Weight Gain In Winter: ಈ ಕಾರಣಗಳಿಂದ ಚಳಿಗಾಲದಲ್ಲಿ ವೇಗವಾಗಿ ಹೆಚ್ಚಾಗುತ್ತೆ ತೂಕ

Weight Gain in Winter: ಚಳಿಗಾಲದಲ್ಲಿ ಹೆಚ್ಚಿನ ಜನರ ಸಮಸ್ಯೆ ಎಂದರೆ ಅವರ ತೂಕ ಹೆಚ್ಚಾಗುವುದು. ಅದನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿಯಿರಿ.

Written by - Yashaswini V | Last Updated : Dec 16, 2021, 09:34 AM IST
  • ಚಳಿಗಾಲದಲ್ಲಿ ತೂಕ ನಿಯಂತ್ರಣಕ್ಕೆ ಸಿಂಪಲ್ ಟಿಪ್ಸ್
  • ಚಳಿಗಾಲದಲ್ಲಿ ಆಹಾರ ಕ್ರಮದ ಬಗ್ಗೆ ವಿಶೇಷ ಕಾಳಜಿ ಅಗತ್ಯ
  • ಇದರೊಂದಿಗೆ ವ್ಯಾಯಾಮವೂ ಅಗತ್ಯ
Weight Gain In Winter: ಈ ಕಾರಣಗಳಿಂದ ಚಳಿಗಾಲದಲ್ಲಿ ವೇಗವಾಗಿ ಹೆಚ್ಚಾಗುತ್ತೆ ತೂಕ  title=
Weight Gain in Winter

Weight Gain in Winter: ಚಳಿಗಾಲದಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಾಗುವ (Weight Gain in Winter) ಸಮಸ್ಯೆಯನ್ನು ಎದುರಿಸುತ್ತಾರೆ. ತೂಕ ಹೆಚ್ಚಾಗುವುದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು, ಅಗತ್ಯವಾದ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮವನ್ನು ಮಾಡುವುದು ಅತ್ಯಗತ್ಯ ಎಂದು ಗೊತ್ತಿದ್ದರೂ ಹಲವು ವೇಳೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇನ್ನೂ ಕೆಲವು ವೇಳೆ ಚಳಿಗೆ ಬೆಚ್ಚಗೆ ಹೊದ್ದಿ ಮಲಗಬೇಕು ಎನಿಸುವುದೂ ಉಂಟು.  ಈ ರೀತಿಯಾಗಿ ಶೀತದ ಕಾರಣ ಒಡ್ಡಿ  ಒಂದೆಡೆ ವ್ಯಾಯಾಮಕ್ಕೆ ಬ್ರೇಕ್ ಹಾಕುವುದು, ಇನ್ನೊಂದೆಡೆ ಚಳಿಯಲ್ಲಿ ಬಿಸಿ ಬಿಸಿ ಕರಿದ ಆಹಾರ ತಿನ್ನುವುದರಿಂದ ಸಹಜವಾಗಿಯೇ ತೂಕ ಹೆಚ್ಚಾಗುತ್ತದೆ (Weight Gain). ಹಾಗಿದ್ದರೆ, ಚಳಿಗಾಲದಲ್ಲಿ ತೂಕ ಏಕೆ ಹೆಚ್ಚಾಗುತ್ತದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯಿರಿ-

ಚಳಿಗಾಲದಲ್ಲಿ, ಸೂರ್ಯ ತಡವಾಗಿ ಉದಯಿಸುತ್ತಾನೆ ಮತ್ತು ಬೇಗನೆ ಅಸ್ತಮಿಸುತ್ತಾನೆ. ಇದರಿಂದಾಗಿ ದಿನಗಳು ಕಡಿಮೆಯಾಗುತ್ತವೆ. ಇದು ನಮ್ಮ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಅನೇಕ ಬಾರಿ ವ್ಯಾಯಾಮ ಅಥವಾ ವಾಕ್ ಮಾಡುವುದನ್ನು ಬಿಟ್ಟುಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದು ತೂಕ ಹೆಚ್ಚಾಗಲು (Weight Gain) ಕಾರಣವಾಗುತ್ತದೆ.

- ದೀರ್ಘ ರಾತ್ರಿಯಿಂದಾಗಿ ಹೆಚ್ಚು ಸಮಯ ನಿದ್ರಿಸುತ್ತೇವೆ ಮತ್ತು ಬೆಳಿಗ್ಗೆ ಆಲಸ್ಯವನ್ನು ಅನುಭವಿಸುತ್ತೇವೆ. ಇದು ತೂಕ ಹೆಚ್ಚಾಗುವ ಸಮಸ್ಯೆಗೆ ಕಾರಣವಾಗಬಹುದು.

