ಈ ಕಾಳನ್ನು ಕುದಿಸಿ ನೀರು ಕುಡಿದರೆ ಸಹಜ ಸ್ಥಿತಿಗೆ ಬರುವುದು ಹೈ ಬ್ಲಡ್ ಪ್ರೆಶರ್

Fenugreek Water Benefits :ಮೆಂತ್ಯೆ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಮೆಂತ್ಯೆ ನೀರನ್ನು ಕುಡಿಯುತ್ತಿದ್ದರೆ, ಅದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

Written by - Ranjitha R K | Last Updated : Mar 21, 2024, 04:25 PM IST
  • ನಮ್ಮ ಅಡುಗೆಮನೆಯಲ್ಲಿ ಅನೇಕ ರೀತಿಯ ಮಸಾಲೆಗಳಿವೆ.
  • ಇಂಥ ಮಸಾಲೆಗಳಲ್ಲಿ ಮೆಂತ್ಯೆ ಬೀಜಗಳೂ ಸೇರಿವೆ.
  • ಇದರ ಬಳಕೆಯಿಂದ ದೇಹದ ಅನೇಕ ಸಮಸ್ಯೆಗಳನ್ನು ಕೂಡಾ ಗುಣಪಡಿಸಬಹುದು.
ಈ ಕಾಳನ್ನು ಕುದಿಸಿ ನೀರು ಕುಡಿದರೆ ಸಹಜ ಸ್ಥಿತಿಗೆ ಬರುವುದು ಹೈ ಬ್ಲಡ್ ಪ್ರೆಶರ್  title=

Fenugreek Water Benefits : ನಮ್ಮ ಅಡುಗೆಮನೆಯಲ್ಲಿ ಅನೇಕ ರೀತಿಯ ಮಸಾಲೆಗಳಿವೆ. ಇಂಥ ಮಸಾಲೆಗಳಲ್ಲಿ ಮೆಂತ್ಯೆ ಬೀಜಗಳೂ ಸೇರಿವೆ. ಇದು ಆಹಾರದ ರುಚಿ ಮತ್ತು ಘಮ ಎರಡನ್ನೂ ಹೆಚ್ಚಿಸುತ್ತದೆ.ಮೆಂತ್ಯೆ ಕಾಳು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಇದರ ಬಳಕೆಯಿಂದ ದೇಹದ ಅನೇಕ ಸಮಸ್ಯೆಗಳನ್ನು ಕೂಡಾ ಗುಣಪಡಿಸಬಹುದು. ಮೆಂತ್ಯೆ ಫೈಬರ್, ವಿಟಮಿನ್ ಗಳು, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ನಂಥಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಮೆಂತ್ಯೆಯನ್ನು  ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.  

ಮೆಂತ್ಯೆ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಮೆಂತ್ಯೆ ನೀರನ್ನು ಕುಡಿಯುತ್ತಿದ್ದರೆ, ಅದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಮೆಂತ್ಯೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳಿವೆ.  

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಈ ವಸ್ತುವನ್ನು ಬಾಯಿಯಲ್ಲಿಟ್ಟುಕೊಳ್ಳಿ ! ಬೆಳಗ್ಗೆ ನಾರ್ಮಲ್ ಆಗಿರುತ್ತದೆ ಬ್ಲಡ್ ಶುಗರ್

ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮೆಂತ್ಯೆ ನೀರು ಹೇಗೆ ಪ್ರಯೋಜನಕಾರಿ? : 
ಮೆಂತ್ಯೆ ಬೀಜಗಳ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.  ಇದು ತಾಮ್ರ, ಕ್ಯಾರೋಟಿನ್, ಸತು, ಫೋಲಿಕ್ ಆಮ್ಲ, ಸೋಡಿಯಂ ಮತ್ತು ಮೆಗ್ನೀಸಿಯಮ್‌ನಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೀರ್ಘಕಾಲದವರೆಗೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದವರು ಮೆಂತ್ಯೆ  ನೀರನ್ನು  ಕುಡಿಯುವುದರಿಂದ ಹೈ ಬ್ಲಡ್ ಬ್ರೆಶರ್ ನಾರ್ಮಲ್  ಆಗುತ್ತದೆ.   

ಮೆಂತ್ಯೆ ನೀರನ್ನು ಹೇಗೆ ಸೇವಿಸಬೇಕು ? :  
ಮೆಂತ್ಯೆ ನೀರು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸಲು, ಮೊದಲು 1 ಪ್ಯಾನ್ ತೆಗೆದುಕೊಂಡು, ಅದರಲ್ಲಿ ಸುಮಾರು 2 ಚಮಚ ಮೆಂತ್ಯೆ  ಬೀಜಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದರ ನಂತರ ನೀರನ್ನು ತಣ್ಣಗಾಗಲು ಬಿಡಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಇದನ್ನೂ ಓದಿ : Mouth Ulcer: ಬಾಯಿ ಹುಣ್ಣು ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ

ಇದಲ್ಲದೆ, ಮೆಂತ್ಯೆಯನ್ನು ರುಬ್ಬುವ ಮೂಲಕ ಪೇಸ್ಟ್ ತಯಾರಿಸಿಕೊಳ್ಳಬಹುದು. ಇದು ರಕ್ತದೊತ್ತಡದ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆಂತ್ಯೆ ನೀರಿನ ಇತರ ಪ್ರಯೋಜನಗಳು : 
ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ
ದೇಹದ ತೂಕ ನಿಯಂತ್ರಣದಲ್ಲಿರುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ರಕ್ತದಲ್ಲಿನ ಸಕ್ಕರೆ ಸಮಸ್ಯೆ ದೂರವಾಗುತ್ತದೆ
ದೇಹದಲ್ಲಿ ಊತವನ್ನು ಕಡಿಮೆ ಮಾಡುತ್ತದೆ
ದೇಹದ ಹಾರ್ಮೋನುಗಳು ಸಮತೋಲನದಲ್ಲಿರುತ್ತದೆ 
ಚರ್ಮದ ಸಮಸ್ಯೆಗಳು ದೂರವಾಗುತ್ತವೆ 

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News