ಮೂರು ಯೋಜಿತ ಭವಿಷ್ಯತ್ತಿನ ಸಾರ್ವಜನಿಕ ಸಂಸ್ಥೆಗಳಿಗೆ ಬ್ರ್ಯಾಂಡ್ ಹೆಸರುಗಳನ್ನು ಅನಾವರಣಗೊಳಿಸಿದ ಜಿಇ

ಜಿಇ (NYSE:GE), ಆರೋಗ್ಯ ಶುಶ್ರೂಷೆ, ಶಕ್ತಿ ಮತ್ತು ವೈಮಾನಿಕ ಕ್ಷೇತ್ರಗಳ ಬೆಳವಣಿಗೆಯ ಮೇಲೆ ಗಮನಕೇಂದ್ರೀಕರಿಸಲಾದ ಮೂರು ಉದ್ಯಮ-ಮುಂಚೂಣಿ, ಜಾಗತಿಕ ಹೂಡಿಕೆ-ದರ್ಜೆಯ ಸಾರ್ವಜನಿಕ ಸಂಸ್ಥೆಗಳಾಗಿ ಮಾಡುವ ತನ್ನ ಯೋಜಿತ ಪ್ರತ್ಯೇಕರಣದ ಮೂಲಕ ತಾನು ರಚಿಸಲಿರುವ ಭವಿಷ್ಯತ್ತಿನ ಸಂಸ್ಥೆಗಳ ಬ್ರ್ಯಾಂಡ್ ಹೆಸರುಗಳನ್ನು ಇಂದು ಘೋಷಿಸಿತು.

Written by - Zee Kannada News Desk | Last Updated : Jul 21, 2022, 11:16 PM IST
  • ಆರೋಗ್ಯಶುಶ್ರೂಷಾ ವ್ಯಾಪಾರವನ್ನು ಜಿಇ ಹೆಲ್ತ್‍ಕೇರ್ ಎಂದು ಹೆಸರಿಸಲಾಗುತ್ತದೆ
  • ವೈಮಾನಿಕ ವ್ಯಾಪಾರವನ್ನು ಜಿಇ ಏರೋಸ್ಪೇಸ್ ಎಂದು ಕರೆಯಲಾಗುತ್ತದೆ
ಮೂರು ಯೋಜಿತ ಭವಿಷ್ಯತ್ತಿನ ಸಾರ್ವಜನಿಕ ಸಂಸ್ಥೆಗಳಿಗೆ ಬ್ರ್ಯಾಂಡ್ ಹೆಸರುಗಳನ್ನು ಅನಾವರಣಗೊಳಿಸಿದ ಜಿಇ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಿಇ (NYSE:GE), ಆರೋಗ್ಯ ಶುಶ್ರೂಷೆ, ಶಕ್ತಿ ಮತ್ತು ವೈಮಾನಿಕ ಕ್ಷೇತ್ರಗಳ ಬೆಳವಣಿಗೆಯ ಮೇಲೆ ಗಮನಕೇಂದ್ರೀಕರಿಸಲಾದ ಮೂರು ಉದ್ಯಮ-ಮುಂಚೂಣಿ, ಜಾಗತಿಕ ಹೂಡಿಕೆ-ದರ್ಜೆಯ ಸಾರ್ವಜನಿಕ ಸಂಸ್ಥೆಗಳಾಗಿ ಮಾಡುವ ತನ್ನ ಯೋಜಿತ ಪ್ರತ್ಯೇಕರಣದ ಮೂಲಕ ತಾನು ರಚಿಸಲಿರುವ ಭವಿಷ್ಯತ್ತಿನ ಸಂಸ್ಥೆಗಳ ಬ್ರ್ಯಾಂಡ್ ಹೆಸರುಗಳನ್ನು ಇಂದು ಘೋಷಿಸಿತು.

