Benefits of Guava Leaves: ಖಾಲಿ ಹೊಟ್ಟೆಯಲ್ಲಿ ಸೀಬೆ ಅಥವಾ ಪೇರಲ ಎಲೆಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೇರಲ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಫಾಸ್ಫರಸ್, ಪೊಟ್ಯಾಸಿಯಮ್, ಪ್ರೊಟೀನ್ ಮುಂತಾದ ಹಲವು ಪೋಷಕಾಂಶಗಳಿವೆ. ಇದರ ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಉಸಿರಾಟದ ಸಮಸ್ಯೆಗಳಲ್ಲಿ ಪ್ರಯೋಜನ:
ಪೇರಲ ಎಲೆಗಳ ಸೇವನೆಯು (Benefits of Guava Leaves) ಉಸಿರಾಟದ ಸಮಸ್ಯೆಗಳಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಪೇರಲ ಎಲೆಗಳು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿವೆ. ಬ್ರಾಂಕೈಟಿಸ್ ಸಮಸ್ಯೆಯಲ್ಲಿ ಪೇರಲ ಎಲೆಗಳ ಸೇವನೆಯು ಪ್ರಯೋಜನಕಾರಿಯಾಗಿದೆ.
ಜೀರ್ಣಕ್ರಿಯೆಗಾಗಿ:
ಪೇರಲ ಎಲೆಗಳು (Guava Leaves) ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಗ್ಯಾಸ್ಟ್ರಿಕ್ ಅಲ್ಸರ್ ತಡೆಯಲು ಇದು ಸಹಕಾರಿ. ಇದರೊಂದಿಗೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.
ಇದನ್ನೂ ಓದಿ- ಈ ಸಮಸ್ಯೆಗಳಿದ್ದರೆ ಚಳಿಗಾಲದಲ್ಲಿ ತಪ್ಪಿಯೂ ತಿನ್ನಬಾರದು ಬಾಳೆಹಣ್ಣು
ತೂಕ ನಷ್ಟಕ್ಕೆ ಸಹಾಯಕ:
ತೂಕ ಕಡಿಮೆ ಮಾಡಲು (Weight Loss) ಸಹ ಪೇರಲ ಎಲೆಗಳನ್ನು ಸೇವಿಸಬಹುದು. ಇಂತಹ ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳು ಇದರ ಎಲೆಗಳಲ್ಲಿದ್ದು ದೇಹದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ.
ಅತಿಸಾರದಲ್ಲಿ ಪರಿಹಾರ:
ಅತಿಸಾರದ ಸಮಸ್ಯೆಯಲ್ಲಿ ಪೇರಲ ಎಲೆಗಳ ಸೇವನೆಯು ಸಹ ಪ್ರಯೋಜನಕಾರಿಯಾಗಿದೆ. ಪೇರಲ ಎಲೆಗಳ ಸಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅತಿಸಾರ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ- Full Cream Milk: ಫುಲ್ ಕ್ರೀಂ ಹಾಲು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅಪಾಯಕಾರಿಯೇ? ಇಲ್ಲಿದೆ ಮಾಹಿತಿ
ಅಲರ್ಜಿಯನ್ನು ನಿವಾರಿಸುತ್ತದೆ:
ಪೇರಲ ಎಲೆಗಳು ಅಲರ್ಜಿ ನಿವಾರಕ ಗುಣಗಳನ್ನು ಹೊಂದಿವೆ. ಕೆಮ್ಮು, ಸೀನುವಿಕೆ ಮತ್ತು ತುರಿಕೆ ಮುಂತಾದ ಅಲರ್ಜಿಯ ಲಕ್ಷಣಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ನೆನಪಿಡಿ: ಯಾವಾಗಲೂ ಪೇರಲ ಎಲೆಗಳನ್ನು ತೊಳೆದು ಸೇವಿಸಬೇಕು. ಹಳೆಯ ಎಲೆಗಳನ್ನು ಬಳಸಬಾರದು. ಮಾತ್ರವಲ್ಲ ಇದನ್ನು ಅತಿಯಾಗಿ ತಿನ್ನುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಹಾಗಾಗಿ ಯಾವುದೇ ಆದರೂ ಹಿತ-ಮಿತವಾಗಿದ್ದರೆ ಒಳಿತು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.