದಿದ್ದರೆ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.
ಇದನ್ನೂ ಓದಿ : Drinking Cold Water After Workout: ವರ್ಕೌಟ್ ಬಳಿಕ ನೀವೂ ಕೂಡ ತಣ್ಣೀರು ಕುಡಿಯುತ್ತೀರಾ?
ಮೈದಾ ಹಿಟ್ಟಿನಿಂದ ದೂರವಿರಿ
ಮಧುಮೇಹಿಗಳಿಗೆ ಮೈದಾ ಹಿಟ್ಟು ಅನಾರೋಗ್ಯಕರ. ರೋಗಿಗಳು ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳಿಂದ ದೂರವಿರಬೇಕು. ನೀವು ಈ ಪದಾರ್ಥಗಳನ್ನು ಸೇವಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಹಿಟ್ಟಿನಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಹೆಚ್ಚಾಗಿರುತ್ತದೆ, ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಆಲೂಗಡ್ಡೆಯಿಂದ ದೂರವಿರಿ
ಆಲೂಗಡ್ಡೆ ಭಾರತೀಯ ಅಡುಗೆಮನೆಯಲ್ಲಿ ಹೆಚ್ಚು ಬಳಸಲ್ಪಡುತ್ತದೆ, ಆದರೆ ಮಧುಮೇಹ ರೋಗಿಗಳಿಗೆ ಆಲೂಗಡ್ಡೆ ವಿಷ!? ಕಾರ್ಬೋಹೈಡ್ರೇಟ್ಗಳು ಅಧಿಕವಾಗಿರುವುದರ ಜೊತೆಗೆ ಗ್ಲೈಸೆಮಿಕ್ ಇಂಡೆಕ್ಸ್ನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದು ಮಧುಮೇಹದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Weight loss Soup: ಈ ಸೂಪ್ ಗಳನ್ನು ಸೇವಿಸುವುದರಿಂದ ಅತೀ ಕಡಿಮೆ ಸಮಯದಲ್ಲಿ ತೂಕ ನಷ್ಟ ಮಾಡಿಕೊಳ್ಳಬಹುದು
ಫ್ಲೇವರ್ಡ್ ಮೊಸರು ತಿನ್ನಬೇಡಿ
ಮಧುಮೇಹ ರೋಗಿಗಳು ಸುವಾಸನೆಯ ಮೊಸರನ್ನು ಸಹ ಸೇವಿಸಬಾರದು. ವಾಸ್ತವವಾಗಿ, ಸುವಾಸನೆಯ ಮೊಸರಿನಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿದೆ. ಇದರೊಂದಿಗೆ ಹಲವು ರೀತಿಯ ಕೃತಕ ವಸ್ತುಗಳು ಇದರಲ್ಲಿದ್ದು, ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.