ಪೇರಳೆ ಎಲೆಯನ್ನು ಈ ರೀತಿ ಸೇವಿಸಿದರೆ ಬೇರಿನಿಂದಲೇ ಗುಣಮುಖವಾಗುವುದು ಈ ರೋಗ !

ಪೇರಳೆ ಎಲೆಗಳನ್ನು ಸೇವಿಸುವ ಮೂಲಕ ಅನೇಕ ರೋಗಗಳನ್ನು ಬುಡದಿಂದಲೇ ನಿರ್ಮೂಲನೆ ಮಾಡಬಹುದು. 

Written by - Ranjitha R K | Last Updated : Oct 19, 2024, 03:08 PM IST
  • ಪೇರಳೆಯಂತೆಯೇ ಅದರ ಎಲೆಗಳು ಕೂಡಾ ಆರೋಗ್ಯಕ್ಕೆ ತುಂಬಾ ಆರೋಗ್ಯಕರ
  • ಪೇರಳೆ ಎಲೆ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ.
  • ಈ ರೋಗಗಳನ್ನು ನಿಯಂತ್ರಿಸಲು ಸಹಕಾರಿ ಪೇರಳೆ ಎಲೆ
ಪೇರಳೆ ಎಲೆಯನ್ನು ಈ ರೀತಿ ಸೇವಿಸಿದರೆ ಬೇರಿನಿಂದಲೇ ಗುಣಮುಖವಾಗುವುದು  ಈ ರೋಗ ! title=

ಬೆಂಗಳೂರು : ಪೇರಳೆಯಂತೆಯೇ ಅದರ ಎಲೆಗಳು ಕೂಡಾ ಆರೋಗ್ಯಕ್ಕೆ ತುಂಬಾ ಆರೋಗ್ಯಕರವಾಗಿದೆ.ಪೇರಳೆ ಎಲೆ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಮುಖ್ಯವಾಗಿ ಇದು ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳಂತಹ ಪೋಷಕಾಂಶಗಳ ಆಗರವಾಗಿದೆ. ಈ ಎಲೆಗಳನ್ನು  ನೇರವಾಗಿ ಅಗಿದು ಸೇವಿಸಬಹುದು.ಅಥವಾ ಪೇರಳೆ ಎಲೆಗಳನ್ನು ಬಳಸಿ ತಯಾರಿಸಿದ ಕಷಾಯವನ್ನು ಕೂಡಾ ಸೇವಿಸಬಹುದು. 

ಈ ರೋಗಗಳನ್ನು ನಿಯಂತ್ರಿಸಲು ಸಹಕಾರಿ ಪೇರಳೆ ಎಲೆ :
ರಕ್ತದಲ್ಲಿನ ಸಕ್ಕರೆ ನಿಯಂತ್ರಣ : 

ಪೇರಳೆ ಎಲೆಗಳ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಇದರ ಎಲೆಗಳು ಪಾಲಿಫಿನಾಲ್ ಗುಣಲಕ್ಷಣಗಳನ್ನು ಹೊಂದಿದ್ದು, ಆಹಾರದಿಂದ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದು ಬ್ಲಡ್ ಶುಗರ್ ಏರುವುದನ್ನು ತಡೆಯುತ್ತದೆ.  

ಇದನ್ನೂ ಓದಿ  : ಹೃದಯಾಘಾತವಾಗುವ ಒಂದು ವಾರಕ್ಕೂ ಮುನ್ನ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ!!

ಚರ್ಮ ಮತ್ತು ಕೂದಲಿನ ಆರೋಗ್ಯಕ್ಕಾಗಿ : 
ಪೇರಳೆ ಎಲೆಗಳಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ತ್ವಚೆ ಮತ್ತು ಕೂದಲಿನ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಚರ್ಮ ಮತ್ತು ಕೂದಲಿನ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹೃದ್ರೋಗವನ್ನು ತಡೆಯುತ್ತದೆ :
ಪೇರಳೆ ಎಲೆಗಳ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಇದರೊಂದಿಗೆ ಹೃದ್ರೋಗವನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ.  

ಇದನ್ನೂ ಓದಿ  : ಚಳಿಗಾಲದಲ್ಲಿಯೇ ಸಿಗುವ ಈ ಹಣ್ಣನ್ನು ಸೇವಿಸಿದರೆ ಚುರುಕಾಗುವುದು ದೃಷ್ಟಿ!ವರ್ಷಾನುಗಟ್ಟಲೆಯಿಂದ ಧರಿಸುತ್ತಿದ್ದ ಕನ್ನಡಕ್ಕಕ್ಕೂ ಹೇಳಬಹುದು ಗುಡ್ ಬೈ

ರೋಗನಿರೋಧಕ ಶಕ್ತಿಯನ್ನು  ವೃದ್ದಿ :
ದೇಹದ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾದರೆ ಪೇರಳೆ ಎಲೆಗಳ ನೀರನ್ನು ಕುಡಿಯಬಹುದು. ಇದು ಉತ್ತಮ ಪ್ರಮಾಣದ ವಿಟಮಿನ್ ಸಿಯನ್ನು  ಹೊಂದಿರುತ್ತದೆ. ಇದು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ದುರ್ಬಲ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವಲ್ಲಿ ಸಹಾಯ ಮಾಡುತ್ತದೆ. 

ಜೀರ್ಣಕಾರಿ ಸಮಸ್ಯೆ  ನಿವಾರಣೆಗೆ :  
ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು, ಪೇರಳೆ ಎಲೆಗಳ ಕಷಾಯವನ್ನು ಕುಡಿಯಬಹುದು. ಇದು ಫೈಬರ್‌ನ ಉತ್ತಮ ಮೂಲವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರೊಂದಿಗೆ, ಮಲಬದ್ಧತೆ, ಅಜೀರ್ಣ, ಅತಿಸಾರ ಮತ್ತು ಊತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಪೇರಳೆ ಎಲೆಗಳ ಕಷಾಯ : 
ಪೇರಳೆ ಎಲೆಗಳ ನೀರನ್ನು ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ 1 ಲೋಟ ನೀರು ಮತ್ತು ಕೆಲವು ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರು ಅರ್ಧದಷ್ಟು ಆದ ಮೇಲೆ ಫಿಲ್ಟರ್ ಮಾಡಿ ತಣ್ಣಗಾದ ನಂತರ ಕುಡಿಯಿರಿ.

(ಸೂಚನೆ :ಮೇಲಿನ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News