ಅಚ್ಚರಿಯ ಆರೋಗ್ಯ ಲಾಭಕ್ಕೆ ಬೆಳಗೆದ್ದು ಒಂದು ಮುಷ್ಟಿ ಹುರಿಗಡಲೆ ತಿನ್ನಿ

ಹುರಿಗಡಲೆಯಲ್ಲಿ  ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಮತ್ತು ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹುರಿಗಡಲೆಯಲ್ಲಿ ಫೈಬರ್ ಕೂಡಾ ಸಾಕಷ್ಟು ಸಿಗುತ್ತದೆ.

Written by - Ranjitha R K | Last Updated : May 16, 2021, 05:15 PM IST
  • ಬೆಳಗೆದ್ದು ಒಂದು ಮುಷ್ಟಿ ಹುರಿಗಡಲೆ ತಿಂದರೆ ಆರೋಗ್ಯಕ್ಕೆ ಹಿತ
  • ಜಸ್ಟ್ ಟೈಂ ಪಾಸ್ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತ ಹುರಿಗಡಲೆ
  • ಹುರಿಗಡಲೆಯ ಆರೋಗ್ಯ ಲಾಭದ ಎಲ್ಲಾ ಮಾಹಿತಿ ಇಲ್ಲಿದೆ
ಅಚ್ಚರಿಯ ಆರೋಗ್ಯ ಲಾಭಕ್ಕೆ ಬೆಳಗೆದ್ದು ಒಂದು ಮುಷ್ಟಿ ಹುರಿಗಡಲೆ ತಿನ್ನಿ

ನವದೆಹಲಿ  : ಟೈಂ ಪಾಸ್ ಗೆ ನಾವು ಕೆಲವೊಮ್ಮೆ ಹುರಿಗಡಲೆ (Roasted gram) ತಿನ್ನುತ್ತೇವೆ. ಕೆಲವರು ಹುರಿಗಡಲೆ ಅಂದ ಕೂಡಲೇ ಗ್ಯಾಸ್ ಎಂದು ಕೊಂಡು ನಗ್ತಾರೆ. ದೂರ ಹೋಗ್ತಾರೆ.  ಆದರೆ, ಬೆಳಗೆದ್ದು ಒಂದು ಮುಷ್ಟಿ ಹುರಿಗಡಲೆ ಹೀಗೆ ತಿನ್ನಿ. ಅದರಲ್ಲಾಗುವ ಹೆಲ್ತ್ ಲಾಭ (Health benefits) ಅಪಾರ. ಅವನ್ನೆಲ್ಲಾ ಒಂದೊಂದಾಗಿ ಹೇಳ್ತೇವೆ ಓದಿ.
 

ಹುರಿಗಡಲೆಯಿಂದಾಗುವ ಆರೋಗ್ಯ ಲಾಭ:-

1. ತಕ್ಷಣದ ಶಕ್ತಿ:
ಹುರಿಗಡಲೆಯಲ್ಲಿ (Roasted gram) ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಮತ್ತು ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹುರಿಗಡಲೆಯಲ್ಲಿ ಫೈಬರ್ (Fiber) ಕೂಡಾ ಸಾಕಷ್ಟು ಸಿಗುತ್ತದೆ. ಪ್ರೊಟೀನ್ ಮತ್ತು ಕಬ್ಬಿಣದಾಂಶ ಸಾಕಷ್ಟು ಸಿಗುವ ಕಾರಣ ಫಟಾಫಟ್ ಎನರ್ಜಿ(Energy)  ಸಿಗುತ್ತದೆ. 

ಇದನ್ನೂ ಓದಿ : ಆಲದ ಮರ ಗೊತ್ತು.! ಅದರ ಔಷಧೀಯ ಗುಣ ನಿಮಗೆ ಎಷ್ಟು ಗೊತ್ತು..?

2. ಹಾರ್ಮೊನ್ ಮಟ್ಟವನ್ನು ನಿಯಂತ್ರಿಸುತ್ತದೆ. 
ಇದರಲ್ಲಿ ಫೈಟೋ-ಅಸ್ಟ್ರೋಜೆನ್ ಮತ್ತು  ಆಂಟಿ ಆಕ್ಸಿಡೆಂಟ್ಸ್ ಇತ್ಯಾದಿ ಸಾಕಷ್ಟು ಇರುತ್ತದೆ. ಇದು ರಕ್ತದಲ್ಲಿ ಎಸ್ಟ್ರೋಜನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಮುಖ್ಯವಾಗಿ ಮಹಿಳೆಯರಲ್ಲಿ ಹಾರ್ಮೊನ್ ಅಸಮಾತೋಲವನ್ನು ತಡೆಯುತ್ತದೆ.  ಸ್ತನ ಕ್ಯಾನ್ಸರ್ (Breast cancer) ಅಪಾಯವನ್ನೂ ಕಡಿಮೆ ಮಾಡುತ್ತದೆ. 

