10 ದಿನ ತಪ್ಪದೇ ಜೀರಿಗೆ ಸೇವಿಸಿ; ಪರಿಣಾಮ ನೀವೇ ನೋಡಿ!

ಪ್ರತಿನಿತ್ಯ ನೀವು ಸೇವಿಸುವ ಆಹಾರದಲ್ಲಿ ಜೀರಿಗೆ ಬಳಸಿದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ. 

Last Updated : Jun 26, 2018, 03:50 PM IST
10 ದಿನ ತಪ್ಪದೇ ಜೀರಿಗೆ ಸೇವಿಸಿ; ಪರಿಣಾಮ ನೀವೇ ನೋಡಿ! title=

ನವದೆಹಲಿ: ದೇಶದಲ್ಲಿ ಮಸಾಲೆ ಪದಾರ್ಥಗಳಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಮಸಾಲೆ ಪದಾರ್ಥಗಳು ಕೇವಲ ನೀವು ತಯಾರಿಸುವ ಅಡುಗೆಯನ್ನು ಸುವಾಸನೆಭರಿತವಾಗಿ ಇರುವಂತೆ ಮಾಡುವುದಷ್ಟೇ ಅಲ್ಲ, ನಿಮ್ಮ ಆರೋಗ್ಯವನ್ನೂ ಉತ್ತಮಗೊಳಿಸುತ್ತವೆ. 

ದೇಹದ ಎಲ್ಲಾ ಅಂಗಗಳ ಆರೋಗ್ಯಕ್ಕೆ ಜೀರಿಗೆ ತುಂಬಾ ಪ್ರಯೋಜನಕಾರಿ. ಪ್ರತಿನಿತ್ಯ ನೀವು ಸೇವಿಸುವ ಆಹಾರದಲ್ಲಿ ಜೀರಿಗೆ ಬಳಸಿದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತವೆ. ಹಾಗಾಗಿ ಕೇವಲ 10ದಿನ ಪ್ರತಿನಿತ್ಯ ಜೀರಿಗೆ ಸೇವಿಸಿ, ನಿಮ್ಮ ಆರೋಗ್ಯದಲ್ಲಿ ಉಂಟಾಗುವ ಮಹತ್ವದ ಬದಲಾವಣೆಗಳನ್ನು ಗಮನಿಸಿ ನೀವೇ ಅಚ್ಚರಿ ಪಡುತ್ತೀರಿ.

ಜೀರಿಗೆ ಸೇವನೆಯಿಂದಾಗುವ ಪ್ರಯೋಜನಗಳು...

1. ಜೀರಿಗೆ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಪ್ರತಿನಿತ್ಯ ಒಂದು ಚಮಚ ಜೀರಿಗೆ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ.
2. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರಿಗೆ ಜೀರಿಗೆ ರಾಮಬಾಣ. ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. 
3. ಜೀರಿಗೆಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿದೆ. ಇದು ರಕ್ತದ ಕೊರತೆ, ಎಣ್ಣೆ ಅಂಶ ಮೊದಲಾದ ಸಮಸ್ಯೆಗಳಿಂದ ಮೂಡುವ ಮೊದವೆಗಳನ್ನು ನಿವಾರಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. 
4. ಚರ್ಮ ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಜೀರಿಗೆ ಪೇಸ್ಟ್'ಅನ್ನು ಮುಖಕ್ಕೆ ಹಚ್ಚುವುದರಿಂದ ವಯಸ್ಸಾದಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ. 
5. ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
6.  ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ.
7. ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ, ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. 
8. ಬಾಣಂತಿಯರು ಜೀರಿಗೆ ಹೆಚ್ಚಾಗಿ ಸೇವಿಸಿದರೆ ಎದೆಹಾಲು ವೃದ್ಧಿಸುತ್ತದೆ. 
9. ಎರಡು ಚಮಚ ಜೀರಿಗೆಗೆ ನೀರು ಬೆರೆಸಿ ರಾತ್ರಿ ಪೂರ್ತಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುದಿಸಿ ಕುಡಿಯಿರಿ. ಜೊತೆಯಲ್ಲಿ ಜೀರಿಗೆಯನ್ನು ಅಗೆದು ನುಂಗಿ. ಹೀಗೆ ಮಾಡಿದ್ರೆ ನಿಮ್ಮ ತೂಕ ಕಡಿಮೆಯಾಗುತ್ತದೆ.
10. ಬೆಳ್ಳುಳ್ಳಿ ಮತ್ತು ನಿಂಬೆ ಕೂಡ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿ. 
11. ಜೀರಿಗೆ ನೀರು ಕುಡಿಯುವುದರಿನದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆ ಆಗುತ್ತದೆ. 
12. ಜೀರಿಗೆಯನ್ನು ಹುರಿದು ಪುಡಿ ಮಾಡಿ, ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಕೆಮ್ಮು, ಕಫಾ ನಿವಾರಣೆಯಾಗುತ್ತದೆ.

Trending News