- SAD (Seasonal affective disorder) ಬೇಸರ ಒಂದು ರೀತಿಯ ಒತ್ತಡ (Stress), ಇದು ಹವಾಮಾನದಲ್ಲಿನ ಬದಲಾವಣೆಯಿಂದಲೂ ಉಂಟಾಗುತ್ತದೆ. ಇದು ಮನಸ್ಥಿತಿಯಲ್ಲಿ ತ್ವರಿತ ಬದಲಾವಣೆಗಳನ್ನು ಉಂಟುಮಾಡುತ್ತದೆ. ನಿಮಗೆ ಕೆಲಸ ಮಾಡಲು ಮನಸಾಗುವುದಿಲ್ಲ ಮತ್ತು ನೀವು ಶಕ್ತಿಯ ಕೊರತೆಯನ್ನು ಅನುಭವಿಸುವಿರಿ. SAD ಬೇಸರ ಅಥವಾ ಖಿನ್ನತೆಯಿಂದ ಬಳಲುತ್ತಿರುವ ಜನರು ಮನೆಯಿಂದ ಹೊರಗೆ ಹೋಗುವುದು, ವರ್ಕೌಟ್  (Workout) ಮಾಡುವುದನ್ನು ಇಷ್ಟಪಡುವುದಿಲ್ಲ. ಇದಲ್ಲದೆ, ಅವರು ಸೂರ್ಯನ ಬೆಳಕಿನ ಕೊರತೆಯಿಂದಾಗಿ ಒತ್ತಡವನ್ನು ಅನುಭವಿಸುತ್ತಾರೆ. ಈ ರೀತಿಯಾಗಿ ಹೆಚ್ಚು ದೈಹಿಕ ಚಟುವಟಿಕೆ ಇಲ್ಲದೆ ತೂಕ ಹೆಚ್ಚಾತುವ ಸಾಧತೆಯಿದೆ.

ಇದನ್ನೂ ಓದಿ- Men's Health : ಪುರುಷರೆ ತಪ್ಪದೆ ಹಾಲಿನೊಂದಿಗೆ ಈ ಆಹಾರಗಳನ್ನು ಸೇವಿಸಿ : ಇದರಿಂದ ಆರೋಗ್ಯಕ್ಕಿದೆ ಪ್ರಯೋಜನ

- ಚಳಿಗಾಲದಲ್ಲಿ (Winter), ಹೆಚ್ಚಿನ ಜನರು ಚಹಾ, ಕಾಫಿ, ಕುಕೀಸ್ ಮತ್ತು ಇತರ ಸಿಹಿ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ, ಕೆಲವು ಜನರಿಗೆ, ಈ ಋತುವಿನಲ್ಲಿ ಸೋಡಿಯಂ ತುಂಬಿದ ವಸ್ತುಗಳ ಸೇವನೆಯು ಹೆಚ್ಚಾಗುತ್ತದೆ. ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗುತ್ತದೆ ಮತ್ತು ತೂಕ ಹೆಚ್ಚಾಗುವ ಸಮಸ್ಯೆಗೂ ಇದು ಕಾರಣವಾಗಬಹುದು.

ಚಳಿಗಾಲದಲ್ಲಿ ಹೆಚ್ಚುತ್ತಿರುವ ತೂಕ ನಿಯಂತ್ರಣಕ್ಕೆ ಸಿಂಪಲ್ ಟಿಪ್ಸ್:
ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಿರಿ:

ಚಳಿಗಾಲದಲ್ಲಿ ಸ್ವಲ್ಪ ಸಮಯ ಬಿಸಿಲಿನಲ್ಲಿ ಕುಳಿತುಕೊಳ್ಳಿ. ಇದರಿಂದ ಪ್ರಯೋಜನವಾಗಲಿದೆ. ಸಾಕಷ್ಟು ಪ್ರಮಾಣದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೂಲಕ, ನೀವು SAD  (Seasonal affective disorder)ಅಂದರೆ ಕಾಲೋಚಿತ ಪ್ರಭಾವದ ಅಸ್ವಸ್ಥತೆ  ಸ್ಥಿತಿಯನ್ನು ತಪ್ಪಿಸಬಹುದು.

ತಾಲೀಮು/ವ್ಯಾಯಾಮ:
ಚಳಿಗಾಲದಲ್ಲಿ, ಮನೆಯಲ್ಲಿ ಸ್ವಲ್ಪ ಸಮಯದವರೆಗೆ ಒಳಾಂಗಣ ವ್ಯಾಯಾಮ ಮಾಡಿ. ಆಹಾರ ಸೇವಿಸಿದ ನಂತರ ಸ್ವಲ್ಪ ಸಮಯ ನಡೆಯಿರಿ. ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. 

ಇದನ್ನೂ ಓದಿ- Benefits of Eating Eggs: ಮೊಟ್ಟೆಯಲ್ಲಿ ಎಷ್ಟು ಪ್ರೋಟೀನ್ ಇದೆ ಎಂದು ಅದರ ಬಣ್ಣದಿಂದಲೇ ಪತ್ತೆ ಹಚ್ಚಬಹುದು

ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿ:
ನಿಮ್ಮ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಾಳುಗಳನ್ನು ಸೇರಿಸಿ. ಜಂಕ್, ಸಂಸ್ಕರಿಸಿದ, ಎಣ್ಣೆಯುಕ್ತ ಮತ್ತು ಪ್ಯಾಕ್ ಮಾಡಿದ ಆಹಾರವನ್ನು ಸೇವಿಸಬೇಡಿ.

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ:
ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ಬದಲಾಗಿ, ಸಾಕಷ್ಟು ನೀರು ಕುಡಿಯಿರಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News