3. ಗರ್ಭಿಣಿಯರಿಗೆ ಉಪಯುಕ್ತ
ಗರ್ಭಿಣಿಯರಲ್ಲಿ ವಾಂತಿ (Vomiting) ಸಮಸ್ಯೆ ಹೆಚ್ಚಿಗೆ ಇರುತ್ತದೆ. ಗರ್ಭಿಣಿಯರು ವಾಂತಿ ಮಾಡಿದಾಗ ಅದರ ಪರಿಣಾಮ ಹೊಟ್ಟೆಯಲ್ಲಿರುವ ಮಗುವಿನ ಮೇಲೂ ಉಂಟಾಗುತ್ತದೆ. ಈ ಸಮಸ್ಯೆ ಇದ್ದಾಗ ಹುರಿಗಡಲೆ ತಿಂದರೆ ತುಂಬಾ ಪರಿಣಾಮಕಾರಿ.

4. ಅನಿಮಿಯ ಸಮಸ್ಯೆ ನೀಗುತ್ತದೆ
ಹುರಿಗಡಲೆ ತಿಂದರೆ ಶರೀರದಲ್ಲಿ ರಕ್ತ ಹೀನತೆ ಉಂಟಾಗುವುದಿಲ್ಲ.ಜೊತೆಗೆ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಹುರಿಗಡಲೆಯಲ್ಲಿ ಕಬ್ಬಿಣದಾಂಶ ಹೆಚ್ಚಾಗಿರುತ್ತದೆ. ಹಾಗಾಗಿ ಅದು ದೇಹದಲ್ಲಿ ರಕ್ತ ಹೀನತೆ ಉಂಟಾಗಲು ಬಿಡುವುದಿಲ್ಲ.

ಇದನ್ನೂ ಓದಿ : Benefits of Milk-Dates : ಪುರುಷರೆ ಹಾಲಿನೊಂದಿಗೆ ಸೇವಿಸಿ ಖರ್ಜೂರ : ಇಲ್ಲಿದೆ ಅದರ ಅದ್ಬುತ ಪ್ರಯೋಜನಗಳು!

5.  ಮೂಳೆ ಬಲಗೊಳಿಸುತ್ತದೆ
ಹಾಲು ಮೊಸರಿನಲ್ಲಿ (Curd) ಯಾವ ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತದೆಯೋ ಅದೇ ಪ್ರಮಾಣದ ಕ್ಯಾಲ್ಸಿಯಂ ಹುರಿಗಡಲೆಯಲ್ಲಿ ಸಿಗುತ್ತದೆ. ಪ್ರತಿದಿನ ಒಂದು ಮುಷ್ಟಿ ಹುರಿಗಡಲೆ ತಿಂದರೆ ಮೂಳೆ ಬಲವಾಗುತ್ತದೆ.

6. ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ
ಹುರಿಗಡಲೆ ತಿಂದರೆ ರಕ್ತದಲ್ಲಿ ಬ್ಲಡ್ ಶುಗರ್ (Blood Sugar) ಲೆವೆಲ್ ನಿಯಂತ್ರಣದಲ್ಲಿರುತ್ತದೆ. ಡಾಕ್ಟರ್ಸ್ ಕೂಡಾ ಹುರಿಗಡಲೆ ತಿನ್ನುವಂತೆ ಶುಗರ್ ರೋಗಿಗಳಿಗೆ ಸಲಹೆ ನೀಡುತ್ತಾರೆ.  ಇದನ್ನು ದಿನವೂ ತಿಂದರೆ ಶುಗರ್ ಕಡಿಮೆಯಾಗುತ್ತದೆ.

ಇದನ್ನೂ ಓದಿ : Flax Seeds Benefits : BP ಸಮಸ್ಯೆ ಇರುವವರು ತಪ್ಪದೆ ಸೇವಿಸಿ ಅಗಸೆ ಬೀಜ! ಇಲ್ಲಿದೆ ಅದರ ಪ್ರಯೋಜನಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News