Diabetes Control Tips: ಮಧುಮೇಹಿಗಳು ಈ ಹಣ್ಣಿನ ಎಲೆ ಸೇವಿಸಿ.. ಶುಗರ್‌ ಲೆವೆಲ್‌ ಎಂದಿಗೂ ಹೆಚ್ಚಾಗಲ್ಲ!

How to Control Blood Sugar: ಮಧುಮೇಹ ನಿಭಾಯಿಸಲು ಇಂದು ನಾವು ನಿಮಗೆ ಸರಳವಾದ ಆಯುರ್ವೇದ ಪರಿಹಾರಗಳನ್ನು ಹೇಳಲಿದ್ದೇವೆ. ಈ ಪರಿಹಾರವನ್ನು ಪ್ರಯತ್ನಿಸುವುದರಿಂದ, ನೀವು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ಕಾಪಾಡಬಹುದು. 

Written by - Chetana Devarmani | Last Updated : Apr 15, 2023, 07:32 AM IST
  • ಮಧುಮೇಹಿಗಳು ಈ ಹಣ್ಣಿನ ಎಲೆ ಸೇವಿಸಿ
  • ಶುಗರ್‌ ಲೆವೆಲ್‌ ಎಂದಿಗೂ ಹೆಚ್ಚಾಗಲ್ಲ!
  • ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತೆ
Diabetes Control Tips: ಮಧುಮೇಹಿಗಳು ಈ ಹಣ್ಣಿನ ಎಲೆ ಸೇವಿಸಿ.. ಶುಗರ್‌ ಲೆವೆಲ್‌ ಎಂದಿಗೂ ಹೆಚ್ಚಾಗಲ್ಲ! title=
diabetes control tips

Blood Sugar Control Tips​: ಪ್ರಪಂಚದಾದ್ಯಂತ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಭಾರತವೂ ಈ ಮಧುಮೇಹಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಇನ್ಸುಲಿನ್ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ಹಲವಾರು ಔಷಧಿಗಳು ಬರುತ್ತವೆ. ಆದರೆ ಅವುಗಳು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿವೆ. ಆದರೆ ಈ ಗಿಡದ ಎಲೆಗಳನ್ನು ಸೇವಿಸುವುದರಿಂದ ಮಧುಮೇಹವನ್ನು ಹತೋಟಿಗೆ ತರಬಹುದು.

ಅಂಜೂರದ ಹಣ್ಣು ದೇಹಕ್ಕೆ ಲಾಭದಾಯಕ. ಇದರ ಎಲೆಗಳಲ್ಲಿ ಅಗಾಧವಾದ ಮಧುಮೇಹ ವಿರೋಧಿ ಗುಣಗಳು ಕಂಡುಬರುತ್ತವೆ. ಇದರ ಸೇವನೆಯಿಂದ ಶುಗರ್‌ ಲೆವಲ್‌ ಹತೋಟಿಯಲ್ಲಿರುತ್ತದೆ. 4-5 ಅಂಜೂರದ ಎಲೆಗಳನ್ನು ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ. ಅದರ ನಂತರ ಆ ನೀರನ್ನು ಚಹಾದಂತೆ ಕುಡಿಯಿರಿ. ನೀವು ಬಯಸಿದರೆ, ನೀವು ಅಂಜೂರದ ಎಲೆಗಳನ್ನು ಒಣಗಿಸಿ, ಪುಡಿಮಾಡಬಹುದು. ಈ  ಪುಡಿಯನ್ನು ಒಂದು ಕಪ್ ನೀರಿನಲ್ಲಿ ಅರ್ಧ ಚಮಚ ಬೆರೆಸಿ ಚಹಾದಂತೆ ಕುಡಿಯಿರಿ. ಎರಡೂ ಮಾರ್ಗಗಳು ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ.

ಇದನ್ನೂ ಓದಿ : Organic Tea: ಕೆಜಿಗೆ ಒಂದು ಲಕ್ಷ ರೂಪಾಯಿಯಂತೆ ಮಾರಾಟವಾಗುತ್ತದೆ ಈ ಚಹಾ!

ಮೂಳೆ ದೌರ್ಬಲ್ಯದ ಸಮಸ್ಯೆ ಇರುವವರು ಅಂಜೂರದ ಎಲೆಗಳನ್ನು ಸೇವಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದು. ಇದಕ್ಕಾಗಿ ಅವರು ಅಂಜೂರದ ಎಲೆಗಳ ಪುಡಿಯನ್ನು ತೆಗೆದುಕೊಳ್ಳಬಹುದು. ಆ ಎಲೆಗಳು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಮೂಳೆ ನೋವಿನ ಸಮಸ್ಯೆಯೂ ದೂರವಾಗುತ್ತದೆ.

ಹೃದ್ರೋಗದಿಂದ ಬಳಲುತ್ತಿರುವವರೂ ಅಂಜೂರದ ಎಲೆಗಳ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ. ವಾಸ್ತವವಾಗಿ ಇದರ ಎಲೆಗಳು ಒಮೆಗಾ -3 ಮತ್ತು ಒಮೆಗಾ 6 ಅನ್ನು ಹೊಂದಿರುತ್ತವೆ, ಇದು ಹೃದಯವನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಅಂಜೂರದ ಎಲೆಗಳಲ್ಲಿ ಪೆಕ್ಟಿನ್ ಎಂಬ ಕರಗುವ ನಾರು ಇದ್ದು, ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.

ಇದನ್ನೂ ಓದಿ : ಕೊರೊನಾ ವೈರಸ್ ಭಯವೇ? ಈ 5 ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ

Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News