ಜಿಇ ಹೆಲ್ತ್‍ಕೇರ್, ಜಿಇದ ಆರೋಗ್ಯಶುಶ್ರೂಷಾ ವ್ಯಾಪಾರದ ಹೆಸರಲಾಗಿರಲಿದೆ. ನವೀಕರಿಸಬಹುದಾದ ಶಕ್ತಿ, ಪವರ್, ಡಿಜಿಟಲ್ ಮತ್ತು ಎಜರ್ನಿ ಹಣಕಾಸು ಸೇವೆಗಳು ಒಳಗೊಂಡಂತೆ, ಜಿಇದ ಪ್ರಸ್ತುತದ ಶಕ್ತಿ ವ್ಯಾಪಾರಗಳ ಪೋರ್ಟ್ ಪೋಲಿಯೊ  ಒಗ್ಗೂಡಿ ಜಿಇ ವರ್ನೋವಾ ಎಂಬ ಬ್ರ್ಯಾಂಡ್ ಹೆಸರನ್ನು ಪಡೆದುಕೊಳ್ಳುತ್ತದೆ. ಜಿಇ ಏರೋಸ್ಪೇಸ್, ಜಿಇದ ವೈಮಾನಿಕ ವ್ಯಾಪಾರಗಳ ಹೆಸರಾಗಿರುತ್ತದೆ. ಎಲ್ಲಾ ಮೂರು ಯೋಜಿತ ಸಂಸ್ಥೆಗಳು ಸರಿಸುಮಾರು $20 ಬಿಲಿಯನ್‍ಗಳ* ಜಿಇದ ಪರಂಪರೆ ಹಾಗೂ ಜಾಗತಿಕ ಬ್ರ್ಯಾಂಡ್ ಮೌಲ್ಯದ ಲಾಭ ಪಡೆದುಕೊಳ್ಳುತ್ತವೆ.

ಇದನ್ನೂ ಓದಿ : Draupadi Murmu: ಒಡಿಶಾದ ಬುಡಕಟ್ಟು ಪ್ರದೇಶದಿಂದ ರೈಸಿನಾ ಹಿಲ್ ವರೆಗೆ ಮುರ್ಮು ಪಯಣ..

ಹೆಚ್ಚುವರಿಯಾಗಿ ಜಿಇ, ಯೋಜಿತ ಸ್ಪಿನ್-ಆಫ್‍ನ ಪೂರ್ಣಗೊಳ್ಳುವಿಕೆಯ ನಂತರ, ಜಿಇ ಹೆಲ್ತ್‍ಕೇರ್ ನ ಶೇರುಗಳನ್ನು “GEHC”  ಟಿಕರ್ ಚಿಹ್ನೆಯಡಿ Nasdaq ಜಾಗತಿಕ ಆಯ್ದ ಮಾರುಕಟ್ಟೆಯಲ್ಲಿ ಪಟ್ಟಿಮಾಡಲಾಗುತ್ತದೆ ಎಂದೂ ಕೂಡ ಇಂದು ಜಿಇ ಘೋಷಿಸಿತು. Nasdaqದಲ್ಲಿ ಪಟ್ಟಿ ಮಾಡುವ ಮೂಲಕ ಜಿಇ ಹೆಲ್ತ್‍ಕೇರ್‍ಗೆ ವಿನಿಮಯದ ಪ್ರೊಫೈಲ್  ಮತ್ತು ವಿನೂತನವಾದ, ತಂತ್ರಜ್ಞಾನ-ನಿರ್ದೇಶಿತ ಸಾರ್ವಜನಿಕ ಸಂಸ್ಥೆಗಳಿಗಾಗಿ, ಅದರಲ್ಲೂ ನಿರ್ದಿಷ್ಟವಾಗಿ ಆರೋಗ್ಯಶುಶ್ರೂಷಾ ಕ್ಷೇತ್ರಗಳಲ್ಲಿ ಒಂದು ಮಾರುಕಟ್ಟೆಯಾಗಿ ಟ್ರ್ಯಾಕ್ ರೆಕಾರ್ಡ್‍ನ ಲಾಭ ಸಿಗುತ್ತದೆ.

