ಎಂ.ಎಸ್.ಧೋನಿ ಲೆಜೆಂಡ್, ಅವರೊಂದಿಗೆ ಹೋಲಿಕೆ ಮಾಡಬೇಡಿ- ರಿಷಬ್ ಪಂತ್

 ಎಂ.ಎಸ್.ಧೋನಿ ಲೆಜೆಂಡ್, ಅವರೊಂದಿಗೆ ತಮ್ಮನ್ನು ಹೋಲಿಕೆ ಮಾಡಬೇಡಿ ಎಂದು ರಿಷಬ್ ಪಂತ್ ಮನವಿ ಮಾಡಿಕೊಂಡಿದ್ದಾರೆ.

Last Updated : Mar 17, 2019, 03:19 PM IST
ಎಂ.ಎಸ್.ಧೋನಿ ಲೆಜೆಂಡ್, ಅವರೊಂದಿಗೆ ಹೋಲಿಕೆ ಮಾಡಬೇಡಿ- ರಿಷಬ್ ಪಂತ್ title=
file photo

ನವದೆಹಲಿ:  ಎಂ.ಎಸ್.ಧೋನಿ ಲೆಜೆಂಡ್, ಅವರೊಂದಿಗೆ ತಮ್ಮನ್ನು ಹೋಲಿಕೆ ಮಾಡಬೇಡಿ ಎಂದು ರಿಷಬ್ ಪಂತ್ ಮನವಿ ಮಾಡಿಕೊಂಡಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿ ನಂತರ ಧೋನಿ ನಿವೃತ್ತಿ ಘೋಷಿಸುವ ಸಾಧ್ಯತೆ ಇರುವುದರಿಂದ, ಆ ಸ್ಥಾನಕ್ಕೆ ರಿಷಬ್ ಪಂತ್ ಅವರ ಹೆಸರು ಕೇಳಿ ಬಂದಿತ್ತು.ಈ ಹಿನ್ನಲೆಯಲ್ಲಿ ಅವರು ಪ್ರತಿಕ್ರಿಯಿಸಿ ತಮ್ಮನ್ನು ಧೋನಿಯವರಿಗೆ ಹೋಲಿಸಬೇಡಿ ಎಂದು ಹೇಳಿದ್ದಾರೆ.

"ನಾನು ಒಬ್ಬ ಆಟಗಾರನಾಗಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ, ನಾನು ಅವರಿಂದ ಕಲಿಯಬೇಕಾಗಿದೆ. ಅವರೊಂದಿಗೆ ನನ್ನನ್ನು ಹೋಲಿಸಬೇಡಿ , ನಾನು ಅವರ ಜೊತೆ ಫಿಲ್ಡ್ ಆಚೆ ಮತ್ತು ಒಳಗೆ ಹೇಗೆ ಸುಧಾರಿಸಬೇಕು ಎನ್ನುವುದರ ಕುರಿತಾಗಿ ಚರ್ಚಿಸುತ್ತೇನೆ" ಎಂದು ರಿಷಬ್ ಪಂತ್ ಹೇಳಿದ್ದರು.

ಇತ್ತೀಚಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಕೂಡ ಭಾರತ ತಂಡದಲ್ಲಿ ಧೋನಿ ಸ್ಥಾನ ತುಂಬಲು ರಿಷಬ್ ಪಂತ ಬಿಟ್ಟರೆ ಯಾರು ಕಾಣಿಸುತ್ತಿಲ್ಲ ಎಂದು ಹೇಳಿದ್ದರು. ಧೋನಿಗೆ ಪಂತ್ ಪರ್ಯಾಯ ಆಟಗಾರ ಎಂದು ಶ್ಲಾಘಿಸಿದ್ದರು.ಈ ಹಿನ್ನಲೆಯಲ್ಲಿ ಈಗ ರಿಷಬ್ ಪಂತ್ ಅವರು ಈಗ ಧೋನಿಯೊಂದಿಗೆ ತಮ್ಮನ್ನು  ಹೋಲಿಸುವುದರ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.

Trending News