ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್

Fenugreek Seeds Benefits: ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಸಕ್ಕರೆ ಕಾಯಿಲೆ. ಆದರೆ, ನಿಮ್ಮ ಮನೆಯಲ್ಲಿರುವ ಒಂದು ಧಾನ್ಯದ ಸಹಾಯದಿಂದ ಈ ಕಾಯಿಲೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು. 

Written by - Yashaswini V | Last Updated : Sep 5, 2024, 08:11 AM IST
  • ಖಾಲಿ ಹೊಟ್ಟೆಯಲ್ಲಿ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಇಡೀ ದಿನದ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತದೆ.
  • ಪ್ರತಿಯೊಬ್ಬರೂ ಈ ವಿಚಾರವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಅಗತ್ಯ, ಆದರಲ್ಲೂ ಸಕ್ಕರೆ ಕಾಯಿಲೆ ಇರುವವರು ಇದನ್ನು ತಪ್ಪದೇ ಅರಿಯಬೇಕು
  • ಬೆಳಿಗ್ಗೆ ಎದ್ದ ಕೂಡಲೇ ಬೆಡ್ ಟೀ/ಕಾಫಿ ಕುಡಿಯುವ ಬದಲಿಗೆ ಒಂದು ಚಮತ್ಕಾರಿ ಪಾನೀಯ ಸೇವನೆಯು ಶುಗರ್ ಕಂಟ್ರೋಲ್ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ.
ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್  title=

Food To Control Blood Sugar: ಒಮ್ಮೆ ಸಕ್ಕರೆ ಕಾಯಿಲೆ ಎಂದರೆ ಡಯಾಬಿಟಿಸ್ ಬಂತೆಂದರೆ ಜೀವಪೂರ್ತಿ ಈ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ವಾಸ್ತವವಾಗಿ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಅದು ಇತರ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು. ಹಾಗಾಗಿ, ಶುಗರ್ ಲೆವೆಲ್ (Sugar Level) ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಅಗತ್ಯ. ನೀವು ನಿಮ್ಮ ಮನೆಯಲ್ಲಿರುವ ಸಣ್ಣ ಧಾನ್ಯದ ಸಹಾಯದಿಂದ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. 

ಹೌದು, ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಮೆಂತ್ಯ ಕಾಳುಗಳು (Fenugreek seeds)ಡಯಾಬಿಟಿಸ್ ಸಮಸ್ಯೆ ಇರುವವರಿಗೆ ದಿವ್ಯೌಷಧವಾಗಿದೆ. ಇದನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗುವುದಿಲ್ಲ. ಹಾಗಿದ್ದರೆ, ಡಯಾಬಿಟಿಸ್ ನಿಯಂತ್ರಿಸಲು ಮೆಂತ್ಯ ಕಾಳುಗಳನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ. 

ಇದನ್ನೂ ಓದಿ- Bilvapatra Benefits: ಶಿವನಿಗೆ ಪ್ರಿಯವಾದ ಈ ಎಲೆಯಿಂದ ಫಟಾಫಟ್ ಕಂಟ್ರೋಲ್ ಆಗುತ್ತೆ ಶುಗರ್

ಮೆಂತ್ಯ ಕಾಳುಗಳಲ್ಲಿರುವ ಪೋಷಕಾಂಶಗಳು (Nutrients in fenugreek seeds):  
ಮೆಂತ್ಯ ಕಾಳುಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ ಎ, ಬಿ, ಡಿ, ಜೀವಸತ್ವಗಳು, ಫೈಬರ್, ಕಬ್ಬಿಣಾಂಶದ ಜೊತೆಗೆ ಬಲವಾದ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಹಾಗಾಗಿ, ನಿತ್ಯ ಒಂದೇ ಒಂದು ಚಮಚದಷ್ಟು ಮೆಂತ್ಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದರಲ್ಲೂ ಮಧುಮೇಹ ಸಮಸ್ಯೆ ಇರುವವರಿಗೆ ಇದು ಯಾವುದೇ ವರದಾನಕ್ಕಿಂತಲೂ ಕಡಿಮೆಯಿಲ್ಲ. 

ಇದನ್ನೂ ಓದಿ- ಮಾನ್ಸೂನ್‌ನಲ್ಲಿ ಕಾಡುವ ರಿಂಗ್‌ವರ್ಮ್ ಸಮಸ್ಯೆಯಿಂದ ತಕ್ಷಣ ಪರಿಹಾರಕ್ಕಾಗಿ ಸರಳ ಮನೆಮದ್ದುಗಳು

ಶುಗರ್ ಕಂಟ್ರೋಲ್ ಮಾಡಲು ಮೆಂತ್ಯಕಾಳುಗಳನ್ನು ಹೇಗೆ ಬಳಸಬೇಕು(How to use fenugreek seeds to control sugar):
ರಾತ್ರಿಯಲ್ಲಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳನ್ನು ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಮೆಂತ್ಯ ಕಾಲುಗಳಲ್ಲಿ ಕರಗುವ ನಾರಿನ ಅಂಶ ಹೇರಳವಾಗಿದೆ. ನಿತ್ಯ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗಿ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News