ಜಿಇದ ಚೇರ್ಮನ್ ಹಾಗೂ ಸಿಇಒ ಮತ್ತು ಜಿಇ ಏರೋಸ್ಪೇಸ್‍ನ ಸಿಇಒ ಎಚ್. ಲಾರೆನ್ಸ್ ಕಲ್ಪ್ ಜೂನಿಯರ್, “ಮೂರು ಸ್ವತಂತ್ರ ಲೇಸರ್—ಕೇಂದ್ರಿತ ಸಂಸ್ಥೆಗಳಾಗಬೇಕೆಂಬ ಜಿಇದ ಯೋಜನೆಯಲ್ಲಿ ಇಂದು ಪ್ರಮುಖ ಮೈಲುಗಲ್ಲನ್ನು ಸಾಧಿಸಿದ್ದೇವೆ. ಜಿಇದ ಬಹು-ಬಿಲಿಯನ್ ಡಾಲರ್ ಜಾಗತಿಕ ಬ್ರ್ಯಾಂಡ್‍ಅನ್ನು ವರ್ಧಿಸುವುದರಿಂದ ನಮಗೆ ನಮ್ಮ ಕಡೆಯ ಮಾರುಕಟ್ಟೆಗಳಿಂದ ಸ್ಪರ್ಧಾತ್ಮಕವಾದ ಲಾಭವಾಗುವುದರ ಜೊತೆಗೆ ಭವಿಷ್ಯತ್ತಿನಲ್ಲಿ ಈ ವ್ಯಾಪಾರಗಳು ಗೆಲ್ಲುವುದಕ್ಕೂ ಅವಕಾಶವಾಗುತ್ತದೆ. ಉತ್ಕಂಟತೆ ಹಾಗೂ ಆವಿಷ್ಕಾರದ ಆಧಾರದ ಮೇಲೆ ನಿರ್ಮಾಣವಾಗಿರುವ ಈ ಬ್ರ್ಯಾಂಡುಗಳು ಕಾರ್ಯನಿರ್ವಹಿಸುವಂತಹ ಮತ್ತು ನಮ್ಮ ಗ್ರಾಹಕರು ಜಿಇದಲ್ಲಿ ಇರಿಸಿರುವ ಮೌಲ್ಯದ ಬಲಗಳ ಮುಖ್ಯ ಸ್ಮರಣಗಳನ್ನು ಒದಗಿಸುವಂತಹ ಜಗತ್ತಿನ ನಿರ್ಮಾಣದ ನಮ್ಮ ಧ್ಯೇಯೇದ್ದೇಶವನ್ನು ಮುಂದುವರಿಸುತ್ತೇವೆ.”ಎಂದು ಹೇಳಿದರು. 

