Full Cream Milk: ಫುಲ್ ಕ್ರೀಂ ಹಾಲು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅಪಾಯಕಾರಿಯೇ? ಇಲ್ಲಿದೆ ಮಾಹಿತಿ

Full Cream Milk: ಹೆಚ್ಚಿನ ಮಂದಿ ಫುಲ್ ಕ್ರೀಂ ಹಾಲನ್ನು ಪ್ರಯೋಜನಕಾರಿ ಎಂದು ಪರಿಗಣಿಸುವುದಿಲ್ಲ. ಏಕೆಂದರೆ ಇದು ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದೆ. ಹಾಗಾಗಿ ಫುಲ್ ಕ್ರೀಂ ಹಾಲು ಕುಡಿಯಬೇಕೇ ಅಥವಾ ಬೇಡವೇ ಎಂದು ತಿಳಿಯುವುದು ಮುಖ್ಯ. 

Written by - Yashaswini V | Last Updated : Dec 14, 2021, 02:27 PM IST
  • ಪೂರ್ಣ ಕೆನೆ/ ಫುಲ್ ಕ್ರೀಂ ಹಾಲು ಕುಡಿಯುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಲ್ಲ

    ಸಂಪೂರ್ಣ ಕೊಬ್ಬಿನ ಹಾಲು ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ
  • ಪೂರ್ಣ ಕೆನೆ ಎಂದರೆ ಫುಲ್ ಕ್ರೀಂ ಹಾಲು ಮೂಳೆಗಳಿಗೆ ಪ್ರಯೋಜನಕಾರಿಯಾಗಿದೆ
Full Cream Milk:  ಫುಲ್ ಕ್ರೀಂ ಹಾಲು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಅಪಾಯಕಾರಿಯೇ? ಇಲ್ಲಿದೆ ಮಾಹಿತಿ  title=
Full Cream Milk Benefits

Full Cream Milk: ಹೆಚ್ಚಿನವರು ಫುಲ್ ಕ್ರೀಮ್ ಹಾಲನ್ನು ಕೊಬ್ಬು ಮತ್ತು ಕ್ಯಾಲೋರಿಗಳು ಎಂದು ಭಾವಿಸಿ ಕುಡಿಯುವುದಿಲ್ಲ, ಆದರೆ ಫುಲ್ ಕ್ರೀಮ್ ಹಾಲನ್ನು ಕುಡಿಯುವುದರಿಂದ ನಿಮಗೆ ಹಾನಿಯಾಗುವುದಿಲ್ಲ. ತಜ್ಞರ ಪ್ರಕಾರ, ಹಾಲಿನಲ್ಲಿ ಅನೇಕ ಪೋಷಕಾಂಶಗಳಿವೆ, ಆದರೆ ಹಾಲಿನಿಂದ ಕೊಬ್ಬನ್ನು ಸ್ವಲ್ಪ ಕಡಿಮೆ ಮಾಡಿದಾಗ, ಅದು ವಿಟಮಿನ್ ಎ, ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಅನ್ನು ಸಹ ತೆಗೆದುಹಾಕುತ್ತದೆ. ಹಾಲಿನಿಂದ ಕೊಬ್ಬನ್ನು ತೆಗೆಯುವ ಪ್ರಕ್ರಿಯೆಯಲ್ಲಿ ಹೃದಯದ ಆರೋಗ್ಯಕ್ಕೆ ಅಗತ್ಯವಾದ ಒಮೆಗಾ 3 ಕೊಬ್ಬಿನಾಮ್ಲಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಹಾಗಾಗಿ  ಫುಲ್ ಕ್ರೀಂ ಹಾಲು ಕುಡಿಯಬೇಕೇ ಅಥವಾ ಬೇಡವೇ? ಪೂರ್ಣ ಕೆನೆ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂದು ತಿಳಿದಿರುವುದು ಬಹಳ ಮುಖ್ಯ.

ಹೃದಯದ ಆರೋಗ್ಯಕ್ಕಾಗಿ:
ಹಾಲು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ ಮತ್ತು ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಆದರೆ ತಜ್ಞರ ಪ್ರಕಾರ, ಪೂರ್ಣ ಕೆನೆ ಹಾಲು (Full Cream Milk) ಕುಡಿಯುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಲ್ಲ. 

ಇನ್ಸುಲಿನ್ ಪ್ರತಿರೋಧದ ಅಪಾಯ ಕಡಿಮೆ:
ಸಂಪೂರ್ಣ ಕೊಬ್ಬಿನ ಹಾಲು  ಎಂದರೆ ಫುಲ್ ಕ್ರೀಂ ಹಾಲು ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ನೀವು ಸಂಪೂರ್ಣ ಕೊಬ್ಬಿನ ಹಾಲನ್ನು ಸೇವಿಸಿದರೆ, ಅದು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ-  Diabetes: ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಈ 2 ಪದಾರ್ಥಗಳು ರಾಮಬಾಣವಿದ್ದಂತೆ!

ಬೊಜ್ಜು ಹೆಚ್ಚಾಗುವುದಿಲ್ಲ:
ಹಲವರು ಫುಲ್ ಕ್ರೀಂ ಹಾಲನ್ನು ಕುಡಿದರೆ ತೂಕ ಹೆಚ್ಚುತ್ತದೆ (Weight Gain) ಎಂದು ಭಾವಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ಪೂರ್ಣ ಕೆನೆ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುವುದಿಲ್ಲ. ಹಾಲಿನಲ್ಲಿ ವಿಟಮಿನ್ ಎ, ಇ, ಡಿ ಮತ್ತು ಸಿ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿವೆ. ಕಡಿಮೆ ಕೊಬ್ಬಿನ ಹಾಲಿನಲ್ಲಿ, ಹೆಚ್ಚಿನ ಕೊಬ್ಬನ್ನು ತೆಗೆದುಹಾಕಲಾಗುತ್ತದೆ ಮತ್ತು ಅದರೊಂದಿಗೆ ಅನೇಕ ಅಗತ್ಯ ಪೋಷಕಾಂಶಗಳನ್ನು ಹಾಲಿನಿಂದ ತೆಗೆದುಹಾಕಲಾಗುತ್ತದೆ.

ಇದನ್ನೂ ಓದಿ- Eating Apple: ಸೇಬು ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ?

ವಿಟಮಿನ್ ಡಿ ಕೊರತೆಯನ್ನು ನಿವಾರಿಸುತ್ತದೆ:
ಪೂರ್ಣ ಕೆನೆ ಅಂದರೆ ಫುಲ್ ಕ್ರೀಂ ಹಾಲು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ ಸಮೃದ್ಧವಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News