ತಣ್ಣಗಾದ ಚಪಾತಿ ತಿನ್ನೋದ್ರಿಂದ ಆರೋಗ್ಯ ಸುಧಾರಣೆ: ಆಶ್ಚರ್ಯವಾದ್ರೂ ಇದು ಸತ್ಯ!

ತಣ್ಣಗಾದ ಚಪಾತಿ ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ಸುಲಭವಾಗುತ್ತದೆ. ಇದಕ್ಕೆ ಕಾರಣವೆಂದರೆ ತಣ್ಣಗಾದ ಚಪಾತೊ ದೇಹಕ್ಕೆ ಪ್ರಯೋಜನಕಾರಿಯಾದ ಕೆಲವು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. 

Written by - Bhavishya Shetty | Last Updated : Jul 4, 2022, 02:19 PM IST
  • ತಣ್ಣಗಾದ ಚಪಾತಿ ತಿನ್ನೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು
  • ಬಿಪಿ ಮತ್ತು ಶುಗರ್ ನಿಯಂತ್ರಣ
  • ಹೊಟ್ಟೆನೋವು ಮಾಯವಾಗುತ್ತೆ, ಜೊತೆಗೆ ದೇಹದ ಶಕ್ತಿ ಹೆಚ್ಚಳವಾಗುತ್ತದೆ
ತಣ್ಣಗಾದ ಚಪಾತಿ ತಿನ್ನೋದ್ರಿಂದ ಆರೋಗ್ಯ ಸುಧಾರಣೆ: ಆಶ್ಚರ್ಯವಾದ್ರೂ ಇದು ಸತ್ಯ!  title=
Stale Bread

ತಾಜಾ ಮತ್ತು ಬಿಸಿಯಾದ ಚಪಾತಿಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಅನೇಕ ಬಾರಿ ಚಪಾತಿಗಳು ತಿಂದು ಉಳಿದರೆ ಅದನ್ನು ಮತ್ತೆ ತಿನ್ನೋದಕ್ಕೆ ಹಿಂಜರಿಯುತ್ತಾರೆ. ಇನ್ನು ಕೆಲ ಜನರು ಆಹಾರವನ್ನು ವ್ಯರ್ಥ ಮಾಡಲು ಇಷ್ಟಪಡುವಿದಿಲ್ಲ. ಆದ್ದರಿಂದ ಗಂಟೆಗಳ ಮೊದಲು ಬೇಯಿಸಿದ ಚಪಾತಿಯನ್ನು ಸಹ ಅವರು ತಿನ್ನಲು ಹಿಂಜರಿಯುವುದಿಲ್ಲ. ಚಪಾತಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ಅದರಲ್ಲೂ ತಣ್ಣಗಾದ ಚಪಾತಿ ತಿನ್ನುವುದು ಮತ್ತಷ್ಟು ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಗ್ರೇಟರ್ ನೋಯ್ಡಾದ ಜಿಮ್ಸ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಆಹಾರ ತಜ್ಞ ಡಾ. ಆಯುಷಿ ಯಾದವ್ ಈ ಬಗ್ಗೆ ಏನು ಹೇಳಿದ್ದಾರೆಂದು ತಿಳಿಯೋಣ.

ಇದನ್ನೂ ಓದಿ: Astro Tips: ಬೆಕ್ಕಿಗೆ ಸಂಬಂಧಿಸಿದ ಈ ಒಂದು ಸಂಗತಿ ನಿಮಗೆ ಕೋಟ್ಯಾಧಿಪತಿಯನ್ನಾಗಿಸಬಹುದು

ಬಿಪಿ ಮತ್ತು ಶುಗರ್ ನಿಯಂತ್ರಣ:
ತಣ್ಣಗಾದ ಚಪಾತಿ ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ಸುಲಭವಾಗುತ್ತದೆ. ಇದಕ್ಕೆ ಕಾರಣವೆಂದರೆ ತಣ್ಣಗಾದ ಚಪಾತೊ ದೇಹಕ್ಕೆ ಪ್ರಯೋಜನಕಾರಿಯಾದ ಕೆಲವು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. 

ಹೊಟ್ಟೆನೋವು ಮಾಯ: 
ತಣ್ಣಗಾದ ಚಪಾಯಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.  ಇದು ಮಲಬದ್ಧತೆ ಮತ್ತು ಆಮ್ಲೀಯತೆಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ತಣ್ಣಗಾದ ಚಪಾಯಿಯಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆಯ ರೋಗಗಳು ದೂರವಾಗುತ್ತವೆ.

ದೇಹದ ಉಷ್ಣತೆ ನಿಯಂತ್ರಣ:
ಬೇಸಿಗೆ ಕಾಲದಲ್ಲಿ, ತಣ್ಣಗಾದ ಚಪಾಯಿಯು ವರದಾನವೆಂದರೆ ತಪ್ಪಾಗಲಾರದು. ಏಕೆಂದರೆ ಅದು ತಾಪಮಾನವನ್ನು ನಿರ್ವಹಿಸುವ ಗುಣವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ಇದನ್ನು ಸೇವಿಸುವುದರಿಂದ ಹೀಟ್ ಸ್ಟ್ರೋಕ್‌ನಂತಹ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Railway Recruitment 2022: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಸುವರ್ಣಾವಕಾಶ

ದೇಹದ ಶಕ್ತಿ ಹೆಚ್ಚಳ: 
ತಣ್ಣಗಾದ ಚಪಾಯಿಯನ್ನು ಹಾಲಿನೊಂದಿಗೆ ಬೆರೆಸಿ ತಿನ್ನುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಅದಕ್ಕೆ ಹಳ್ಳಿಯಲ್ಲಿ ಮಕ್ಕಳು, ಮುದುಕರು, ಯುವಕರು ಇಷ್ಟಪಟ್ಟು ಹಾಲು, ಚಪಾಯಿ ತಿಂದು ಕಷ್ಟದ ಕೆಲಸ ಮಾಡುವುದನ್ನು ನೀವು ಆಗಾಗ ನೋಡಿರಬೇಕು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News