2023ರ ಆರಂಭದಲ್ಲಿ ಜಿಇ ಹೆಲ್ತ್‍ಕೇರ್ ನ ತೆರಿಗೆ-ಮುಕ್ತ ಸ್ಪಿನ್-ಆಫ್‍ಅನ್ನು ಅನುಷ್ಠಾನಗೊಳಿಸಿ ರೋಗಿ ಫಲಿತಾಂಶಗಳನ್ನು ಸುಧಾರಿಸುವ ಮತ್ತು ಗಂಭೀರವಾದ ರೋಗಿ ಹಾಗೂ ವೈದ್ಯಕೀಯ ಸವಾಲುಗಳನ್ನು ಎದುರಿಸುವಂತಹ ನಿಖರ ಆರೋಗ್ಯದಲ್ಲಿ ಆವಿಷ್ಕಾರವನ್ನು ಮುನ್ನಡೆಸುವ ಸ್ವತಂತ್ರ ಸಂಸ್ಥೆಯನ್ನು ರಚಿಸಲು ಜಿಇ ಉದ್ದೇಶಿಸಿದೆ. 100-ವರ್ಷಗಳಿಗಿಂತ ಹೆಚ್ಚಿನ ಅವಧಿಯ ಇತಿಹಾಸದ ಮೇಲೆ ನಿರ್ಮಾಣಗೊಂಡಿರುವ ಜಿಇ ಹೆಲ್ತ್‍ಕೇರ್‍ನ ಹೆಸರು ಮತ್ತು ಮಾನೋಗ್ರಾಮ್ ಸುರಕ್ಷತೆ, ಗುಣಮಟ್ಟ, ವಿಶ್ವಸನೀಯತೆ ಮತ್ತು ಆವಿಷ್ಕಾರದ ದೀರ್ಘ ಬ್ಯಾಡ್ಜ್ ಆಗಿರಲಿದೆ. ಜಿಇ ಹೆಲ್ತ್‍ಕೇರ್ ನ ಹೊಸ ಬ್ರ್ಯಾಂಡ್ ಬಣ್ಣಕ್ಕೆ “ಕಂಪ್ಯಾಶನ್ ಪರ್ಪಲ್”ಎಂದು ಹೆಸರಿಡಲಾಗಿದ್ದು ಇದು ಹೆಚ್ಚಿನ ಮಾನವೀಯತೆ ಮತ್ತು ಪ್ರೇಮ ಹಾಗೂ ಇನ್ನೂ ದೊಡ್ಡ ವೈಶಿಷ್ಟ್ಯತೆಯ ಸಾಧನೆಯನ್ನು ಪ್ರತಿಫಲಿಸುತ್ತದೆ. ನಾಲ್ಕು ದಶಲಕ್ಷ ಉತ್ಪನ್ನ ಅನುಷ್ಠಾನಗಳು ಮತ್ತು ವಾರ್ಷಿಕ ಎರಡು ಬಿಲಿಯನ್‍ಗಿಂತ ಹೆಚ್ಚಿನ ರೋಗಿ ತಪಾಸಣೆಯೊಂದಿಗೆ ಇದು ರೋಗಿ ಆರೈಕೆಯ ಮುಂಚೂಣಿ ಸರಬರಾಜುದಾರ ಸಂಸ್ಥೆಯಾಗಿ ಮುಂದುವರಿಯುತ್ತದೆ.

