ಪುದೀನ ಎಲೆಯ ಔಷಧೀಯ ಗುಣಗಳು!

ಪುದೀನ ಎಲೆಗಳಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರ ಎಲೆಗಳು ವರ್ಷಪೂರ್ತಿ ಹಸಿರಾಗಿರುತ್ತವೆ. ಪುದೀನ ಸಸ್ಯದ ಪ್ರತಿಯೊಂದು ಭಾಗವು ಉಪಯುಕ್ತವಾಗಿದೆ.

Last Updated : Sep 7, 2019, 11:37 AM IST
ಪುದೀನ ಎಲೆಯ ಔಷಧೀಯ ಗುಣಗಳು! title=

ಪುದೀನ ಗುಣಲಕ್ಷಣಗಳು ಅಲರ್ಜಿ ಮತ್ತು ಆಸ್ತಮಾವನ್ನು ನಿವಾರಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಪುದೀನ ಎಲೆಗಳನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ಪುದೀನ ಸೇವನೆಯಿಂದ ಹಲವು ಪ್ರಯೋಜನಗಳಿವೆ.

ಪುದೀನ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ ..!

  • ಪುದೀನ ಅಲರ್ಜಿಯನ್ನು ನಿವಾರಿಸುತ್ತದೆ.
  • ಪುದೀನ ಉಸಿರಾಟದ ತೊಂದರೆ ನಿವಾರಿಸುತ್ತದೆ.
  • ಅಡುಗೆಯಲ್ಲಿ ಪುದೀನ ಸೇರಿಸುವುದರಿಂದ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ನಾಶವಾಗುತ್ತದೆ.
  • ಮಳೆಗಾಲ ಮತ್ತು ಚಳಿಗಾಲದಲ್ಲಿ ಪುದೀನ ಎಲೆಗಳನ್ನು ಸೇವಿಸುವುದರಿಂದ ಶೀತ ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ.
  • ಪುದೀನದಲ್ಲಿರುವ ವಿಟಮಿನ್ ಸಿ, ಡಿ, ಇ ಮತ್ತು ಬಿ ಹಾಗೂ ಕ್ಯಾಲ್ಸಿಯಂ ಮತ್ತು ರಂಜಕವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಪ್ರತಿದಿನ ಪುದೀನ ಎಲೆಗಳ ಚಹಾ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಬಹುದು.
  • ಚರ್ಮದಲ್ಲಿ ತುರಿಕೆ ಸಮಸ್ಯೆ ಇದ್ದಾಗ, ಪುದೀನ ಎಲೆಗಳನ್ನು ತೊಳೆದು ತುರಿಕೆ ಇರುವ ಜಾಗದಲ್ಲಿ ಉಜ್ಜುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.
  • ಕುದಿಯುತ್ತಿರುವ ನೀರಿಗೆ ಪುದೀನ ಎಲೆಗಳನ್ನು ಹಾಕಿ, ಸ್ವಲ್ಪ ಉಪ್ಪು ಬೆರೆಸಿ ಕಷಾಯ ತಯಾರಿಸಿ ಸೇವಿಸಿದರೆ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

Trending News