2024ರ ಆರಂಭದಲ್ಲಿ ಜಿಇದ ಶಕ್ತಿ ವ್ಯಾಪಾರಗಳ ಪೋರ್ಟ್ ಪೋಲಿಯೊ ಆದ ಮತ್ತು ತನ್ನ ಗ್ರಾಹಕರೊಡಗೂಡಿ ಜಗತ್ತಿನ ವಿದ್ಯುಚ್ಛಕ್ತಿ ಸರಬರಾಜಿನ ಮೂರನೇ ಒಂದು ಭಾಗವನ್ನು ಒದಗಿಸುವ ಹಾಗೂ ವಿಶ್ವಸನೀಯ, ಕೈಗೆಟುಕುವ, ಮತ್ತು ದೀರ್ಘಕಾಲ ಉಳಿಯುವಂತಹ ಶಕ್ತಿಗೆ ಮಾರ್ಗವರ್ಧನೆ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸುವ ಜಿಇ ವರ್ನೋವಾದ ತೆರಿಗೆ-ಮುಕ್ತ ಸ್ಪಿನ್-ಆಫ್‍ನ ಅನುಷ್ಠಾನವನ್ನು ಜಿಇ ಯೋಜಿಸಿದೆ. ಹೊಸ ಹೆಸರು, “verde”  ಮತ್ತು “verdant”  ಪದಗಳ ಸಂಯೋಜನೆಯಾದ “ver”ದಿಂದ ತೆಗೆದುಕೊಳ್ಳಲಾಗಿದ್ದು ಇದು ಭೂಮಿಯ ಹಸಿರು ಮತ್ತು ನೀಲಿ ವರ್ಣಗಳನ್ನು ಸೂಚಿಸುತ್ತದೆ. “nova,” ಎಂಬ ಪದವು ಲ್ಯಾಟಿನ್‍ನ “novus,” ಅಥವಾ ಹೊಸತು ಎಂಬುದರಿಂದ ತೆಗೆದುಕೊಳ್ಳಲಾಗಿದ್ದು ಇದು, ಜಿಇ ವರ್ನೋವಾ ಒದಗಿಸುವುದಕ್ಕೆ ನೆರವಾಗುವ ಕಡಿಮೆ ಇಂಗಾಲ ಶಕ್ತಿಯ ಹೊಸ ಮತ್ತು ವಿನೂತನ ಯುಗವನ್ನು ಸೂಚಿಸುತ್ತದೆ. ಈ ಗುಣವೈಶಿಷ್ಟ್ಯತೆಗಳು ಜಿಇ ವರ್ನೋವಾದ ಹೊಸ “ಎವರ್ ಗ್ರೀನ್” ಬ್ರ್ಯಾಂಡ್ ಬಣ್ಣದಲ್ಲೂ ಪ್ರತಿಫಲಿತಗೊಂಡಿವೆ. 7000ಕ್ಕಿಂತ ಹೆಚ್ಚಿನ ಗ್ಯಾಸ್ ಟರ್ಬೈನ್‍ಗಳು ಹಾಗೂ 400 GWಗಿಂತ ಹೆಚ್ಚಿನ ನವೀಕರಿಸಬಹುದಾದ ಶಕ್ತಿ ಸಾಧನದ ಅನುಷ್ಠಾನಿತ ಬೆಸ್‍ನೊಂದಿಗೆ, ಜಿಇ ವರ್ನೋವಾದ ಮಾನೋಗ್ರಾಮ್, ಗುಣಮಟ್ಟ, ಸಹಭಾಗಿತ್ವ, ಮತ್ತು ತನ್ನ ಗ್ರಾಹಕರೆಡೆಗೆ ಇರುವ ವಿಶ್ವಾಸಕ್ಕೆ ಸಂಸ್ಥೆಯ ಸುದೀರ್ಘ ಬದ್ಧತೆಯನ್ನು ನೆನಪಿಸುತ್ತದೆ.

ಇದನ್ನೂ ಓದಿ : Sonia Gandhi interrogation : ಸೋನಿಯಾ ಇಡಿ ವಿಚಾರಣೆ : 2 ಗಂಟೆ, 25 ಪ್ರಶ್ನೆ, ಜುಲೈ 25ಕ್ಕೆ ಸಮನ್ಸ್!

ಈ ಯೋಜಿತ ಸ್ಪಿನ್-ಆಫ್‍ಗಳ ನಂತರಗ್ ಜಿಇ, ಜಿಇ ಏರೋಸ್ಪೇಸ್ ಎಂದು ಕರೆಯಲ್ಪಡುವ ವೈಮಾನಿಕ-ಕೇಂದ್ರಿತ ಸಂಸ್ಥೆಯಾಗಿರುತ್ತದೆ. 39,400 ವಾಣಿಜ್ಯ ಹಾಗೂ 26,200 ಮಿಲಿಟರಿ ವಿಮಾನ ಇಂಜಿನ್‍ಗಳ ಅನುಷ್ಠಾನಿತ ಬೇಸ್‍ನೊಂದಿಗೆ ಸಂಸ್ಥೆಯು, ವಿಮಾನಗಳ ಭವಿಷ್ಯತ್ತನ್ನು ರೂಪಿಸುವ ಸಂದರ್ಭದಲ್ಲೇ ಐತಿಹಾಸಿಕ ಪುನಶ್ಚೇತನದ ಮೂಲಕ ಉದ್ಯಮಕ್ಕೆ ಬೆಂಬಲ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಜಿಇ ಮಾನೋಗ್ರಾಮ್, ಹೊಸ ಹೆಸರು, ಮತ್ತು ಹೊಸ ‘ವಾತಾವರಣ ನೀಲಿ(“atmosphere blue”))ಯ ಬ್ರ್ಯಾಂಡ್ ಬಣ್ಣವು ವಾತಾವರಣದ ಗರಿಷ್ಟ ಮಿತಿಯನ್ನು ಪ್ರತಿನಿಧಿಸಿ ಭವಿಷ್ಯತ್ತಿನ ಪೀಳಿಗೆಗಳಿಗಾಗಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಷೇತ್ರದಲ್ಲಿ ಸ್ಪರ್ಧಿಸುವ ಮತ್ತು ಕನಸುಕಾಣುವ ಆತ್ಮವಿಶ್ವಾಸದ ದೂರದೃಷ್ಟಿಯನ್ನು ನೀಡುವುದರ ಜೊತೆಜೊತೆಗೇ ವೈಮಾನಿಕ ಕ್ಷೇತ್ರದಲ್ಲಿ ಬ್ರ್ಯಾಂಡ್‍ನ ಬಲವಾದ ಅಸ್ತಿತ್ವವನ್ನು ಕಾಪಾಡಿಕೊಳ್ಳಲಿದೆ. ಯೋಜಿತ ಪ್ರತ್ಯೇಕರಣಗಳ ನಂತರ, ಜಿಇ ಏರೋಸ್ಪೇಸ್, ಜಿಇ ವ್ಯಾಪಾರಚಿಹ್ನೆ(trademark)ಯ ಮಾಲೀಕತ್ವ ಪಡೆದುಕೊಳ್ಳಲಿದ್ದು ಇತರ ಸಂಸ್ಥೆಗಳಿಗೆ ದೀರ್ಘಾವಧಿ ಪರವಾನಗಿಗಳನ್ನು ಒದಗಿಸಲಿದೆ.

ಜಿಇದ ಚೀಫ್ ಮಾರ್ಕೆಟಿಂಗ್ ಆಫಿಸರ್ ಲಿಂಡಾ ಬಾಫ್, “ಕಳೆದ ಆರು ತಿಂಗಳ ಅವಧಿಯಲ್ಲಿ, ನಮ್ಮ ಯೋಜಿತ ಭವಿಷ್ಯತ್ತಿನ ಸಂಸ್ಥೆಗಳಿಗಾಗಿ ಜಿಇ ಬ್ರ್ಯಾಂಡ್‍ನ ಅತಿಸೂಕ್ಷ್ಮ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ನಾವು ದೀರ್ಘವಾದ, ಗ್ರಾಹಕ-ನಿರ್ದೇಶಿತ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ಸಾವಿರಾರು ಸಂವಾದಗಳಿಂದ ಪಡೆದುಕೊಂಡ ಮಾಹಿತಿ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ, ಜಿಇ ಹೆಸರು ಮತ್ತು ನಮ್ಮ ಶತಮಾನಕ್ಕಿಂತ ಹಳೆಯದಾದ ಮಾನೋಗ್ರಾಮ್, ಆವಿಷ್ಕಾರ, ಜಾಗತಿಕ ಗ್ರಾಹಕರಿಂದ ವಿಶ್ವಾಸದ ಚಿಹ್ನೆ, ನಮ್ಮ ತಂಡದ ಹೆಮ್ಮೆ ಮತ್ತು ಭವಿಷ್ಯತ್ತಿನ ನಾಯಕರುಗಳಿಗೆ ಪ್ರತಿಭಾ ಆಯಸ್ಕಾಂತದ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂಬುದು ಸ್ಪಷ್ಟವಾಯಿತು. ಈ ಭವಿಷ್ಯತ್ತಿನ ವ್ಯಾಪಾರಗಳು ಜಿಇದ ಆವಿಷ್ಕಾರದ ಡಿಎನ್‍ಎ ಮೇಲೆ ನಿರ್ಮಾಣವಾಗುತ್ತಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ.”ಎಂದರು.

ಈ ಪ್ರತ್ಯೇಕ ಸಂಸ್ಥೆಗಳನ್ನು ರಚಿಸುವ ಮೂಲಕ ಪ್ರತಿಯೊಂದು ಸಂಸ್ಥೆಯೂ ಹೆಚ್ಚಿನ ಗಮನಕೇಂದ್ರೀಕರಣ, ಅವಶ್ಯಕತೆಗೆ ತಕ್ಕ ಬಂಡವಾಳ ನಿಯೋಜನೆ, ಮತ್ತು ದೀರ್ಘಾವಧಿ ಬೆಳವಣಿಗೆ ಹಾಗೂ ಮೌಲ್ಯಗಳನ್ನು ಮುನ್ನಡೆಸುವುದಕ್ಕಾಗಿ ತಂತ್ರಗಳ ಬದಲಾವಣೆಯ ಲಾಭವನ್ನು ಪಡೆದುಕೊಳ್ಳುತ್ತದೆ.

ಇಂಟರ್ ಬ್ರ್ಯಾಂಡ್ Best Global Brands 2021 2021ನ ಪ್ರಕಾರ 

ಈ ಯೋಜನೆಗಳು ಜಗತ್ತಿನ ಕೆಲವು ಭಾಗಗಳಲ್ಲಿ ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಲಾದ ಸಮಾಲೋಚನೆಗಳ ಫಲಿತಾಂಶಕ್ಕೆ ಒಳಪಟ್ಟಿರುತ್ತವೆ.

ಭವಿಷ್ಯಮುಖಿ ಹೇಳಿಕೆಗಳಿಗೆ ಕುರಿತಂತೆ ಎಚ್ಚರಿಕೆ

ಈ ದಾಖಲೆಯು ಭವಿಷ್ಯತ್ತಿನ ಘಟನೆಗಳಿಗೆ, ಅವುಗಳ ಸ್ವರೂಪದಿಂದ, ವಿವಿಧ ಪ್ರಮಾಣಗಳಲ್ಲಿ ಅನಿಶ್ಚಿತವಾಗಿರುವ ವಿಷಯಗಳಿಗೆ ಸಂಬಂಧಿಸಿದ ಭವಿಷ್ಯಮುಖಿ ಹೇಳಿಕೆಗಳನ್ನು ಒಳಗೊಂಡಿದೆ. ವಸ್ತುರೂಪದಲ್ಲಿ ನಮ್ಮ ವಾಸ್ತವ ಭವಿಷ್ಯತ್ತಿನ ಫಲಿತಾಂಶಗಳು, ನಮ್ಮ ಭವಿಷ್ಯಮುಖಿ ಹೇಳಿಕೆಗಳಲ್ಲಿ ವ್ಯಕ್ತಪಡಿಸಲಾದ ಅನಿಶ್ಚಿತತೆಗಳಿಗಿಂತ ಯಾವ ರೀತಿ ಭಿನ್ನವಾಗಿರುತ್ತವೆ ಎಂಬ ವಿವರಗಳಿಗೆ https://www.ge.com/investor-relations/important-forward-looking-statemen... ಮತ್ತು ನಮ್ಮ ಎಸ್‍ಇಸಿ ಫೈಲಿಂಗ್ಸ್‍ಅನ್ನು  ನೋಡಿ.ನಮ್ಮ ಭವಿಷ್ಯಮುಖಿ ಹೇಳಿಕೆಗಳನ್ನು ನವೀಕರಿಸುವ ವಾಗ್ದಾನವನ್ನು ನಾವು ಮಾಡುವುದಿಲ್ಲ.

 

Trending News